ಕೊಹ್ಲಿ, ರೋಹಿತ್ ಅಲ್ಲ ಈ ಭಾರತೀಯನಿಗೆ ಬೌಲಿಂಗ್ ಮಾಡುವುದು ಕಠಿಣ ಎಂದ ರಶೀದ್ ಖಾನ್ ! ಆಯ್ಕೆಯಾದವರು ಯಾರು ಗೊತ್ತಾ?

ಕೊಹ್ಲಿ, ರೋಹಿತ್ ಅಲ್ಲ ಈ ಭಾರತೀಯನಿಗೆ ಬೌಲಿಂಗ್ ಮಾಡುವುದು ಕಠಿಣ ಎಂದ ರಶೀದ್ ಖಾನ್ ! ಆಯ್ಕೆಯಾದವರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ರಶೀದ್ ಖಾನ್ ರವರು ಕಳೆದ ಕೆಲವು ದಿನಗಳ ಹಿಂದೆ ಐಪಿಎಲ್ ನಲ್ಲಿ ಇತ್ತೀಚೆಗೆ ನೀವು ಬೌಲಿಂಗ್ ಮಾಡಲು ಕಠಿಣ ಎಂದು ಭಾಸವಾಗುವ ಮೂರು ಆಟಗಾರರನ್ನು ಆಯ್ಕೆ ಮಾಡಿ ಎಂದು ಪ್ರಶ್ನೆ ಮಾಡಿದಾಗ ಹಾರ್ದಿಕ್ ಪಾಂಡ್ಯ, ಕ್ರಿಸ್ ಗೇಲ್ ಹಾಗೂ ಆಂಡ್ರೆ ರಸೆಲ್ ಅವರನ್ನು ಆಯ್ಕೆ ಮಾಡಿದ್ದರು.

ಆದರೆ ಇದೀಗ ಚಾಹಲ್ ಅವರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿದ ರಶೀದ್ ಖಾನ್ ರವರನ್ನು ಚಾಹಲ್ ರವರು ನೀವು ಯಾವ ಭಾರತೀಯ ಬ್ಯಾಟ್ಸ್ ಮ್ಯಾನ್ ಗೆ ಬೌಲಿಂಗ್ ಮಾಡಲು ಕಷ್ಟಪಟ್ಟಿದ್ದೀರೀ ಹಾಗೂ ಕಷ್ಟಪಡುತ್ತೀರಿ ಎಂಬ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ರಶೀದ್ ಖಾನ್ ರವರು ತಾವು ಅಂಡರ್ 19 ವರ್ಲ್ಡ್ ಕಪ್ ನಲ್ಲಿ ನಡೆದ ಘಟನೆಯ ಸಮೇತ ವಿವರಣೆ ನೀಡಿದ್ದಾರೆ.

ಹೌದು ಸ್ನೇಹಿತರೇ, ಈ ಪ್ರಶ್ನೆಗೆ ಉತ್ತರಿಸುವಾಗ ರಶೀದ್ ಖಾನ್ ರವರು, ರಿಷಬ್ ಪಂತ್ ರವರು ನನ್ನ ಮೂರು ಬಾಲ್ ಗಳನ್ನು ಸತತವಾಗಿ ಸಿಕ್ಸರ್ ಗಳಾಗಿ ಪರಿವರ್ತಿಸಿದರು, ನಾಲ್ಕನೇ ಬಾಲ್ ಕೂಡ ಕೊಂಚದರಲ್ಲಿ ಮಿಸ್ಸಾಗಿತ್ತು. ಇಲ್ಲವಾದರೆ ಅದು ಕೂಡ ಸಿಕ್ಸರ್ ಗೆರೆ ದಾಟುತ್ತಿತ್ತು. ಆ ಪಂದ್ಯದಲ್ಲಿ ಇಡೀ ಆಫ್ಘಾನಿಸ್ತಾನ ತಂಡವು ಈತನ ವಿಕೆಟ್ ಪಡೆಯುವುದು ಹೇಗೆ ಎಂಬ ಆಲೋಚನೆಯಲ್ಲಿ ತೊಡಗಿಕೊಂಡಿತ್ತು, ಆ ರೀತಿ ಅವರು ಬ್ಯಾಟಿಂಗ್ ಮಾಡುತ್ತಿದ್ದರು. ಪ್ರತಿಯೊಂದು ರೀತಿಯ ಬಾಲಿಗೂ ಆತನ ಬಳಿ ಉತ್ತರವಿದೆ, ಯಾವುದೇ ವಿವಿಧ ರೀತಿಯ ಬಾಲಗಳನ್ನು ಮಿಕ್ಸ್ ಮಾಡಿದರೂ ಕೂಡ ಕೊಂಚವೂ ವಿಚಲಿತರಾಗದೇ ಒಂದು ಬ್ಯಾಟಿಂಗ್ ಮಾಡಿದರು.‌ ಖಂಡಿತ ರಿಷಬ್ ಪಂತ್ ರವರಿಗೆ ಬೌಲಿಂಗ್ ಮಾಡುವಾಗ ನನಗೆ ಕಠಿಣ ಅನ್ನಿಸುತ್ತದೆ ಎಂದು ಹೇಳಿದ್ದಾರೆ.