ಚೀನಾಗೆ ಮರ್ಮಾಘಾತ ! ಹೊಸ ಶಪಥ ಮಾಡಿ ಆದೇಶ ಹೊರಡಿಸಿದ ಮತ್ತೊಂದು ದಿಗ್ಗಜ ಸಂಸ್ಥೆ ! ಏನು ಗೊತ್ತಾ?

ಚೀನಾಗೆ ಮರ್ಮಾಘಾತ ! ಹೊಸ ಶಪಥ ಮಾಡಿ ಆದೇಶ ಹೊರಡಿಸಿದ ಮತ್ತೊಂದು ದಿಗ್ಗಜ ಸಂಸ್ಥೆ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ಮತ್ತೊಂದು ಸಿಹಿ ಸುದ್ದಿ ಸಿಕ್ಕಂತಾಗಿದೆ. ಇಷ್ಟು ದಿವಸ ಎಲ್ಲರೂ ಚೀನಾ ದೇಶಕ್ಕೆ ಬುದ್ದಿ ಕಲಿಸಬೇಕು ಎಂದು ಅಭಿಯಾನಗಳನ್ನು ಆರಂಭಿಸಿದಕ್ಕೂ ಪ್ರತಿಫಲಗಳು ದೊರೆಯಲಾರಂಭಿಸಿವೆ. ಮೊನ್ನೆಯಷ್ಟೇ ದಿಗ್ಗಜ ಪ್ರೆಸ್ಟೀಜ್ ಕಂಪನಿ ಚೀನಾ ದೇಶದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಆದೇಶ ಹೊರಡಿಸುವ ಮೂಲಕ ಬಹಿರಂಗ ಬೆಂಬಲ ಸೂಚಿಸಿದ ಮಲ್ಟಿ ನ್ಯಾಷನಲ್ ಕಂಪನಿ ಆಗಿ ಹೊರಹೊಮ್ಮಿತ್ತು.

ಇದೀಗ ಈ ಅಭಿಯಾನಕ್ಕೆ ಆನೆಬಲ ಬಂದಾಂತಾಗಿದ್ದು, ದೇಶದಲ್ಲಿಯೇ ಅತಿದೊಡ್ಡ ಕಂಪೆನಿಗಳಲ್ಲಿ ಒಂದಾದ ಜಿಂದಾಲ್ ಸಂಸ್ಥೆ ಅಧಿಕೃತ ಘೋಷಣೆ ಮಾಡಿದೆ. ಈ ಮೂಲಕ ಚೀನಾ ದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಕುರಿತು ಹೊಸ ಶಪಥ ಮಾಡಿದೆ. ಹೌದು, ಜಿಂದಾಲ್ ಕಂಪನಿಯು ಸಿಮೆಂಟ್, ಸ್ಟೀಲ್, ಪವರ್ ಪ್ಲಾಂಟ್ ಗಳು ಸೇರಿದಂತೆ ಇನ್ನಿತರ ನಿರ್ಮಾಣ ವಸ್ತುಗಳ ತಯಾರಿಕೆಯಲ್ಲಿ ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶದಲ್ಲಿಯೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ.

ಇಷ್ಟೆಲ್ಲ ಕಾರ್ಖಾನೆಗಳನ್ನು ಹೊಂದಿರುವ ಜಿಂದಾಲ್ ಗ್ರೂಪ್ಸ್ ವರ್ಷಕ್ಕೆ ಬರೋಬ್ಬರಿ 400 ಮಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಚೀನಾ ದೇಶದಿಂದ ಆಮದು ಮಾಡಿಕೊಳ್ಳುತಿತ್ತು. ಇದರ ಕುರಿತು ಇದೀಗ ಟ್ವೀಟ್ ಮಾಡಿರುವ ಪರ್ತ್ ಜಿಂದಾಲ್ (ವ್ಯವಸ್ಥಾಪಕ ನಿರ್ದೇಶಕ), ಗಡಿಯಲ್ಲಿ ನಡೆದ ಘಟನೆ ನಾವು ಎಚ್ಚರಗೊಳ್ಳುವ ಕರೆ- ನಾವು ಜೆಎಸ್ಡಬ್ಲ್ಯೂ ಗ್ರೂಪ್ ಪ್ರಸ್ತುತ ಚೀನಾದಿಂದ ವರ್ಷಕ್ಕೆ 400 ಮಿಲಿಯನ್ ಡಾಲರ್ ನಿವ್ವಳ ಆಮದನ್ನು ಹೊಂದಿದ್ದೇವೆ. ಆದರೆ ಮುಂದಿನ ಎರಡು ವರ್ಷಗಳಲ್ಲಿ ಅದನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾರೆ. ಈ ಮೂಲಕ ಈ ಅಭಿಯಾನಕ್ಕೆ ಮತ್ತಷ್ಟು ಬೆಂಬಲ ಬಂದಂತಾಗಿದ್ದು, ದಿನೇ ದಿನೇ ಬೆಂಬಲ ಹೆಚ್ಚಾಗುತ್ತಿದೆ.