ಭಾರತಕ್ಕೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದ ಇಸ್ರೇಲ್ ! ಸೇನೆಗೆ ಆನೆಬಲ ! ಏನು ಗೊತ್ತಾ?

ಭಾರತಕ್ಕೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದ ಇಸ್ರೇಲ್ ! ಸೇನೆಗೆ ಆನೆಬಲ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಇಸ್ರೇಲ್ ದೇಶ ಭಾರತದ ಮನವಿಗೆ ಅಸ್ತು ಎಂದಿದ್ದು ಮತ್ತೊಂದು ಸಿಹಿ ಸುದ್ದಿ ನೀಡಿದೆ. ಮೂಲಗಳ ಪ್ರಕಾರ ಇದು ಭಾರತೀಯ ವಾಯುಪಡೆಗೆ ಆನೆಬಲ ತಂದುಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಇದೇ ಅಸ್ತ್ರವನ್ನು ಬಳಸಿಕೊಂಡು ಭಾರತೀಯ ವಾಯುಪಡೆ ಗಡಿ ದಾಟಿ ನುಗ್ಗಿ ಆರ್ಭಟ ನಡೆಸಿತ್ತು.

ಹೌದು ಸ್ನೇಹಿತರೇ, ಭಾರತೀಯ ವಾಯುಪಡೆಯು ಕಳೆದ ಏರ್ ಸ್ಟ್ರೈಕ್ ನಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಮಿರಾಜ್ ಯುದ್ಧ ವಿಮಾನಗಳು ತಮ್ಮ ಆರ್ಭಟವನ್ನು ತೋರಿಸಿದ್ದವು, ಇದರಿಂದ ಭಾರತೀಯ ವಾಯುಪಡೆಯ ತಾಕತ್ತು ವಿಶ್ವಕ್ಕೆ ತಿಳಿದು ಬಂದಿತ್ತು. ಅಮೇರಿಕ ದೇಶದ ಅತ್ಯಾಧುನಿಕ ಎಫ್-೧೬ ಫೈಟರ್ ಒಂದನ್ನು ಕೂಡ ಇದೇ ಸಮಯದಲ್ಲಿ ಅಭಿನಂದನ್ ರವರು ಉಡೀಸ್ ಮಾಡಿದ್ದರು. ಇದೇ ಸಮಯದಲ್ಲಿ ಮಿರಾಜ್ ಯುದ್ಧ ವಿಮಾನಗಳಲ್ಲಿ ಇಸ್ರೇಲ್ ದೇಶದ ಸ್ಪೈಸ್ -೨೦೦೦ ಗಳನ್ನು ಬಳಸಲಾಗಿತ್ತು. SPICE ಎಂದರೆ ಸ್ಮಾರ್ಟ್, ನಿಖರವಾದ ಪರಿಣಾಮ, ವೆಚ್ಚ ಪರಿಣಾಮಕಾರಿ ಎಂದರ್ಥ.

ಇದೀಗ ಗಡಿಯಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಕಂಡು, ಭಾರತ ದೇಶ ಇದೇ ಸ್ಪೈಸ್ -೨೦೦೦ ಗಳನ್ನು ಮತ್ತಷ್ಟು ಆಮದು ಮಾಡಿಕೊಳ್ಳಲು ನಿರ್ಧರಿಸಿ ಇಸ್ರೇಲ್ ದೇಶದ ಮುಂದೆ ಪ್ರಸ್ತಾವ ಇರಿಸಿತ್ತು. ಇದೀಗ ಇಸ್ರೇಲ್ ದೇಶವು ಕೂಡ ಭಾರತದ ಬೇಡಿಕೆಗೆ ಒಪ್ಪಿಕೊಂಡು ಭಾರತಕ್ಕೆ ಸ್ಪೈಸ್ -೨೦೦೦ ಗಳನ್ನು ತುರ್ತು ಆಧಾರದ ಮೇಲೆ ಕಳುಹಿಸಿಕೊಡಲು ಮುಂದಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಇಂತಹ ಅಗತ್ಯವಾದ ಸಂದರ್ಭದಲ್ಲಿ ಭಾರತಕ್ಕೆ ಕೇಳಿದ ಕೂಡಲೇ ಒಪ್ಪಿಗೆ ನೀಡಿದ ನಮ್ಮ ಆಪ್ತಮಿತ್ರ ಇಸ್ರೇಲ್ ದೇಶಕ್ಕೆ ಅನಂತ ಅನಂತ ವಂದನೆಗಳು.