ರಷ್ಯಾ-ಭಾರತ ಸ್ನೇಹದಿಂದ ಕಂಗಾಲಾಗಿ ರಷ್ಯಾ ವಿರುದ್ಧ ಕಠಿಣ ಹೆಜ್ಜೆ ಇಟ್ಟ ಚೀನಾ ! ಅಂತ್ಯ ಸನ್ನಿಹಿತ? ನಡದದ್ದೇನು ಗೊತ್ತಾ?

ರಷ್ಯಾ-ಭಾರತ ಸ್ನೇಹದಿಂದ ಕಂಗಾಲಾಗಿ ರಷ್ಯಾ ವಿರುದ್ಧ ಕಠಿಣ ಹೆಜ್ಜೆ ಇಟ್ಟ ಚೀನಾ ! ಅಂತ್ಯ ಸನ್ನಿಹಿತ? ನಡದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ವಿಶ್ವದ ಬಲಾಢ್ಯ ದೇಶಗಳ ಜೊತೆ ಖ್ಯಾತೆ ತೆಗೆಯುತ್ತಿದೆ. ಬಲಾಢ್ಯ ದೇಶಗಳಾದ ಭಾರತ, ಜಪಾನ್ ಜೊತೆ ಗಡಿ ಖ್ಯಾತೆ ಅಷ್ಟೇ ಅಲ್ಲದೇ, ತೈವಾನ್, ಫಿಲಿಪೈನ್ಸ್ ದೇಶಗಳ ಜೊತೆ ಕೂಡ ಇದೇ ಹಾದಿ ಹಿಡಿದಿದೆ. ಅಮೇರಿಕ ದೇಶದ ಜೊತೆ ಕೂಡ ಸಂಬಂಧ ಹದಗೆಡಿಸಿಕೊಂಡು ಒಮ್ಮೆಲೇ ಇಷ್ಟು ದೇಶಗಳ ಸವಾಲುಗಳಿಗೆ ಉತ್ತರ ನೀಡುವ ಹೀನಾಯ ಪರಿಸ್ಥಿತಿ ತಲುಪಿದೆ.

ಇಷ್ಟೆಲ್ಲ ಆದರೂ ಕೂಡ ಚೀನಾ ದೇಶ ಬುದ್ದಿ ಕಲಿತಿಲ್ಲ ಎಂಬುದು ಈ ಘಟನೆಯಿಂದ ಸಾಭೀತಾಗಿದೆ. ಹೌದು ಸ್ನೇಹಿತರೇ, ಚೀನಾ ದೇಶ ಇತ್ತೀಚಿನ ವರ್ಷಗಳಲ್ಲಿ ರಷ್ಯಾ ದೇಶದ ಜೊತೆ ಉತ್ತಮ ಬಾಂದವ್ಯ ಬೆಳೆಸಿತ್ತು. ಸಾಲು ಸಾಲು ಒಪ್ಪಂದಗಳನ್ನು ಮಾಡಿಕೊಂಡು ಸ್ನೇಹಿತರಂತೆ ಎರಡು ದೇಶಗಳು ಒಟ್ಟಾಗಿ ಹೆಜ್ಜೆ ಹಾಕಿದ್ದವು. ಆದರೆ ಭಾರತ ದೇಶದ ಗಡಿ ವಿಚಾರದಲ್ಲಿ ಹಾಗೂ ಭಾರತ ದೇಶದ ಮಿಲಿಟರಿ ಒಪ್ಪಂದ ಎಂದ ತಕ್ಷಣ ರಷ್ಯಾ ದೇಶವು, ಚೀನಾ ತಾಳಕ್ಕೆ ಕುಣಿಯದೇ ಭಾರತ ಎಂದಿಗೂ ನನಗೆ ಮಿತ್ರನೇ ಎಂಬುದನ್ನು ಸಾಬೀತು ಪಡಿಸಿತು. ಇಡೀ ವಿಶ್ವದ ಬಲಾಢ್ಯ ದೇಶಗಳು ಚೀನಾ ವಿರುದ್ಧ ನಿಂತಾಗ ರಷ್ಯಾ ಸಹಾಯಕ್ಕೆ ನಿಲ್ಲಬಹುದು ಎಂದು ಚೀನಾ ಅಂದಾಜು ಮಾಡಿತ್ತು. ಆದರೆ ಚೀನಾ ದೇಶದ ಎಲ್ಲಾ ಪ್ಲಾನ್ಗಳು ವ್ಯರ್ಥವಾದ ಮೇಲೆ ಇದೀಗ ರಷ್ಯಾ ದೇಶವನ್ನು ಕೆಣಕಿದೆ.

ಹೌದು ಸ್ನೇಹಿತರೇ, ಇದೀಗ ರಷ್ಯಾ ದೇಶದ ಜೊತೆ ಗಡಿ ಖ್ಯಾತೆ ತೆಗೆದಿರುವ ಚೀನಾ ರಷ್ಯಾದ ವ್ಲಾಡಿವೋಸ್ಟಾಕ್ ನಗರವು 1860 ಕ್ಕಿಂತ ಮೊದಲು ಚೀನಾದ ಭಾಗವಾಗಿತ್ತು, ಆದರೆ ನಂತರ ರಷ್ಯಾ ಅದನ್ನು ಚೀನಾದಿಂದ ತೆಗೆದುಕೊಂಡಿತು. 1860 ರಲ್ಲಿ ರಷ್ಯಾ ಏಕಪಕ್ಷೀಯ ಒಪ್ಪಂದದ ಮೂಲಕ ನಗರವನ್ನು ಚೀನಾದಿಂದ ವಶಪಡಿಸಿಕೊಂಡು, ಅದಕ್ಕೆ ಬ್ಲಾಡಿಕೊಸ್ಟೊವ್ ಎಂದು ಮರುನಾಮಕರಣ ಮಾಡಿತು ಎಂದು ಚೀನಾ ಸರ್ಕಾರೀ ಮಾಧ್ಯಮದ ಸಂಪಾದಕ ಟ್ವೀಟ್ ಮಾಡಿದ್ದಾರೆ. ಈ ಮಾಧ್ಯಮವಾದ ಸಂಪೂರ್ಣ ಕಂಟ್ರೋಲ್ ಚೀನಾ ಕಮ್ಯುನಿಸ್ಟ್ ಪಕ್ಷದ ಕೈಯಲ್ಲಿ ಇದೆ. ಆದರಿಂದ ಈ ಹೇಳಿಕೆಗೆ ಬಾರಿ ಮಹತ್ವ ನೀಡಲಾಗಿದ್ದು, ಚೀನಾ ದೇಶದ ನಡೆಗೆ ವಿಶ್ವವೇ ಒಂದು ಕ್ಷಣ ಅಚ್ಚರಿಗೊಂಡಿದೆ. ಅಮೇರಿಕ, ಭಾರತ, ವಿಯೆಟ್ನಾಮ್, ಜಪಾನ್, ಫ್ರಾನ್ಸ್, ಇಸ್ರೇಲ್ ದೇಶಗಳ ವಿವಾದದ ನಡುವೆ ರಷ್ಯಾ ದೇಶದ ಜೊತೆ ಖ್ಯಾತೆ ಎಂದರೇ, ಇದನ್ನು ಹುಚ್ಚಾಟ ಎನ್ನಬೇಕೋ ಅಥವಾ ಧೈರ್ಯ ಎನ್ನಬೇಕೋ ತಿಳಿಯುತ್ತಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.