ವಿಶ್ವದ ಶ್ರೇಷ್ಠ ಫೀಲ್ಡರ್, ಭಾರತದ ಪ್ರಭಾವಶಾಲಿ ಆಟಗಾರರನ್ನು ಹೆಸರಿಸಿದ ಸ್ಮಿತ್ ! ಆಯ್ಕೆಯಾದವರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಆಸ್ಟ್ರೇಲಿಯಾ ತಂಡದ ಆಟಗಾರ ಸ್ಟೀವ್ ಸ್ಮಿತ್ ರವರು ಇದೀಗ ರಾಜಸ್ಥಾನ್ ರಾಯಲ್ಸ್ ಐಪಿಎಲ್ ತಂಡದ ಸಾಮಾಜಿಕ ಜಾಲತಾಣಗಳ ಮಾತುಕತೆಯ ಭಾಗವಾಗಿ ಮಾತನಾಡುತ್ತಿದ್ದಾಗ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಇದರಲ್ಲಿ ಪ್ರಮುಖವಾಗಿ ವಿಶ್ವದ ಶ್ರೇಷ್ಠ ಫೀಲ್ಡರ್ ಯಾರು ಹಾಗೂ ಭಾರತದ ಯಾವ ಆಟಗಾರ ಹೆಚ್ಚು ಪ್ರಭಾವಶಾಲಿ ಎಂದು ನೀವು ಭಾಸವಾಗುತ್ತೀರೀ ಎಂಬ ಪ್ರಶ್ನೆ ಕೇಳಿದಾಗ ಸ್ಮಿತರವರು ಇಬ್ಬರು ಆಟಗಾರರನ್ನು ಆಯ್ಕೆ ಮಾಡಿದರು. ಇನ್ನು ಮಹೇಂದ್ರ ಸಿಂಗ್ ಧೋನಿ ಹಾಗೂ ಕೊಹ್ಲಿ ರವರ ಕುರಿತು ಕೂಡ ಮಾತನಾಡಿದರು.

ಹೌದು ಸ್ನೇಹಿತರೇ ವಿಶ್ವದ ಶ್ರೇಷ್ಠ ಫೀಲ್ಡರ್ ಯಾರು ಎಂದ ತಕ್ಷಣ ಇಂದಿನ ಕ್ರಿಕೆಟ್ ಜಗತ್ತಿನಲ್ಲಿ ವಿಶ್ವ ಶ್ರೇಷ್ಠ
ಫೀಲ್ಡರ್ ರವೀಂದ್ರ ಜಡೇಜಾ ಅದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೂ ನನ್ನನ್ನು ಯಾರು ತುಂಬಾ ಪ್ರಭಾವಶಾಲಿ ಆಟಗಾರ ಎಂದು ಕೇಳಿದರೇ ನಾನು ಯುವ ಬ್ಯಾಟ್ಸ್ಮನ್ ಕೆ ಎಲ್ ರಾಹುಲ್ ರವರನ್ನು ಆಯ್ಕೆ ಮಾಡುತ್ತೇನೆ, ಅವರು ತುಂಬಾ ಒಳ್ಳೆಯ ಅದ್ಭುತ ಆಟಗಾರ. ಇನ್ನು ಮಹೇಂದ್ರ ಸಿಂಗ್ ಧೋನಿ ಎಂದಾಗ ಅವರನ್ನು ದಂತಕಥೆ ಎಂದು ಕರೆದರು, ಇನ್ನು ಕೊಹ್ಲಿ ಅವರ ಬಗ್ಗೆ ಪ್ರಶ್ನಿಸಿದಾಗ ಅವರು ವಿಲಕ್ಷಣ, ಆತ ಹೇಗೆ ಬ್ಯಾಟಿಂಗ್ ಮಾಡುತ್ತಾನೆ ಎಂಬುದೇ ಅರ್ಥವಾಗುವುದಿಲ್ಲ ಎಂಬಂತೆ ತಮಾಷೆಯಾಗಿ ಉತ್ತರಿಸಿದರು.

Post Author: Ravi Yadav