ಮತ್ತೊಂದು ಹೊಸ ಪ್ರಸ್ತಾವನೆ ಇರಿಸಿದ ಗಿರಿಧರ್ ! ಏನು ಗೊತ್ತಾ? ಒಪ್ಪಿಕೊಳ್ಳುತ್ತಾ ಕರ್ನಾಟಕ? ಸಿಗಲಿದೆಯೇ ಸಿಹಿ ಸುದ್ದಿ?

ಮತ್ತೊಂದು ಹೊಸ ಪ್ರಸ್ತಾವನೆ ಇರಿಸಿದ ಗಿರಿಧರ್ ! ಏನು ಗೊತ್ತಾ? ಒಪ್ಪಿಕೊಳ್ಳುತ್ತಾ ಕರ್ನಾಟಕ? ಸಿಗಲಿದೆಯೇ ಸಿಹಿ ಸುದ್ದಿ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ರಾಜ್ಯದಲ್ಲಿ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ರವರು ತಿಳಿಸಿದ ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣದಿಂದ ಮೊದಲನೇ ಹಂತದ ಕ್ಲಿನಿಕಲ್ ಹಂತ ಯಶಸ್ವಿಯಾಗಿದೆ. ಇದರಿಂದ ಕರ್ನಾಟಕದ ಜನರಿಗೆ ಹೊಸ ಆಶಾಭಾವನೆ ಮೂಡಿರುವುದು ಸುಳ್ಳಲ್ಲ.

ಮೊದಲನೇ ಹಂತದಲ್ಲಿ 10 ಕರೋನ ಪೀಡಿತರು, ವಯೋಸಹಜ ಕಾಯಿಲೆ ಇದ್ದರೂ ಕೂಡ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಿರುವಾದ ಇದೀಗ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದಾರೆ ಎಂಬುದು ನಮಗೆ ತಿಳಿದಿದೆ. ಆದರೆ ಈ ಪ್ರಸ್ತಾವನೆಯ ಜೊತೆ ಮತ್ತೊಂದು ಮನವಿಯನ್ನು ಮಾಡಿದ್ದಾರೆ. ಹೌದು, ಒಂದು ವೇಳೆ ಹೀಗೆ ಆದಲ್ಲಿ ಕರ್ನಾಟಕದಲ್ಲಿ ಸೋಂಕಿತರನ್ನು ಗುಣಮುಖರನ್ನಾಗಿ ಮಾಡುವುದಷ್ಟೇ ಅಲ್ಲದೇ, ಸೋಂಕೇ ಬಾರದಂತೆ ತಡೆಯಲು ಸಾಧ್ಯವಾಗುತ್ತದೆ.

ಹೌದು ಸ್ನೇಹಿತರೇ, ಇದೀಗ ಹೊಸ ಪ್ರಸ್ತಾವನೆ ಇರಿಸಿರುವ ಗಿರಿಧರ್ ರವರು, ಈ ಔಷಧಿ ಸಂಪೂರ್ಣವಾಗಿ ಗಿಡಮೂಲಿಕೆಗಳಿಂದ ತಯಾರು ಮಾಡಲಾಗಿದ್ದು, ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ, ಆಲೋಪತಿ ಔಷಧಿ ತೆಗೆದುಕೊಳ್ಳುತ್ತಿದ್ದರೂ ಕೂಡ ಇದರಿಂದ ಯಾವುದೇ ತೊಂದರೆ ಇಲ್ಲ. ಆದ ಕಾರಣ, ಈ ಔಷಧಿಯನ್ನು ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕ ಹೊಂದಿರುವವರಿಗೆ ನೀಡ ಬೇಕು. ಇದರಿಂದ ಕರೋನ ಬರದಂತೆ ತಡೆಯಬಹುದು. ದಿನೇ ದಿನೇ ಸಂಖ್ಯೆಗಳು ಹೆಚ್ಚಾಗುತ್ತಿವೆ, ದೊಡ್ಡ ಸಂಖ್ಯೆಯಲ್ಲಿ ಔಷಧಿ ನೀಡಲು ಅವಕಾಶ ನೀಡಬೇಕು ಎಂದು ಪ್ರಸ್ತಾವನೆ ಮಾಡಿ ಮನವಿ ಸಲ್ಲಿಸಿದ್ದಾರೆ.