ಬ್ರೇಕಿಂಗ್: ಇದ್ದಕ್ಕಿಂದಂತೆ ಗೇರ್ ಬದಲಿಸಿದ ಸೇನೆ ! ಗಡಿಯಲ್ಲಿ ನಡೆಯುತ್ತಿವೆ ಮಹತ್ವದ ವಿದ್ಯಮಾನಗಳು !

ಬ್ರೇಕಿಂಗ್: ಇದ್ದಕ್ಕಿಂದಂತೆ ಗೇರ್ ಬದಲಿಸಿದ ಸೇನೆ ! ಗಡಿಯಲ್ಲಿ ನಡೆಯುತ್ತಿವೆ ಮಹತ್ವದ ವಿದ್ಯಮಾನಗಳು !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ಹಾಗೂ ಚೀನಾ ಗಡಿಯಲ್ಲಿ ಎರಡು ದೇಶಗಳು ಸೇನಾ ಜಮಾವಣೆಯನ್ನು ದಿನ ದಿನಕ್ಕೂ ಹೆಚ್ಚು ಮಾಡುತ್ತಿವೆ. ಎರಡು ದಿನಗಳ ಹಿಂದಷ್ಟೇ ಭಾರತ ದೇಶ ಮತ್ತಷ್ಟು ಸೈನಿಕರನ್ನು ಜಮಾವಣೆ ಮಾಡಿ ಚೀನಾ ದೇಶಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿತ್ತು.

ಒಂದು ಕಡೆ ಶಾಂತಿ ಮಾತುಕತೆಗೆ ಬದ್ಧರಾಗಿರುತ್ತೇವೆ ಎನ್ನುವ ಚೀನಾ ಸೇನಾ ಜಮಾವಣೆ ಮಾತ್ರ ಹೆಚ್ಚು ಮಾಡುತ್ತಿದೆ. ಇದನ್ನು ಕಂಡ ಭಾರತೀಯ ವಾಯುಪಡೆ ಸಾಲು ಸಾಲು ಗಸ್ತು ನಡೆಸುತ್ತಿದೆ. ಭಾರತ ದೇಶವು ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಮಿಲಿಟರಿ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಸುಖೋಯ್ -30 ಎಂಕೆಐ ಮತ್ತು ಮಿಗ್ -29 ಯುದ್ಧ ವಿಮಾನಗಳು ನಿರಂತರವಾಗಿ ಚಲನೆಯನ್ನು ಹೆಚ್ಚಿಸಿವೆ.

ಭಾರೀ ಸರಕು ವಿಮಾನ ಅಮೆರಿಕನ್ ಸಿ -17, ಸಿ -130 ಜೆ ಮತ್ತು ರಷ್ಯಾದ ಐಎಲ್ -76 ಮತ್ತು ಆಂಟೊನೊವ್ -32 ಮುಂಗಡ ವಾಯುಪಡೆಯ ನೆಲೆಗಳಲ್ಲಿ ಕಂಡುಬಂದಿದೆ. ಈ ವಿಮಾನಗಳನ್ನು ದೂರದ ಪ್ರದೇಶಗಳಿಂದ ಸೈನ್ಯ ಮತ್ತು ಯುದ್ಧ ಸಾಮಗ್ರಿಗಳನ್ನು ಸಾಗಿಸಲು ಬಳಸಲಾಗುತ್ತದೆ.

ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ಯುದ್ಧಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಪಾಚೆ ಹೆಲಿಕ್ಯಾಪ್ಟರ್ ಗಳನ್ನು ಬಳಸಲಾಗುತ್ತಿದೆ. ಹಲವಾರು ಸ್ಥಳಗಳಿಗೆ ಸೈನಿಕರನ್ನು ರವಾನಿಸಲು ವಾಯುಪಡೆಯು ಅಪಾಚೆ ಮತ್ತು ಚಿನೂಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದ್ದು ನಿರಂತರವಾಗಿ ಸೈನಿಕರನ್ನು ವಿವಿಧ ಸ್ಥಳಗಳಿಗೆ ರವಾನೆ ಮಾಡಲಾಗುತ್ತಿದೆ. ವಾಯುಪಡೆಯು ಈಗಾಗಲೇ ತನ್ನ ಮುಂಚೂಣಿ ಸುಖೋಯ್ 30 ಎಂಕೆಐ, ಜಾಗ್ವಾರ್, ಮಿರಾಜ್ 2000 ವಿಮಾನಗಳನ್ನು ಲೇಹ್ ಮತ್ತು ಶ್ರೀನಗರ ಸೇರಿದಂತೆ ಹಲವಾರು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ ಎಂಬುದನ್ನು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.