ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಆಯ್ಕೆ ಮಾಡಿದ ಕುಲಕರ್ಣಿ ! ಅತ್ಯುತ್ತಮ ತಂಡ ಎಂದು ಹಾಡಿ ಹೊಗಳಿದ ನೆಟ್ಟಿಗರು ! ಆಯ್ಕೆಯಾದವರು ಯಾರು ಯಾರು ಗೊತ್ತಾ?
ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಆಯ್ಕೆ ಮಾಡಿದ ಕುಲಕರ್ಣಿ ! ಅತ್ಯುತ್ತಮ ತಂಡ ಎಂದು ಹಾಡಿ ಹೊಗಳಿದ ನೆಟ್ಟಿಗರು ! ಆಯ್ಕೆಯಾದವರು ಯಾರು ಯಾರು ಗೊತ್ತಾ?
ನಮಸ್ಕಾರ ಸ್ನೇಹಿತರೇ, ಐಪಿಎಲ್ ನಲ್ಲಿ ತನ್ನದೇ ಆದ ರೀತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಹಲವಾರು ವರ್ಷಗಳಿಂದಲೂ ತನ್ನ ತಂಡಗಳಿಗೆ ಕಾಣಿಕೆ ನೀಡುತ್ತಿರುವ ಭಾರತದ ಬೌಲರ್ ಕುಲಕರ್ಣಿಯವರು ಇದೀಗ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ.
ಇತರ ಆಟಗಾರರಿಗೆ ಹೋಲಿಸಿದರೇ ಇದೊಂದು ಅತ್ಯುತ್ತಮ ತಂಡ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಸಾಮಾನ್ಯವಾಗಿ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಆಯ್ಕೆ ಮಾಡುವಾಗ ಬಹುತೇಕ ಆಟಗಾರರು ಐಪಿಎಲ್ ನಿಯಮವಾದ 4 ವಿದೇಶಿ ಆಟಗಾರರು ಹಾಗೂ ಉಳಿದ ಏಳು ಸ್ವದೇಶಿ ಆಟಗಾರರು ಇರಬೇಕು ಎಂಬ ನಿಯಮವನ್ನು ಪಾಲಿಸುವುದಿಲ್ಲ. ಆದರೆ ಕುಲಕರ್ಣಿ ರವರು, ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಐಪಿಎಲ್ ನಿಯಮವನ್ನು ಪಾಲಿಸಿ ಉತ್ತಮ ತಂಡವನ್ನು ರಚಿಸಿದ್ದಾರೆ.
ಮೂರು ಐಪಿಎಲ್ ತಂಡದ ನಾಯಕರನ್ನು ಆಯ್ಕೆ ಮಾಡಿರುವ ಕುಲಕರ್ಣಿ ರವರು ಕೊನೆಯದಾಗಿ ಮಹೇಂದ್ರ ಸಿಂಗ್ ಧೋನಿ ರವರನ್ನು ತಮ್ಮ ಸಾರ್ವಕಾಲಿಕ ಶ್ರೇಷ್ಠ ತಂಡಕ್ಕೆ ನಾಯಕನಾಗಿ ಆಯ್ಕೆ ಮಾಡಿದ್ದಾರೆ. ಇನ್ನುಳಿದಂತೆ ಸಂಪೂರ್ಣ ತಂಡ ಈ ಕೆಳಗಿನಂತೆ ಇದೆ.
ಧವಲ್ ಕುಲಕರ್ಣಿ ರವರ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ: ರೋಹಿತ್ ಶರ್ಮಾ, ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಸುರೇಶ್ ರೈನಾ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಡ್ವಾನ್ ಬ್ರಾವೊ, ರಶೀದ್ ಖಾನ್, ಜಸ್ವಿತ್ ಬುಮ್ರಾ, ಭುವನೇಶ್ವರ್ ಕುಮಾರ್