ಭಾರತೀಯರನ್ನು ಕಿಂಡಲ್ ಮಾಡಿದ ಚೀನಿ ಸಂಪಾದಕನಿಗೆ ಆನಂದ್ ಮಹಿಂದ್ರಾ ಸರಿಯಾದ ಉತ್ತರ ನೀಡಿ ಮನಗೆದ್ದದ್ದು ಹೇಗೆ ಗೊತ್ತಾ?

ಭಾರತೀಯರನ್ನು ಕಿಂಡಲ್ ಮಾಡಿದ ಚೀನಿ ಸಂಪಾದಕನಿಗೆ ಆನಂದ್ ಮಹಿಂದ್ರಾ ಸರಿಯಾದ ಉತ್ತರ ನೀಡಿ ಮನಗೆದ್ದದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತದ ದಿಗ್ಗಜ ಉದ್ಯಮಿಗಳಲ್ಲಿ ಒಬ್ಬರಾಗಿರುವ ಆನಂದ್ ಮಹಿಂದ್ರಾ ರವರು, ಚೀನಾ ದೇಶದ ಮುಖವಾಣಿ ಗ್ಲೋಬಲ್ ಟೈಮ್ಸ್ ಸಂಪಾದಕನಿಗೆ ತಕ್ಕ ಉತ್ತರ ನೀಡುವ ಮೂಲಕ ಭಾರತೀಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದರು. ಅಷ್ಟಕ್ಕೂ ನಡೆದದ್ದೇನು? ಆನಂದ್ ಮಹಿಂದ್ರಾ ರವರು ಉತ್ತರ ಹೇಗೆ ನೀಡಿದರು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಡೀಟೇಲ್ಸ್.

ಸ್ನೇಹಿತರೇ, ಭಾರತದಲ್ಲಿ ಚೀನಾ ದೇಶಕ್ಕೆ ತಕ್ಕ ಬುದ್ದಿ ಕಲಿಸಲು ಹಲವಾರು ಕಠಿಣ ನಿರ್ಧಾರ ತೆಗೆದು ಕೊಳ್ಳಲಾಗುತ್ತಿದೆ. ಇದನ್ನು ಕಂಡ ಗ್ಲೋಬಲ್ ಟೈಮ್ಸ್ ಸಂಸ್ಥಾಪಕ, ಹೂ ಶಿಜಿನ್ ರವರು, ಚೀನಾ ದೇಶದ ಜನರು ಭಾರತೀಯ ವಸ್ತುಗಳನ್ನು ಬಾಯ್ಕಾಟ್ ಮಾಡಲು ಬಯಸಿದರೇ, ಅವರಿಗೆ ಚೀನಾ ದೇಶದಲ್ಲಿ ಒಂದು ಭಾರತೀಯ ವಸ್ತುಗಳು ಕೂಡ ಸಿಗುವುದಿಲ್ಲ, ಭಾರತೀಯ ಸ್ನೇಹಿತರೇ ನಿಮ್ಮ ಬಳಿ ರಾಷ್ತ್ರೀಯತೆಗಿಂತ ಮುಖ್ಯವಾದದ್ದು ಏನಾದರು ಇರಬೇಕು ಎಂದು ಕಿಚಾಯಿಸಿದರು.

ಈ ಟ್ವೀಟ್ ಕಂಡು, ಆನಂದ್ ಮಹಿಂದ್ರಾ ರವರು, ಕೊಂಚ ಕಾರವಾಗಿಯೇ ಉತ್ತರ ನೀಡಿ ಈ ಮಾತುಗಳನ್ನು ಸವಾಲಾಗಿ ಸ್ವೀಕರಿಸುವುದಾಗಿ ಹೇಳಿದರು. ಹೌದು ಆನಂದ್ ಮಹಿಂದ್ರಾ ರವರು, ಈ ರೀತಿ ಬರೆದುಕೊಂಡರು, ಭಾರತಕ್ಕೆ ಈ ಟ್ವೀಟ್ ಅತ್ಯಂತ ಪರಿಣಾಮಕಾರಿ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮನ್ನು ಪ್ರಚೋ-ಸಿದ್ದಕ್ಕಾಗಿ ಧನ್ಯವಾದಗಳು. ನಾವು ಈ ಅವಕಾಶವನ್ನು ಸಾಬೀತುಪಡಿಸುತ್ತೇವೆ ಎಂದು ತಕ್ಕ ಉತ್ತರ ನೀಡಿದ್ದಾರೆ.