ಚೀನಾ ಕಂಪನಿಗಳ ಬೆವರಿಳಿಸಿದ ಕಂಗಾನಾ ! ಚೀನಾ ಪ್ರೇಮಿಗಳಿಗೂ ತಕ್ಕ ಉತ್ತರ ನೀಡಿ ಹೇಳಿದ್ದೇನು ಗೊತ್ತಾ?

ಚೀನಾ ಕಂಪನಿಗಳ ಬೆವರಿಳಿಸಿದ ಕಂಗಾನಾ ! ಚೀನಾ ಪ್ರೇಮಿಗಳಿಗೂ ತಕ್ಕ ಉತ್ತರ ನೀಡಿ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ದೇಶದ ಎಲ್ಲೆಡೆ, ಚೀನಾ ವಸ್ತುಗಳನ್ನು ಖರೀದಿ ಮಾಡಬೇಡಿ ಎಂದು ಅಭಿಯಾನಗಳು ಆರಂಭಗೊಂಡಿವೆ. ಈ ಹಿಂದೆಯೂ ಹಲವಾರು ಬಾರಿ ಈ ಅಭಿಯಾನ ಕೇಳಿ ಬಂದಿತ್ತಾದರೂ ಈ ಬಾರಿ ಸದ್ದು ಮಾಡಿದಷ್ಟು ಎಂದು ಸದ್ದು ಮಾಡಿರಲಿಲ್ಲ. ಈ ಬಾರಿ ಹಲವಾರು ಸೆಲೆಬ್ರೆಟಿ ಗಳು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಜನರೇ ನಾವು ಕೊಂಡು ಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಿದ್ದಾರೆ.

ಇದೀಗ ಸದಾ ರಾಷ್ಟ್ರ ಹಾಗೂ ಭಾರತೀಯ ಸೇನೆಯ ಪರ ಧ್ವನಿ ಎತ್ತುವ ಸೆಲೆಬ್ರೆಟಿಗಳಲ್ಲಿ ಒಬ್ಬರಾಗಿರುವ ಕಂಗಾನಾ ರವರು, ಇದೀಗ ಈ ಅಭಿಯಾನಕ್ಕೆ ಕೈ ಜೋಡಿಸುವುದಷ್ಟೇ ಅಲ್ಲದೇ, ಇಲ್ಲಿದ್ದುಕೊಂಡು ಇವೆಲ್ಲ ಸಾಧ್ಯವಿಲ್ಲ, ಇದರಿಂದ ಏನು ಪ್ರಯೋಜನವಿಲ್ಲ. ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಅಭಿಯಾನ ತಡೆಯಲು ಪ್ರಯತ್ನಿಸುತ್ತಿರುವ ಚೀನಾ ಪ್ರೇಮಿಗಳಿಗೆ ಉದಾಹರಣೆಯ ಮೂಲಕ ತಕ್ಕ ಮಾತುಗಳಲ್ಲಿ ಉತ್ತರಿಸಿದ್ದಾರೆ. ಇವರ ಮಾತುಗಳನ್ನು ಕೇಳಿ, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಗಡಿಯಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಮಾತು ಆರಂಭಿಸಿ, ಗಡಿಯಲ್ಲಿ ಮುಖಾಮುಖಿಯಾಗುವುದು ಸೈನ್ಯ ಮತ್ತು ಕೇವಲ ಸರ್ಕಾರಗಳನ್ನು ಮಾತ್ರ ಒಳಗೊಂಡಿರಬೇಕು ಎಂಬುದು ಉತ್ತಮವೇ? ಸರ್ಕಾರ ಮತ್ತು ಸೈನಿಕರು ಮಾತ್ರ ಇದರ ಕುರಿತು ಗಮನಹರಿಸಬೇಕೇ? ನಾವು ಸಾಮಾನ್ಯ ಜನರ ಕೊಡುಗೆ ಅಥವಾ ಜವಾಬ್ದಾರಿ ಏನು? ಎಂಬರ್ಥದಲ್ಲಿ ಮಾತನಾಡಿ, ನಮಗೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಿಮಗೆ ಮರೆತು ಹೋಯಿತೇ ಮಹಾತ್ಮ ಗಾಂಧಿ ರವರು, ಭಾರತೀಯರನ್ನು ಅಂದು ಬ್ರಿಟಿಷರ ಆಡಳಿತವನ್ನು ಭಾರತದಲ್ಲಿ ಕೊನೆಗೊಳಿಸಲು ಅವರೊಂದಿಗೆ ವ್ಯಾಪಾರ ಮಾಡಬೇಡಿ ಎಂದದ್ದು? ಈ ಯುದ್ಧನಲ್ಲಿ ನಾವು ಪಾಲ್ಗೊಳ್ಳಬಾರದೇ? ಯಾಕೆ ಲಡಾಖ್ ಕೇವಲ ಚಿಕ್ಕ ಪ್ರದೇಶವಲ್ಲ, ಅದು ನಮ್ಮ ಭಾರತದ ಅಂಗ.

ಈ ಯುದ್ಧದಲ್ಲಿ ನಾವು ಭಾಗಿಯಾಗಿ ಯಾಕೆ ಚೀನಾ ಕಂಪನಿಗಳನ್ನು ನಿಷೇಧ ಮಾಡಬಾರದು? ಇದರಿಂದ ಅವರಿಗೆ ಹರಿದು ಹೋಗುವ ಆದಾಯವನ್ನು ತಡೆಯ ಬಹುದಲ್ಲವೇ? ಹಾಗೂ ಆ ಹಣದಿಂದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿ ಅವುಗಳನ್ನು ನಮ್ಮ ಸೈನಿಕರ ಮೇಲೆ ಬಳಸುವುದನ್ನು ತಡೆಯ ಬಹುದಲ್ಲವೇ? ನಮ್ಮ ಸೈನಿಕರು ಹಾಗೂ ನಮ್ಮ ಸರ್ಕಾರವನ್ನು ಬೆಂಬಲಿಸುವುದು ನಮ್ಮ ಜವಾಬ್ದಾರಿ. ಆದ್ದರಿಂದ ನಾವು ಆತ್ಮನಿರ್ಭರ್ ಆಗೋಣ, ಚೀನಾದ ಸರಕುಗಳನ್ನು ಬಹಿಷ್ಕಾರ ಮಾಡೋಣ. ಈ ಯುದ್ಧದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತವನ್ನು ಗೆಲ್ಲುವಂತೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದು ಹೇಳಿದ್ದಾರೆ.