ರಾಹುಲ್, ಸೋನಿಯಾ ರವರಿಗೆ ಬಾರಿ ಮುಜುಗರ! ಸೇನೆ, ಕೇಂದ್ರದ ಪರ ನಿಂತು ಶರದ್ ಪವರ್ ರವರು ಹೇಳಿದ್ದೇನು ಗೊತ್ತಾ??

ರಾಹುಲ್, ಸೋನಿಯಾ ರವರಿಗೆ ಬಾರಿ ಮುಜುಗರ! ಸೇನೆ, ಕೇಂದ್ರದ ಪರ ನಿಂತು ಶರದ್ ಪವರ್ ರವರು ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕೇಂದ್ರ ಸರ್ಕಾರದ ಮೇಲೆ ರಾಹುಲ್ ಗಾಂಧಿ, ಪ್ರಿಯಾಂಕಾ, ಹಾಗೂ ಸೋನಿಯಾ ಗಾಂಧಿ ರವರು ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದಾರೆ. ಭಾರತೀಯ ಸೇನೆಯು ಕೂಡ ಒಂದಿಚ್ಚು ಜಾಗವನ್ನು ಕೂಡ ಚೀನಾಕ್ಕೆ ಬಿಟ್ಟುಕೊಟ್ಟಿಲ್ಲ ಎಂದರೂ ಕೂಡ ಸಾವಿರಾರು ಚದರ ಕಿಲೋ ಮೀಟರ್ ಅನ್ನು ಭಾರತ ಬಿಟ್ಟುಕೊಟ್ಟಿದೆ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಇದರ ಕುರಿತು ಮಾತನಾಡಿರುವ ಕಾಂಗ್ರೆಸ್ ಪಕ್ಷದ ಮಿತ್ರ ಪಕ್ಷದ ಅಧ್ಯಕ್ಷ ಶರದ್ ಪವರ್ ರವರು ಗಾಂಧಿ ಕುಟುಂಬಕ್ಕೆ ಬಾರಿ ಮುಜುಗರ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ.

ರಾಷ್ತ್ರೀಯ ಭದ್ರತೆಗಳನ್ನು ರಾಜಕೀಯ ಗೊಳಿಸಬಾರದು, ಗುಪ್ತಚರ ವೈಫಲ್ಯ ಎಂದು ಹೇಳಿತ್ತಿರುವುದು ಸರಿಯಲ್ಲ, ಚೀನಾ ದೇಶವು ಭಾರತದ ಗಡಿಯನ್ನು ಪ್ರವೇಶಿಸಲು ಪ್ರಯತ್ನ ಪಟ್ಟಾಗ ಅವರಿಗೆ ಸರಿಯಾದ ಉತ್ತರದ ಮೂಲಕ ಹಿಮ್ಮೆಟ್ಟಿಸಲಾಗಿದೆ. ಚೀನೀಯರು ನಮ್ಮ ಗಡಿ ಪ್ರವೇಶಿಸಿದ್ದು ಯಾರೊಬ್ಬರ ವೈಫಲಿವಲ್ಲ. ಗಸ್ತು ತಿರುಗುವಾಗ ಯಾರಾದರೂ ಗಡಿ ಪ್ರವೇಶಿಸಿದರೇ ಅವರನ್ನು ತಡೆಯುವುದು ಸಹಜ, ಅಲ್ಲಿ ಯಾವುದೇ ಗಡಿ ಬೇಲಿಗಳು ಇಲ್ಲ, ಯಾರಾದರೂ ಪ್ರವೇಶಿಸಬಹುದು, ಆದರೆ ಅವರನ್ನು ತಡೆಯಲು ಅಲ್ಲಿ ಸೈನ್ಯ ಇರುತ್ತದೆ. ಇದು ದೆಹಲಿಯಲ್ಲಿ ಕುಳಿತಿರುವ ರಕ್ಷಣಾ ಸಚಿವರ ವೈಫಲ್ಯ ಎಂದರೇ ಅದು ಸರಿ ಬರುವುದಿಲ್ಲ.

ಇನ್ನು ರಾಹುಲ್ ರವರ ಆರೋಪದ ಕುರಿತು ಮಾತನಾಡಿದ ಶರದ್ ಪವರ್ ರವರು, ಚೀನಾ 45000 ಚದರ KM ಗಳ ಪ್ರದೇಶವನ್ನು 1962 ರ ಯುದ್ಧದಲ್ಲಿ ವಶಪಡಿಸಿಕೊಂಡಿತ್ತು. ಇದನ್ನು ರಾಹುಲ್ ಗಾಂಧಿ ರವರು ಮರೆಯಬಾರದು, ಅವರ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿಯೇ ಈ ಘಟನೆ ನಡೆದದ್ದು. ಈ ಪ್ರದೇಶ (ಅಕ್ಷಯ್ ಚಿನ್) ಇನ್ನು ಚೀನಾ ದೇಶದ ಭಾಗವಾಗಿಯೇ ಇದೆ. ಯಾರಾದರೂ ಸರಿ ಆರೋಪ ಮಾಡುವ ಮುನ್ನ ಅವರ ಸರ್ಕಾರದ ಅವಧಿಯಲ್ಲಿ ಏನಾಯಿತು ಎಂಬುದರ ಕುರಿತು ಆಲೋಚನೆ ಮಾಡಬೇಕು. ಅದೇ ರೀತಿ ಚೀನಾ ನಮ್ಮ ಪ್ರದೇಶವನ್ನು ವಶಪಡಿಸಿಕೊಂಡಿದೆ ಎಂಬ ಹೇಳಿಕೆ ನಂಬಿಕೆಗೆ ಅರ್ಹವಲ್ಲ, ಈ ಕುರಿತು ಯಾರು ರಾಜಕೀಯ ಮಾಡಬಾರದು ಎಂದಿದ್ದಾರೆ.