ಬಿಸಿಸಿಐ ವಾದಕ್ಕೆ ಒಪ್ಪದೇ ಸ್ಪಷ್ಟ ಸಂದೇಶ ರವಾನಿಸಿದ ಕಿಂಗ್ಸ್ ಇಲೆವೆನ್ ಸಹ ಮಾಲೀಕ ! ಹೇಳಿದ್ದೇನು ಗೊತ್ತಾ?

ಬಿಸಿಸಿಐ ವಾದಕ್ಕೆ ಒಪ್ಪದೇ ಸ್ಪಷ್ಟ ಸಂದೇಶ ರವಾನಿಸಿದ ಕಿಂಗ್ಸ್ ಇಲೆವೆನ್ ಸಹ ಮಾಲೀಕ ! ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಬಾಯ್ಕಾಟ್ ಸದ್ದು ಬಿಸಿಸಿಐ ಕದ ತಟ್ಟುವ ಮಟ್ಟಕ್ಕೆ ಬೆಳೆದು ನಿಂತಿದೆ. ಮೊದಲಿಂದಲೂ ಚೀನಾ ದೇಶ ಮೂಲ ಕಂಪನಿಯಾದ ವಿವೊ ಕಂಪನಿಯ ಪ್ರಾಯೋಜಕತ್ವವನ್ನು ಕೈ ಬಿಡುವಂತೆ ಬಿಸಿಸಿಐ ಗೆ ಮನವಿಗಳ ಮಹಾ ಪೂರವೇ ಹರಿದು ಬಂದಿದೆ. ಆದರೆ ಸಭೆ ಮಾಡುತ್ತೇವೆ ಎಂದು ಹೇಳಿದ್ದ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ಇಲ್ಲಿಯವರೆಗೂ ನೀಡಿಲ್ಲ. ಇದರಿಂದ ಸಾಮಾನ್ಯವಾಗಿಯೇ ಬಿಸಿಸಿಐ ಮೇಲೆ ಒತ್ತಡ ಹೆಚ್ಚಾಗಿದೆ.

ಹೌದು ಸ್ನೇಹಿತರೇ, ಇಷ್ಟು ದಿವಸ ಹಲವಾರು ಬಾರಿ ಭಾರತದಲ್ಲಿ ಚೀನಾ ವಸ್ತುಗಳನ್ನು ನಿಲ್ಲಿಸಿ ಎಂಬ ಕೂಗು ಕೇಳಿ ಬಂದಿತ್ತಾದರೂ ಇಷ್ಟರ ಮಟ್ಟಿಗೆ ಸದ್ದು ಮಾಡಿರಲಿಲ್ಲ. ಆದರೆ ಈ ಬಾರಿ ಬಾರಿ ಜನ ಬೆಂಬಲದ ಜೊತೆ, ದಿಗ್ಗಜರ ಬೆಂಬಲ ಕೂಡ ಕೇಳಿ ಬಂದಿದೆ. ಇದೀಗ ಇದರ ಕುರಿತು ಧ್ವನಿ ಎತ್ತಿರುವ ಕಿಂಗ್ಸ್ ಇಲೆವೆನ್ ಸಹ-ಮಾಲೀಕ ನೆಸ್ ವಾಡಿಯಾ ರವರು ಮಾತನಾಡಿದ್ದಾರೆ. ಬಿಸಿಸಿಐ ವಾದವನ್ನು ನೇರವಾಗಿ ತಳ್ಳಿಹಾಕಿರುವ ನೆಸ್ ವಾಡಿಯಾ ರವರು, ಹೌದು ಮೊದಲಿಗೆ ನಾವು ಪ್ರಾಯೋಜಕರನ್ನು ಹುಡುಕಲು ಕಷ್ಟ ಆಗುತ್ತದೆ.

ಆದರೆ ಅವರ ಸ್ಥಾನವನ್ನು ತುಂಬುವ ಭಾರತೀಯ ಪ್ರಾಯೋಜಕರು ಇದ್ದಾರೆ ಎಂದು ನನಗೆ ಖಾತ್ರಿಯಿದೆ. ರಾಷ್ಟ್ರ ಮತ್ತು ನಮ್ಮ ಸರ್ಕಾರದ ಬಗ್ಗೆ ನಮಗೆಲ್ಲರಿಗೂ ಗೌರವ ಇರಬೇಕು ಮತ್ತು ಮುಖ್ಯವಾಗಿ ನಮಗಾಗಿ ಸೈನಿಕರ ಬಗ್ಗೆ ಗೌರವ ಇರಬೇಕು ಎಂದು ಹೇಳಿದರು. ದೇಶದ ಹಿತದೃಷ್ಟಿಯಿಂದ, ನಾವು ಐಪಿಎಲ್‌ನಿಂದ ಚೀನಾದ ಕಂಪನಿಗಳೊಂದಿಗೆ ಒಪ್ಪಂದವನ್ನು ಕೊನೆಗೊಳಿಸಬೇಕು, ದೇಶದ ಹಿತಾಸಕ್ತಿ ಮೊದಲು, ಹಣ ತದನಂತರ ಎಂದು ಉತ್ತರ ನೀಡಿದರು. ಇದು ಇಂಡಿಯನ್ ಪ್ರೀಮಿಯರ್ ಲೀಗ್, ಚೀನೀ ಪ್ರೀಮಿಯರ್ ಲೀಗ್ ಅಲ್ಲ. ಐಪಿಎಲ್ ಟೂರ್ನಿ ಯನ್ನು ಮಾದರಿಯಾಗಿ ಮುನ್ನೆಡೆಸಿ ದಾರಿ ತೋರಿಸಬೇಕು ಎಂದು ಹೇಳಿದ್ದಾರೆ.