ಚೀನಾ ಕಟ್ಟಿಹಾಕಲು ಐತಿಹಾಸಿಕ ಮಹತ್ವದ ಒಪ್ಪಂದ ಮುಂದಿಟ್ಟ ಜಪಾನ್ ! ಒಂದಾಗಲಿವೆ ಬಲಾಢ್ಯ ರಾಷ್ಟ್ರಗಳು

ಚೀನಾ ಕಟ್ಟಿಹಾಕಲು ಐತಿಹಾಸಿಕ ಮಹತ್ವದ ಒಪ್ಪಂದ ಮುಂದಿಟ್ಟ ಜಪಾನ್ ! ಒಂದಾಗಲಿವೆ ಬಲಾಢ್ಯ ರಾಷ್ಟ್ರಗಳು

ನಮಸ್ಕಾರ ಸ್ನೇಹಿತರೇ, ಇದೀಗ ಭಾರತಕ್ಕೆ ಭರ್ಜರಿ ಸಿಹಿ ಸುದ್ದಿಯೊಂದು ಬಂದಿದೆ. ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ಭಾರತೀಯ ಸೇನೆಗೆ ಹಾಗೂ ಗುಪ್ತಚರ ಇಲಾಖೆಗಳಿಗೆ ಆನೆ ಬಲ ಬರುವಂತೆ ಕಾಣುತ್ತಿದೆ. ಒಂದು ವೇಳೆ ಭಾರತ ದೇಶವು ಈ ಒಪ್ಪಂದಕ್ಕೆ ಒಪ್ಪಿಕೊಂಡಲ್ಲಿ ಖಂಡಿತಾ ಚೀನಾ ದೇಶಕ್ಕೆ ಬುದ್ದಿ ಕಲಿಸಲು ಉಪಯೋಗಕಾರವಾಗಲಿದೆ. ಅಷ್ಟಕ್ಕೂ ಒಪ್ಪಂದವಾದರೂ ಏನು? ನಡೆಯುತ್ತಿರುವುದಾದರೂ ಏನು ಗೊತ್ತಾ?

ಸ್ನೇಹಿತರೇ, ಚೀನಾ ದೇಶ ಬಲಿಷ್ಠ ಸೇನೆಯನ್ನು ಹೊಂದಿರುವುದು ಸುಳ್ಳಲ್ಲ, ಅನುಭವದ ಕೊರತೆ ಇದ್ದರೂ ಕೂಡ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. (ಭಾರತಕ್ಕೆ ಇದರ ಚಿಂತೆಯಿಲ್ಲ, ಯಾಕೆಂದರೆ ಪರ್ವತಗಳ ಮಧ್ಯೆ ಯುದ್ಧ ನಡೆಸುವುದು ಸಾಮಾನ್ಯವಾದ ವಿಷಯವಲ್ಲ ಎಂದು ವಿಶ್ವದ ಹಲವಾರು ವರದಿಗಳು ಹೇಳಿವೆ). ಅದೇ ಕಾರಣಕ್ಕೆ ಚೀನಾ ಸೇನೆಯ ಮೇಲೆ ಕಣ್ಣಿಡುವುದು ಎಲ್ಲಾ ದೇಶಗಳಿಗೂ ಅತ್ಯಗತ್ಯವಾಗಿದೆ. ಚೀನಾ ದೇಶ ಹಲವಾರು ಬಲಿಷ್ಠ ಯುದ್ಧ ನೌಕೆಗಳನ್ನು ಹೊಂದಿರುವ ಕಾರಣ ಏಕ ಕಾಲದಲ್ಲಿ ದಕ್ಷಿಣ ಚೀನಾ ಸಮುದ್ರ ಹಾಗೂ ಹಿಂದೂ ಮಹಾ ಸಾಗರದಲ್ಲಿಯೂ ತನ್ನದೇ ಆದ ಕಾರ್ಯ ತಂತ್ರಗಳನ್ನು ರೂಪಿಸಿ ತಯಾರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ.

ಆದರೆ ಈ ಎಲ್ಲಾ ಚಲನ ವಲನಗಳನ್ನು ಒಂದು ದೇಶ ಗಮನಿಸಿ ಹತೋಟಿಯಲ್ಲಿಡಲು ಕಷ್ಟ. ಅದೇ ಕಾರಣಕ್ಕೆ ಜಪಾನ್ ಮಹತ್ವದ ಒಪ್ಪಂದದೊಂದಿಗೆ ಮುಂದೆ ಬಂದಿದೆ. ಹೌದು, ಈ ಒಪ್ಪಂದದ ಅನ್ವಯ ಜಪಾನ್ ತನ್ನ ರಕ್ಷಣಾ ಗುಪ್ತಚರ ಮಾಹಿತಿಯನ್ನು ಭಾರತೀಯ ಸೇನೆಯ ಜೊತೆ ಹಂಚಿಕೊಳ್ಳಲಿದೆ. ಇದರಿಂದ ಭಾರತ ಸೇನೆಗೆ ಚೀನಾ ದೇಶ ನೌಕಾ ಪಡೆಯ ಸಂಪೂರ್ಣ ಮಾಹಿತಿ ಸಿಗಲಿದ್ದು, ಸಮುದ್ರ ಸವಾಲುಗಳನ್ನು ಮೆಟ್ಟಿನಿಲ್ಲಲು ಇದು ಭಾರತಕ್ಕೆ ಬಹಳ ಸಹಕಾಲಿಯಾಗಲಿದೆ. ಅಷ್ಟೇ ಅಲ್ಲದೇ, ಇಡೀ ಚೀನಾ ಸೇನೆಯ ಪ್ರತಿಯೊಂದು ನಡೆಗಳು ಭಾರತಕ್ಕೆ ತಿಳಿದು ಬರುತ್ತವೆ. ಇದೇ ರೀತಿಯ ಒಪ್ಪಂದವನ್ನು ಆಸ್ಟ್ರೇಲಿಯಾ, ಯುಕೆ ದೇಶಗಳ ಜೊತೆಗೂ ಮಾಡಿಕೊಳ್ಳಲು ಮುಂದಾಗಿದೆ. ಅಷ್ಟೇ ಅಲ್ಲದೇ, ಅಮೇರಿಕ ದೇಶದ ಜೊತೆ ಈಗಾಗಲೇ ಈ ಒಪ್ಪಂದವನ್ನು ಜಪಾನ್ ಮಾಡಿಕೊಂಡಿದೆ.