ಸುಶಾಂತ್ ಅಭಿಮಾನಿಗಳು ಬಾರಿ ಖುಷ್, ಕರಣ್ ಕೈ ಬಿಟ್ಟ ಬಾಲಿವುಡ್, ತಕ್ಕ ಶಾಸ್ತಿ ಎಂದ ನೆಟ್ಟಿಗರು ! ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಸುಶಾಂತ್ ಸಿಂಗ್ ರವರ ಕಹಿ ಘಟನೆಯ ನಂತರ ಬಾಲಿವುಡ್ ನ ಅನೇಕ ಕರಾಳ ಸಂಗತಿಗಳು ಹೊರಬರುತ್ತಿವೆ. ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ಕುಟುಂಬಗಳದ್ದೇ ಕಾರುಬಾರು. ಹೊಸಬರು ಚಿತ್ರರಂಗ ಪ್ರವೇಶಿಸುವುದನ್ನು ಇವರು ಸಹಿಸುವುದಿಲ್ಲ, ಬೆಳೆಯಲು ಸಹ ಬಿಡುವುದಿಲ್ಲ. ಒಂದು ವೇಳೆ ತಮ್ಮ ನಟನೆಯಿಂದ ಯಾರಾದರೂ ಬೆಳೆದರೇ ಅವರನ್ನು ಬಾಲಿವುಡ್ ನ ಹಲವಾರು ಮಂದಿ ಪ್ರತ್ಯೇಕಿಸಿ ನೋಡಿ, ಪಕ್ಷಪಾತವಾಗಿ ಕಂಡು ಅವಮಾನಿಸುತ್ತಾರೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ.

ಈ ಎಲ್ಲಾ ಸವಾಲುಗಳನ್ನು ಗೆದ್ದು ಕೆಲವರು ಮಾತ್ರ ಬಾಲಿವುಡ್ ನಲ್ಲಿ ಮಿಂಚಲು ಸಾಧ್ಯ ಎಂದೇ ಹೇಳಲಾಗುತ್ತಿದೆ. ಪ್ರತಿಯೊಂದು ಚಿತ್ರ ರಂಗದಲ್ಲಿಯೂ ಸ್ಟಾರ್ ಕುಟುಂಬಗಳದ್ದೇ ಕಾರು ಬಾರು ಎಂದು ಹಲವಾರು ಹಳೆಯ ವಿಡಿಯೋ ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಹಾಗುತ್ತಿವೆ. ಇನ್ನು ಖ್ಯಾತ ನಟಿ, ಕಂಗನಾ ರಾವತ್ ರವರು ಕೂಡ ಈ ಕುರಿತು ಮಾತನಾಡಿ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತವಿದೆ ಎಂದು ಒಪ್ಪಿಕೊಂಡಿದ್ದಾರೆ.

ಕಂಗನಾ ರಾವತ್ ಸೇರಿದಂತೆ ಹಲವಾರು ಜನರು ಒಪ್ಪಿಕೊಂಡು ನೇರವಾಗಿ ಮಾತನಾಡಿರುವ ವಿಡಿಯೋ ಗಳು ಕೂಡ ವೈರಲ್ ಆಗುತ್ತಿವೆ ಹಾಗೂ ಸ್ವಜನಪಕ್ಷಪಾತ ಮಾಡುವ ಬಾಲಿವುಡ್ ಸೆಲೆಬ್ರೆಟಿ ಹಾಗೂ ಕುಟುಂಬಗಳ ವಿರುದ್ಧ ಬಾರಿ ಆಕ್ರೋಶ ಕೇಳಿ ಬಂದಿದೆ. ಅದರಲ್ಲಿಯೂ ಕೇವಲ ಸ್ಟಾರ್ ಮಕ್ಕಳನ್ನು ಮಾತ್ರ ಸೇರಿಸಿಕೊಂಡು ಚಲನಚಿತ್ರಗಳನ್ನು ಮಾಡುತ್ತಾರೆ, ಹಾಗೂ ಸ್ವಜನಪಕ್ಷಪಾತದಲ್ಲಿ ಕರಣ್ ಜೋಹರ್ ರವರೇ ಎತ್ತಿದ್ದ ಕೈ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದರಿಂದ ಸಾಕಷ್ಟು ಜನ ಕರಣ್ ಜೋಹರ್ ರವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಿರುಗಿ ಬಿದ್ದಿದ್ದರು.

ಇದೀಗ ಇದರಿಂದ ಕಂಗಾಲಾಗಿರುವ ಕರಣ್ ಜೋಹರ್ ರವರು, ನನ್ನ ಬೆಂಬಲಕ್ಕೆ ಯಾವುದೇ ಬಾಲಿವುಡ್ ಜನರು ನಿಂತಿಲ್ಲ. ಇಂತಹ ಕಠಿಣ ಸಂದರ್ಭದಲ್ಲಿ, ನನ್ನನು ಯಾರು ಬೆಂಬಲಿಸಿಲ್ಲ. ಜನರು ಕರಣ್ ಒಬ್ಬ ಕಪಟಗಾರ, ವಂಶಾವಳಿಯಿಂದ ಬಾಲಿವುಡ್ ಪ್ರವೇಶಿಸುವವರನ್ನು ಮಾತ್ರ ಬೆಂಬಲಿಸುತ್ತಾರೆ ಎಂಬ ಆರೋಪದಿಂದ ಬೇಸತ್ತು ತಮ್ಮ ಮಾಮಿ ಫಿಲ್ಮ್ ಫೆಸ್ಟಿವಲ್ ಮಂಡಳಿಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಜೋಹರ್ ಅವರನ್ನು ಉಳಿಸಿಕೊಳ್ಳಲು ಮಾಮಿ ಅಧ್ಯಕ್ಷೆ ದೀಪಿಕಾ ಪಡುಕೋಣೆ ಅವರು ಇನ್ನಿಲ್ಲದ ಪ್ರಯತ್ನ ಮಾಡಿದರೂ ಕೂಡ ಕರಣ್ ಜೋಹರ್ ರವರು ಒಪ್ಪಿಗೆ ನೀಡದೇ ರಾಜೀನಾಮೆ ನೀಡಿದ್ದಾರೆ.

ಇದರಿಂದ ಸುಶಾಂತ್ ಸಿಂಗ್ ರವರ ಅಭಿಮಾನಿಗಳು ಬಾರಿ ಖುಷ್ ಆಗಿದ್ದು, ಮೊದಲಿಂದಲೂ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಹಾಗೂ ಯಶ್ ರಾಜ್ ಫಿಲಂಸ್ ಸೇರಿದಂತೆ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆಗಳಿಂದ ಸುಶಾಂತ್ ಸಿಂಗ್ ರವರನ್ನು ನಿಷೇಧ ಮಾಡಿದ್ದರು ಎಂದು ಅಭಿಮಾನಿಗಳು ವಾದ ಮಂಡಿಸುತ್ತಿದ್ದರು.

Post Author: Ravi Yadav