ಬಿಗ್ ಬ್ರೇಕಿಂಗ್: ಮತ್ತೊಂದು ದೊಡ್ಡ ಕ್ಷೇತ್ರದಲ್ಲಿ ಚೀನಾಗೆ ಹೆಣೆಯಲು ಮತ್ತೊಂದು ಬಲೆ ಹೆಣೆದ ಮೋದಿ ಸರ್ಕಾರ

ಬಿಗ್ ಬ್ರೇಕಿಂಗ್: ಮತ್ತೊಂದು ದೊಡ್ಡ ಕ್ಷೇತ್ರದಲ್ಲಿ ಚೀನಾಗೆ ಹೆಣೆಯಲು ಮತ್ತೊಂದು ಬಲೆ ಹೆಣೆದ ಮೋದಿ ಸರ್ಕಾರ

ನಮಸ್ಕಾರ ಸ್ನೇಹಿತರೇ,ಇದೀಗ ಭಾರತ ದೇಶವು ಗಡಿಯಲ್ಲಿ ಮಾತ್ರವಲ್ಲದೇ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಚೀನಾದ ಚೀನಾ ತಂತ್ರಕ್ಕೆ ಬಲೇ ಹೆಣೆಯುತ್ತಿದೆ. ಚೀನಾ ದೇಶದ ಹೆಡೆಮುರಿ ಕಟ್ಟಲು ಭಾರತ ಸರ್ಕಾರವಷ್ಟೇ ಅಲ್ಲಾ, ದಿಗ್ಗಜ ಕಂಪನಿಗಳು, ಜನ ಸಾಮಾನ್ಯರು ಕೂಡ ನಿರ್ಧಾರ ಮಾಡಿದ್ದಾರೆ. ಸರ್ಕಾರದ ಕುರಿತು ಮಾತನಾಡುವುದಾದರೆ ಮೋದಿ ನೇತೃತ್ವದ ಸರ್ಕಾರ ದಿನಕ್ಕೊಂದು ಕಠಿಣ ನಿರ್ಧಾರ ಘೋಷಣೆ ಮಾಡುತ್ತಿದೆ.

ಇದೀಗ ಇದೇ ರೀತಿಯ ಮತ್ತೊಂದು ನಿರ್ಧಾರ ಮಾಡಿರುವ ಕೇಂದ್ರ ಸರ್ಕಾರವು, ಚೀನಾ ದೇಶದಿಂದ ಆಮದು ಮಾಡಿಕೊಳ್ಳುವ ಎಲ್ಲಾ ವಿದ್ಯುತ್ ಉಪದಕರಣಗಳನ್ನು ಆಮದು ಮಾಡಿಕೊಳ್ಳದೇ ಇರಲು ನಿರ್ಧಾರ ಮಾಡಿದೆ. ಇದರ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಕೇಂದ್ರ ವಿದ್ಯುತ್ ಸಚಿವ ಆರ್.ಕೆ.ಸಿಂಗ್ ರವರು, ರಾಜ್ಯಗಳ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸಚಿವರೊಂದಿಗೆ ಸಭೆ ನಡೆಸುವಾಗ, ಚೀನಾ ಮತ್ತು ಪಾಕಿಸ್ತಾನದಿಂದ ವಿದ್ಯುತ್ ಉಪಕರಣಗಳ ಆಮದನ್ನು ಅನುಮತಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರಿಂದ ಭಾರತದಲ್ಲಿ ವಿದ್ಯುತ್ ಉಪಕರಣಗಳ ಸಮರ್ಪಕ ತಯಾರಿಕೆ ನಡೆಯುತ್ತದೆ, ಹೊರಗಿನಿಂದ ಯಾವುದೇ ಸರಕುಗಳನ್ನು ತರುವ ಅಗತ್ಯವಿಲ್ಲ. ನಾವು ತಯಾರಿಸದ ಯಾವುದಾದರೂ ಸಾಧನವಿದ್ದರೇ ಮಾತ್ರ ಇತರ ದೇಶಗಳಿಂದ ಆಮದು ಮಾಡಿಕೊಳ್ಳಿ. ಇದರಿಂದ ಅವಲಂಬನೆ ಕಡಿಮೆಯಾಗುತ್ತದೆ. ಇನ್ನು ಮುಂದೆ ಯಾವುದೇ ಕಂಪೆನಿಗಳಾಗಲಿ ಚೀನಾ ಹಾಗೂ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳಬಾರದು ಎಂದು ಆದೇಶ ಹೊರಡಿಸಿದ್ದಾರೆ.