ಬಾಯ್ಕಾಟ್: ಮತ್ತೊಂದು ಭರ್ಜರಿ ಜಯ ! ಪ್ರಸಿದ್ಧ ಕಂಪನಿಗಳಿಗೆ ಬಿಗ್ ಶಾಕ್ ! ಹೊಸ ದಾಳ ಉರುಳಿಸಿದ ಕ್ಸಿಯೋಮಿ ! ಏನು ಗೊತ್ತಾ?

ಬಾಯ್ಕಾಟ್ ಅಭಿಯಾನಕ್ಕೆ ಮತ್ತೊಂದು ಭರ್ಜರಿ ಜಯ ! ಪ್ರಸಿದ್ಧ ಕಂಪನಿಗಳಿಗೆ ಬಿಗ್ ಶಾಕ್ ! ಹೊಸ ದಾಳ ಉರುಳಿಸಿದ ಚೀನಾ ಕಂಪನಿಗಳು ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಚೀನಾ ದೇಶದ ಯಾವುದೇ ಕಂಪನಿಗಳ ಜೊತೆ ವ್ಯವಹಾರ ಹಾಗೂ ಚೀನಾ ನಿರ್ಮಿತ ವಸ್ತುಗಳನ್ನು ಬಳಸಬಾರದು ಎಂದು ಆರಂಭವಾಗಿರುವ ಅಭಿಯಾನಕ್ಕೆ ದಿನೇ ದಿನೇ ಬೆಂಬಲ ಹೆಚ್ಚಾಗುತ್ತಿದೆ. ಇದೀಗ ಇದರ ತಾಪ ಭಾರತದಲ್ಲಿ ಅತಿದೊಡ್ಡ ಮಾರುಕಟ್ಟೆ ಹೊಂದಿರುವ ದಿಗ್ಗಜ ಮೊಬೈಲ್ ಕಂಪನಿಗಳ ಅಂಗಳಕ್ಕೆ ಬಂದು ನಿಂತಿದೆ ಅದೇ ಕಾರಣಕ್ಕೆ ಇದೀಗ ಕ್ಸಿಯೋಮಿ ಕಂಪನಿಯು ಹೊಸ ಹೆಜ್ಜೆ ಇಟ್ಟು ಭಾರತೀಯ ಗ್ರಾಹಕರನ್ನು ಸೆಳೆಯಲು ಹಾಗೂ ತನ್ನ ಬ್ರಾಂಡ್ ಮುಚ್ಚಿಡಲು ಮುಂದಾಗಿದೆ.

ಹೌದು ಸ್ನೇಹಿತರೇ, ಮೊದಲಿಗೆ ಒಪ್ಪೋ ಕಂಪನಿ, ಅಭಿಯಾನ ಕಂಡು ಹೊಸ ಫೋನ್ ಗಳ ಲೈವ್ ಲಾಂಚ್ ಕಾರ್ಯಕ್ರವನ್ನು ಹಿಂತೆಗೆದುಕೊಂಡಿತ್ತು, ಆದರೆ ಒನ್ ಪ್ಲಸ್ ಮೊಬೈಲ್ ಗಳು ಬಿಡುಗಡೆಯಾದ ಕೆಲವೇ ಕೆಲವು ಸೆಕೆಂಡುಗಳಲ್ಲಿ ಸೇಲ್ ಆಗಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮತ್ತಷ್ಟು ಧ್ವನಿಯಲ್ಲಿ ಚೀನಾ ದೇಶಕ್ಕೆ ಬುದ್ದಿ ಕಲಿಸಬೇಕು ಎಂದಿದ್ದರು. ಇದೀಗ ಈ ಕೂಗು ದಿಗ್ಗಜ ಕಂಪನಿಗಳ ಕದ ತಟ್ಟುವಲ್ಲಿ ಯಶಸ್ವಿಯಾಗಿದೆ.

ಇದೀಗ ಈ ಅಭಿಯಾನ ಭಾರತದಲ್ಲಿ ಅತಿಹೆಚ್ಚು ಮೊಬೈಲ್ ಮಾರುಕಟ್ಟೆ ಹೊಂದಿರುವ ಕ್ಸಿಯೋಮಿ ಯನ್ನು ತಲುಪಿದೆ. ಬಾಯ್ಕಾಟ್ ಅಭಿಯಾನ ಕಡಿಮೆಯಾಗುವ ವರೆಗೂ ಚೀನಾ ಬ್ರಾಂಡ್ ಗಳನ್ನೂ ಮರೆಮಾಚಲು (ಬಟ್ಟೆ ಅಥವಾ ಬ್ಯಾನರ್ ಗಳಿಂದ ಅಂಗಡಿಗಳ ಬೋರ್ಡ್ ಮುಚ್ಚಲು) ಶಾಪ್ ಗಳಿಗೆ ಅನುಮತಿ ನೀಡುವಂತೆ ಪತ್ರ ಬರೆಯಲಾಗಿತ್ತು. ಆದರೆ ಕ್ಸಿಯೋಮಿ ಕಂಪನಿಯು ತನ್ನ ಬೋರ್ಡ್ ಮರೆಮಾಚುವುದಷ್ಟೇ ಅಲ್ಲದೇ, ಗ್ರಾಹಕರಿಗೆ ತನ್ನ ಬ್ರಾಂಡ್ ಮರೆ ಮಾಚಲು “MADE IN INDIA” ಎಂಬ ಬೋರ್ಡ್ ಹಾಕಲು ಆರಂಭಿಸಿದೆ. ಇದನ್ನು ಖುದ್ದು AIMRA ರಾಷ್ಟ್ರೀಯ ಅಧ್ಯಕ್ಷ ಅರವಿಂದರ್ ಖುರಾನಾ ರವರು ಖಚಿತ ಪಡಿಸಿದ್ದಾರೆ. ಒಟ್ಟಿನಲ್ಲಿ ಇದೀಗ ದೇಶದ ಎಲ್ಲೆಡೆ ಚೀನಾ ದೇಶಕ್ಕೆ ಹಣ ಹರಿದುಹೋಗುವುದನ್ನು ನಿಲ್ಲಿಸಬೇಕು ಎಂದು ನಡೆಯುತ್ತಿರುವ ಅಭಿಯಾನಕ್ಕೆ ಬಾರಿ ಜನಬೆಂಬಲ ಕೇಳಿಬರುತ್ತಿದ್ದು, ದಿನೇ ದಿನೇ ಈ ಕೂಗು ಹೆಚ್ಚಾಗುತ್ತಿದೆ.