ನಿಜಕ್ಕೂ ಗ್ರೇಟ್: ಚಿರು ಸರ್ಜಾ ಹಾಗೂ ಸುಶಾಂತ್ ರವರ ನೆನಪಾರ್ಥ ವಿಶೇಷ ಕೆಲಸ ಮಾಡಿದ ನಟಿ ಪ್ರಣೀತಾ !

ನಿಜಕ್ಕೂ ಗ್ರೇಟ್: ಚಿರು ಸರ್ಜಾ ಹಾಗೂ ಸುಶಾಂತ್ ರವರ ನೆನಪಾರ್ಥ ವಿಶೇಷ ಕೆಲಸ ಮಾಡಿದ ನಟಿ ಪ್ರಣೀತಾ !

ನಮಸ್ಕಾರ ಸ್ನೇಹಿತರೇ, ಇದೀಗ ಕೆಲವೇ ಕೆಲವು ದಿನಗಳ ಅಂತರದಲ್ಲಿ ಎರಡು ಅಮೂಲ್ಯ ರತ್ನಗಳನ್ನು ನಾವು ಕಳೆದು ಕೊಂಡಿದ್ದೇವೆ.‌ ಇಬ್ಬರು ತಮ್ಮ ನಟನೆಯ ಮೂಲಕವಷ್ಟೇ ಅಲ್ಲದೇ ತಮ್ಮ ವ್ಯಕ್ತಿತ್ವದಿಂದ ಜನರ ಮನ ಗೆಲ್ಲುವುದರಲ್ಲಿ ಯಶಸ್ವಿ ಯಾಗಿದ್ದರು. ಆದರೆ ವಿಧಿಯಾಟ ಇಂದು ಇವರಿಬ್ಬರು ನಮ್ಮ ಜೊತೆಯಲಿಲ್ಲ.

ಹೌದು ನಾವು ಮಾತನಾಡುತ್ತಿರುವುದು ಚಿರಂಜೀವಿ ಸರ್ಜಾ ಹಾಗೂ ಸುಶಾಂತ್ ಸಿಂಗ್ ರಜಪೂತ ರವರ ಬಗ್ಗೆ. ಇದೀಗ ಇವರ ನೆನಪಾರ್ಥವಾಗಿ ದಕ್ಷಿಣ ಭಾರತದ ನಟಿ, ಕನ್ನಡತಿ ಪ್ರಣೀತಾ ಸುಭಾಷ್ ರವರು, ಸಾಮಾಜಿಕ ಕಳಕಳಿಯ ಕಾರ್ಯ ಮಾಡುವ ಮೂಲಕ ಇಬ್ಬರು ನಟರಿಗೆ ವಿಶೇಷವಾದ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಣೀತಾ ಸುಭಾಷ್ ರವರು ದೇವರಿಗೆ ಪ್ರಿಯರಾದ ಚಿರು ಸರ್ಜಾ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ನೆನಪಿಗಾಗಿ, ನಮ್ಮ ಫೌಂಡೇಶನ್ ತಂಡವು ಇಂದು ಲೈಂಗಿಕ ಕಾರ್ಯಕರ್ತೆಯರು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳ ಮಹಿಳೆಯರಿಗಾಗಿ 150 ಕ್ಕೂ ಹೆಚ್ಚು ಪಡಿತರ ಕಿಟ್ ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ.

ನಟಿ ಪ್ರಣೀತಾ ರವರು ದೇಶದಲ್ಲಿ ಲಾಕ್ ಡೌನ್ ಆದ ದಿನಗಳಿಂದಲೂ ದೇಶದ ಹಲವೆಡೆ ನೂರಾರು ಕುಟುಂಬಗಳಿಗೆ ರೇಷನ್ ಕಿಟ್ ಸೇರಿದಂತೆ ಆಹಾರದ ಪೊಟ್ಟಣಗಳನ್ನು, ಸುರಕ್ಷತಾ ಕಿಟ್‌ಗಳನ್ನು ಸರಬರಾಜು ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದರು. ಇದೇ ಹಾದಿಯಲ್ಲಿ ಮತ್ತೊಮ್ಮೆ ಹೆಜ್ಜೆ ಹಾಕಿರುವ ಪ್ರಣೀತಾ ರವರು, ಮತ್ತೊಮ್ಮೆ 150 ಕುಟುಂಬಗಳಿಗೆ ರೇಷನ್ ಕಿಟ್ ಹಾಗೂ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಚಿರಂಜೀವಿ ಸರ್ಜಾ ಹಾಗೂ ಸುಶಾಂತ್ ಸಿಂಗ್ ರಜಪೂತ್ ರವರ ನೆನಪಾರ್ಥವಾಗಿ ನೀಡಿದ್ದಾರೆ.