ಮತ್ತೊಮ್ಮೆ ಗೆದ್ದು ಬೀಗಿದ ಭಾರತ ! ನವಭಾರತದ ತಾಕತ್ತು ಅರ್ಥಮಾಡಿಕೊಂಡು ಚೀನಾ ಹೇಳಿದ್ದೇನು ಗೊತ್ತಾ?

ಮತ್ತೊಮ್ಮೆ ಗೆದ್ದು ಬೀಗಿದ ಭಾರತ ! ನವಭಾರತದ ತಾಕತ್ತು ಅರ್ಥಮಾಡಿಕೊಂಡು ಚೀನಾ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ದೇಶವು ಗಡಿಯಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಕಾರಣ ಚೀನಾ ದೇಶವು ಸುಖಾಸುಮ್ಮನೆ ಭಾರತದ ಜೊತೆ ಖ್ಯಾತೆ ತೆಗೆದಿತ್ತು.

ಗಡಿಯಲ್ಲಿ ಸೇನಾ ಜಮಾವಣೆ ಮಾಡುವುದು, ಭಾರತೀಯ ಸೈನಿಕರ ಜೊತೆ ಮಾತಿನ ವಾಗ್ವಾದ ನಡೆಸುವುದು, ತಳ್ಳಾಟ ಈ ರೀತಿಯ ಕೆಲಸಗಳ ಮೂಲಕ ಭಾರತವನ್ನು ಕೆಣಕಿತ್ತು. ಇದಕ್ಕೆ ಭಾರತ ದೇಶ ಕೂಡ ಸರಿಯಾದ ಉತ್ತರ ನೀಡಿ ಗಡಿಯಲ್ಲಿ ಸೇನಾ ಜಮಾವಣೆ ಹೆಚ್ಚಿಸಿ ಈ ಕೂಡಲೇ ಗಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ವೇಗವಾಗಿ ಪೂರ್ಣಗೊಳಿಸಲು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಕರೆದುಕೊಂಡು ಹೋಗುವುದಾಗಿ ಘೋಷಣೆ ಮಾಡಿ, ರಾಜ್ಯ ಸರ್ಕಾರಗಳ ಬಳಿ ಕಾರ್ಮಿಕರನ್ನು ಕಳಿಸುವಂತೆ ಮನವಿ ಮಾಡಿತ್ತು. ಇದಾದ ಬಳಿಕ ಶಾಂತಿ ಮಾತುಕತೆಗೆ ಕರೆದಿದ್ದ ಚೀನಾ ದೇಶವು ಇಂದು ಅಧಿಕೃತ ಘೋಷಣೆ ಮಾಡಿದೆ.

ಈ ಮಾತುಕತೆಗೂ ಮನ್ನಾ ಚೀನಾ ದೇಶವು ಗಡಿಯಲ್ಲಿ ವಿವಾದ ಸೃಷ್ಟಿಸಿದ ಜನರಲ್ ಕಮಾಂಡರ್ ರವರನ್ನು ವರ್ಗಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಕಳೆದ ಎರಡು ದಿನಗಳ ಹಿಂದೆ ಭಾರತ ಹಾಗೂ ಚೀನಾ ದೇಶಗಳ ಕಮಾಂಡರ್ ಗಳ ಮಟ್ಟದಲ್ಲಿ 12 ಸುತ್ತಿನ ಮಾತುಕತೆ ನಡೆಯಿತು, ಮೇಜರ್ ಜನರಲ್ ಮಟ್ಟದಲ್ಲಿ ಮೂರು ಬಾರಿ ಮಾತುಕತೆ ಕೂಡ ನಡೆಸಲಾಯಿತು. ಮೊದಲಿಗೆ ಮಾತುಕತೆಯ ಯಾವುದೇ ಮಾಹಿತಿಗಳು ಸಿಗಲಿಲ್ಲ. ಆದರೆ ಭಾರತ ದೇಶವು ಯಾವುದೇ ಕಾರಣಕ್ಕೂ ಗಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಇದೀಗ ಚೀನಾ ದೇಶ ತನ್ನ ಸ್ಪಷ್ಟನೆಯನ್ನು ನೀಡಿದೆ.

ಚೀನಾ ದೇಶದ ಕಮ್ಯುನಿಸ್ಟ್ ಪಾರ್ಟಿಯ ನಾಯಕಿ ಹಾಗೂ ವಿದೇಶಿ ಸಚಿವಾಲಯದ ವಕ್ತಾರೆ ಹುವಾ ಚುನಿಂಗ್ ರವರು ಮಾತನಾಡಿ, ಭಾರತ ಹಾಗೂ ಚೀನಾ ನಡುವೆ ಉದ್ಭವಿಸಿರುವ ಗಡಿ ವಿವಾದದ ಬಗ್ಗೆ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆಸಿದ್ದೇವೆ. ಇದರಲ್ಲಿ ಈ ರೀತಿಯ ಪರಿಸ್ಥಿತಿಯನ್ನು ಮುಂದುವರಿಸಲು ಇಚ್ಚಿಸದ ಕಾರಣ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎರಡು ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ. ಆದರೆ ಭಾರತ ದೇಶವು ಚೀನಾ ದೇಶದ ಯಾವುದೇ ಶರತ್ತುಗಳಿಗೆ ಒಪ್ಪಿಕೊಂಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಖಚಿತಪಡಿಸಿದ್ದು ಈ ಮೂಲಕ ಭಾರತವು ಡೋಕ್ಲಾಮ್ ಪ್ರದೇಶದ ವಿವಾದದಲ್ಲಿ ಜಯ ಗಳಿಸಿದಂತೆ ಈ ಬಾರಿಯೂ ಕೂಡ ಜಯಗಳಿಸಿ ಚೀನಾ ದೇಶವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ.