ಮತ್ತೊಂದು ಹಂತ ತಲುಪಿದ ಬಾಯ್ಕೋಟ್ ಚೀನಾ ! ಝೋಮೋಟೋ ಕಂಪನಿಗೆ ಶಾಕ್ ನೀಡಿದ ಉದ್ಯೋಗಿಗಳು ! ನಡೆದದ್ದೇನು ಗೊತ್ತಾ?

ಮತ್ತೊಂದು ಹಂತ ತಲುಪಿದ ಬಾಯ್ಕೋಟ್ ಚೀನಾ ಅಭಿಯಾನ ! ಝೋಮೋಟೋ ಕಂಪನಿಗೆ ಶಾಕ್ ನೀಡಿದ ಉದ್ಯೋಗಿಗಳು ! ನಡೆದ್ದನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ದೇಶದ ಎಲ್ಲೆಡೆ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಜನರು ನಿರ್ಧಾರ ಮಾಡಿದ್ದಾರೆ. ಮೊದಲಿಗೆ ಚೀನಾ ನಿರ್ಮಿತ ವಸ್ತುಗಳನ್ನು ಖರೀದಿ ಮಾಡಬೇಡಿ ಎಂದು ಆರಂಭವಾದ ಈ ಅಭಿಯಾನ, ಇದೀಗ ಚೀನಾ ನಿರ್ಮಿತ ಅಲ್ಲ, ಚೀನಾ ದೇಶದ ಬಂಡಾವಾಳವಿರುವ ಯಾವುದೇ ಆಪ್ಸ್, ಕಂಪನಿ ಗಳ ಜೊತೆ ವ್ಯವಹಾರ ಮಾಡಬಾರದು ಎನ್ನುವ ಮಟ್ಟಕ್ಕೆ ಇಂದು ಬೆಳೆದು ನಿಂತಿದೆ.

ಇದೀಗ ಇದೇ ರೀತಿಯಲ್ಲಿ ಮತ್ತೊಂದು ಹಂತಕ್ಕೆ ಅಭಿಯಾನ ತಲುಪಿದೆ ಎಂದರೆ ಸುಳ್ಳಾಗದು ಯಾಕೆಂದರೆ ಸಾಮಾನ್ಯವಾಗಿ ಚೀನಾ ದೇಶದ ಬಂಡವಾಳವಿದ್ದರೆ ನಾವು ಆ ಕಂಪನಿ ಆಪ್ ಅಥವಾ ಆ ಕಂಪನಿಯ ವಸ್ತುಗಳನ್ನು ಬಳಸುವುದಿಲ್ಲ ಎಂದು ಹೇಳುವ ಜನ ಸಾಮಾನ್ಯರನ್ನು ನೋಡಿದ್ದೇವೆ ಆದರೆ ಇಲ್ಲಿ ಅದೇ ಕಂಪನಿ ಯಲ್ಲಿ ಉದ್ಯೋಗ ಮಾಡುವ ಉದ್ಯೋಗಿಗಳು ಕಂಪನಿಯ ವಿರುದ್ಧ ತಿರುಗಿಬಿದ್ದಿದ್ದಾರೆ.

ಹೌದು, ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದಲ್ಲಿ ಝೋಮೋಟೋ ಉದ್ಯೋಗಿಗಳು ಚೀನಾ ದೇಶದ ಆಲಿಬಾಬ ಕಂಪನಿಯು ನಮ್ಮಲ್ಲಿ ಬಾರಿ ಮೊತ್ತದ ಹೂಡಿಕೆ ಮಾಡಿದೆ, ಅದೇ ಕಾರಣಕ್ಕೆ ನಾವು ಕೆಲಸ ತೊರೆದಿದ್ದೇವೆ. ನಮ್ಮ ಕಡೆಯಿಂದ ಒಂದು ರೂಪಾಯಿ ಕೂಡ ಚೀನಾ ದೇಶಕ್ಕೆ ಹರಿದು ಹೋಗುವುದಿಲ್ಲ. ನಾವು ಜನರಿಗೆ ಕೂಡ ಈ ಕಂಪನಿಯ ಜೊತೆ ವ್ಯವಹಾರ ನಿಲ್ಲಿಸುವಂತೆ ಅರಿವು ಮೂಡಿಸುತ್ತಿದ್ದೇವೆ ಎಂದಿದ್ದಾರೆ. ಇದೇ ಸಮಯದಲ್ಲಿ PTI ನ್ಯೂಸ್ ಜೊತೆ ಮಾತನಾಡಿದ ಯುವಕರು, ಚೀನಾ ದೇಶ ಇಲ್ಲಿ ವ್ಯವಹಾರ ಮಾಡಿ, ಲಾಭ ಗಳಿಸಿ ಬಂದ ಹಣದ ಪ್ರತಿಯೊಂದು ರೂಪಾಯಿಯೂ ನಮ್ಮ ದೇಶದ ಗಡಿಯಲ್ಲಿರುವ ಸೈನಿಕರ ವಿರುದ್ಧ ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.