ಮೊದಲ ಬಾರಿ ಬಾಯ್ಕಾಟ್ ಅಭಿಯಾನಕ್ಕೆ ದಿಗ್ಗಜ ಭಾರತೀಯ ಕಂಪನಿ ಎಂಟ್ರಿ ! ಜನರ ಕೂಗಿಗೆ ಕೈ ಜೋಡಿಸಿ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಈಗಾಗಲೇ ಭಾರತದಲ್ಲಿ ಅತಿ ದೊಡ್ಡ ಮಾರುಕಟ್ಟೆ ಹೊಂದಿದ್ದ ಚೀನಾ ಕಂಪನಿಗಳು ಬಾಯ್ಕೋಟ್ ಅಭಿಯಾನಕ್ಕೆ ನಡುಗಿ ಹೋಗಿವೆ. ಕೆಲವು ಮೇಡ್ ಇನ್ ಇಂಡಿಯಾ ಎಂದು ಬೋರ್ಡ್ ಹಾಕುತ್ತಿವೆ, ಇನ್ನು ಕೆಲವು ಸದ್ದಿಲ್ಲದ್ದೇ ತಮ್ಮ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿಕೊಂಡು ಬಿಡುಗಡೆ ಮಾಡುತ್ತಿವೆ.
ಸ್ವದೇಶೀ ವಸ್ತುಗಳನ್ನು ಸಾಧ್ಯವಾದಷ್ಟು ಬಳಸಿ, ದಿನೇ ದಿನೇ ಇಲ್ಲಿಯೇ ವಸ್ತುಗಳನ್ನು ಉತ್ಪಾದಿಸೋಣ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ದೊಡ್ಡ ದೊಡ್ಡ ಅಭಿಯಾನಗಳನ್ನು ನಡೆಸುತ್ತಿದ್ದಾರೆ.

ಇದೀಗ ಜನರ ಈ ಧ್ವನಿಗೆ ದೊಡ್ಡ ದೊಡ್ಡ ಕಂಪನಿಗಳು ಕೈ ಜೋಡಿಸಲು ಆರಂಭಿಸಿವೆ. ಈ ಮೂಲಕ ಪ್ರತಿ ದಿನವೂ ಸ್ವದೇಶೀ ಭಾರತದ ಕನಸಿನಲ್ಲಿ ಹೊಸ ಹೊಸ ಭರವಸೆಗಳು ಹುಟ್ಟುಕೊಳ್ಳುತ್ತಿವೆ. ಇದೀಗ ಈ ಅಭಿಯಾನಕ್ಕೆ ದೇಶದ ಪ್ರತಿಷ್ಠಿತ ಸಂಸ್ಥೆ ಎಂಟ್ರಿ ಕೊಟ್ಟಿದೆ. ಗಡಿಯಲ್ಲಿ ನಮ್ಮ ಸೈನಿಕರನ್ನು ಕಳೆದು ಕೊಂಡಿರುವ ನಾವು ಚೀನಾ ದೇಶದಿಂದ ಯಾವುದೇ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಅಭಿಯಾನಕ್ಕೆ ಕೈ ಜೋಡಿಸಿದ ಮೊದಲ ಮಲ್ಟಿನ್ಯಾಷನಲ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೌದು ಸ್ನೇಹಿತರೇ, ಇದೀಗ ಭಾರತದಲ್ಲಿ ಅತಿದೊಡ್ಡ ಅಡುಗೆ ಉಪಕರಣಗಳ ತಯಾರಕ ಸಂಸ್ಥೆಯಾದ ಪ್ರೆಸ್ಟೀಜ್ ಕಂಪನಿಯು ಇದೀಗ ಈ ಅಭಿಯಾನಕ್ಕೆ ಕೈ ಜೋಡಿಸುವುದಾಗಿ ತಿಳಿಸಿ, ಇನ್ನು ಮುಂದೆ ನಮ್ಮ ಉತ್ಪಾದನೆಗೆ ಅಗತ್ಯವಾದ ಯಾವುದೇ ವಸ್ತುಗಳನ್ನು ಚೀನಾ ದೇಶದಿಂದ ಆಮದು ಮಾಡಿಕೊಳ್ಳುವುದಿಲ್ಲ, ಇಲ್ಲಿಯೇ ಆ ಕಚ್ಚಾ ವಸ್ತುಗಳನ್ನು ಉತ್ಪಾದಿಸಲು ಘಟಕ ಆರಂಭಿಸುತ್ತೇವೆ, ಅಲ್ಲಿಯವರೆಗೂ ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ ಎಂದು ಅಧಿಕೃತ ಆದೇಶ ಹೊರಡಿಸಿದೆ.

Post Author: Ravi Yadav