ಇದೀಗ ಹೀರೋ ಸರದಿ, ಚೀನಾ ಗೆ ಬುದ್ದಿ ಕಲಿಸಲು ಎಲ್ಲಾ ಕಂಪನಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಹೀರೋ ಕಂಪನಿ ಮಾಡಿದ್ದೇನು ಗೊತ್ತಾ?

ಇದೀಗ ಹೀರೋ ಸರದಿ, ಚೀನಾ ಗೆ ಬುದ್ದಿ ಕಲಿಸಲು ಎಲ್ಲಾ ಕಂಪನಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಹೀರೋ ಕಂಪನಿ ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ದೇಶದ ಎಲ್ಲೆಡೆ ಬಾರಿ ಯಶಸ್ಸಿನಿಂದ ಮುನ್ನುಗ್ಗುತ್ತಿರುವ ಅಭಿಯಾನಕ್ಕೆ ಸಾಲು ಸಾಲು ದಿಗ್ಗಜ ಕಂಪನಿಗಳ ಬೆಂಬಲ ದೊರೆಯುತ್ತಿದೆ. ಇದೀಗ ಈ ಸಾಲಿಗೆ ಹೀರೋ ಸೈಕಲ್ ಕಂಪನಿ ಸೇರಿಕೊಂಡಿದೆ. ಈ ನಿರ್ಧಾರ ಬಹಳ ವಿಶೇಷವಾಗಿದೆ. ಯಾಕೆ ಗೊತ್ತಾ? ಓದಿ ತಿಳಿಯುತ್ತದೆ.

ಹೌದು ಸ್ನೇಹಿತರೇ, ಈ ಅಭಿಯಾನಕ್ಕೆ ಕೈಜೋಡಿಸಿದ್ದ ದಿಗ್ಗಜ ಕಂಪನಿಗಳು ಹಲವಾರು ಆಮದು ಒಪ್ಪಂದಗಳನ್ನು ಇನ್ನು ಮುಂದೆ ಮಾಡುವುದಿಲ್ಲ ಎಂದಿದ್ದವು. ಇನ್ನು ಕೆಲವು ಕೆಲವು ತಿಂಗಳುಗಳಲ್ಲಿ ಅಥವಾ ವರ್ಷಗಳಲ್ಲಿ ಮಾಡಿಕೊಳ್ಳುತ್ತಿರುವ ಆಮದನ್ನು ನಿಲ್ಲಿಸುತ್ತೇವೆ ಎಂದಿದ್ದರು. ಆದರೆ ಹೀರೋ ಸೈಕಲ್ ಕಂಪನಿಯ ಎಂಡಿ ಪಂಕಜ್ ಮುಂಜಾಲ್ ಅವರು ನಾವು ಈಗಾಗಲೇ ಮಾಡಿ ಕೊಂಡಿರುವ 900 ಕೋಟಿ ರೂ ಮೌಲ್ಯದ ಒಪ್ಪಂದಗಳನ್ನು ವಾಪಸ್ಸು ತೆಗೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಈ ಆದೇಶ ಹೊರಡಿಸಿ ಮಾತನಾಡಿದ ಹೀರೋ ಸೈಕಲ್ ಕಂಪನಿಯ ಎಂಡಿ ಪಂಕಜ್ ಮುಂಜಾಲ್ ಅವರು ಸ್ವಾವಲಂಬಿ ಅಭಿಯಾನದ ಅಡಿಯಲ್ಲಿ ವಿಭಿನ್ನ ಭಾಗಗಳನ್ನು ಇನ್ನುಮುಂದೆ ಭಾರತದಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿ ಮಾಡಲಾಗುವುದು. ಭಾರತದಲ್ಲಿ ಕಂಪ್ಯೂಟರ್ ಅನ್ನು ತಯಾರಿ ಮಾಡುತ್ತಿರುವುವಾಗ ಸೈಕಲ್ ಅನ್ನು ತಯಾರಿಸಲು ಯಾಕೆ ಸಾಧ್ಯವಿಲ್ಲ? ಖಂಡಿತಾ ನಾವು ಇಲ್ಲಿಯೇ ತಯಾರು ಮಾಡಿ ತೋರಿಸುತ್ತೇವೆ ಎಂದರು. ಇದರಿಂದ ಚೀನಾ ದೇಶಕ್ಕೆ ಮತ್ತೊಂದು ಶಾಕ್ ಆಗಿದೆ. ಒಟ್ಟಿನಲ್ಲಿ ದಿನೇ ದಿನೇ ಈ ಅಭಿಯಾನಕ್ಕೆ ಬೆಂಬಲ ಹೆಚ್ಚಾಗುತ್ತಲೇ ಇದೆ.