ಸುಶಾಂತ್ ಸಿಂಗ್ ರವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಮನವಿ ಮುಂದಿಟ್ಟ ಸೋನು ಸೂದ್ !

ಸುಶಾಂತ್ ಸಿಂಗ್ ರವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಮನವಿ ಮುಂದಿಟ್ಟ ಸೋನು ಸೂದ್ !

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದ ಭವಿಷ್ಯದ ನಾಯಕ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಸುಶಾಂತ್ ಸಿಂಗ್ ರಜಪೂತ್ ರವರು ಇಹಲೋಕ ತ್ಯಜಿಸಿದ್ದಾರೆ.

ಹೀಗಿರುವಾಗ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋಗಳನ್ನು ಹರಿದು ಬಿಡುತ್ತಾ ವೈರಲ್ ಮಾಡುತ್ತಿದ್ದಾರೆ. ಕೆಲವರು ಇವರು ಇಹಲೋಕ ತ್ಯಜಿಸಿದ ಬಳಿಕ ತೆಗೆದ ಫೋಟೋಗಳನ್ನು ಬಳಸಿಕೊಂಡು ಬಾರಿ ವೈರಲ್ ಮಾಡುತ್ತಿದ್ದಾರೆ. ಇನ್ನು ಮಾಧ್ಯಮಗಳಂತೂ ಇಂತಹ ಸಂದಿಗ್ಧ ಸಮಯದಲ್ಲಿ, ಸುದ್ದಿ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ ಸುಶಾಂತ್ ರವರ ಮನೆಗೆ ಹೋಗಿ ಅವರ ತಂದೆಯ ಬಳಿ ಮನಬಂದಂತೆ ಪ್ರಶ್ನೆಗಳನ್ನು ಕೇಳುವ ಮೂಲಕ ದುಃಖದಲ್ಲಿ ಇರುವವರಿಗೆ ಮತ್ತಷ್ಟು ನೋವುಗಳನ್ನು ನೀಡಿದ್ದಾರೆ.

ಈ ರೀತಿ ಬೇಜವಾಬ್ದಾರಿತನ ಮೆರೆಯುತ್ತಿರುವ ಎಲ್ಲರಿಗೂ ಸೋನು ಸೂದ್ ರವರು ಟ್ವೀಟ್ ನಲ್ಲಿ ಮನವಿ ಮಾಡುವ ಮೂಲಕ ಉತ್ತರ ನೀಡಿದ್ದಾರೆ. ಇದೀಗ ನಾವು ಒಬ್ಬ ಸ್ನೇಹಿತ ಹಾಗೂ ಸಹೋದ್ಯೋಗಿಯನ್ನು ಕಳೆದುಕೊಂಡಿದ್ದೇವೆ. ಇವರ ಸ್ಥಾನವನ್ನು ಯಾರು ತುಂಬಲು ಸಾಧ್ಯವಿಲ್ಲ. ನಾನು ನನ್ನ ಸ್ನೇಹಿತರಿಗೆ ಹಾಗೂ ಮಾಧ್ಯಮ ದವರಿಗೆ ಮನವಿ ಮಾಡುತ್ತಿದ್ದೇನೆ, ದಯವಿಟ್ಟು ಇದನ್ನು ಸೆನ್ಸೇಷನಲ್ ಮಾಡಬೇಡಿ. ದಯವಿಟ್ಟು ಯಾರು ಫೋಟೋಗಳನ್ನು ಶೇರು ಮಾಡಲೇಬೇಡಿ, ಒಬ್ಬ ಹುಡುಗ ತನ್ನ ಕಣ್ಣಿನಲ್ಲಿ ಕನಸುಗಳನ್ನು ಕಟ್ಟಿಕೊಂಡು ನಗರಕ್ಕೆ ಬಂದಿದ್ದ ಹಾಗೂ ಅಂದುಕೊಂಡಂತೆ ಎಲ್ಲಾ ಸಾಧಿಸುತ್ತಿದ್ದ. ಆದರೆ ಅದೇ ಹಾದಿಯಲ್ಲಿ ನಮ್ಮೆಲ್ಲರನ್ನು ಬಿಟ್ಟುಹೋದ. ದಯವಿಟ್ಟು ಈತನನ್ನು ನೆಮ್ಮದಿಯಾಗಿ ಹೋಗಲು ಬಿಡಿ ಎಂದು ಮನವಿ ಮಾಡಿದ್ದಾರೆ.