3 ಶ್ರೇಷ್ಠ ನಾಯಕರನ್ನು ಆಯ್ಕೆ ಮಾಡಿದ ಮಶ್ರಫ್ ಮೊರ್ತಾಜಾ ! ಅದರಲ್ಲೂ ಈ ಭಾರತೀಯನೇ ಶ್ರೇಷ್ಠ ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತಾ?

3 ಶ್ರೇಷ್ಠ ನಾಯಕರನ್ನು ಆಯ್ಕೆ ಮಾಡಿದ ಮಶ್ರಫ್ ಮೊರ್ತಾಜಾ ! ಅದರಲ್ಲೂ ಈ ಭಾರತೀಯನೇ ಶ್ರೇಷ್ಠ ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫ್ ಮೊರ್ತಾಜಾ ರವರು ಇಲ್ಲಿಯವರೆಗೆ ತಾವು ಕಂಡ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟ್ ನಾಯಕರನ್ನು ಆಯ್ಕೆ ಮಾಡಿದ್ದಾರೆ. ಒಟ್ಟಾರೆಯಾಗಿ ಮೂವರು ನಾಯಕರನ್ನು ಆಯ್ಕೆ ಮಾಡಿರುವ ಮಶ್ರಫ್ ಮೊರ್ತಾಜಾ ರವರ ಆಯ್ಕೆಗಳಲ್ಲಿ ಇಬ್ಬರು ಭಾರತೀಯರಾಗಿದ್ದಾರೆ. ಅಷ್ಟೇ ಅಲ್ಲದೆ ಈ ಮೂವರಲ್ಲೂ ಶ್ರೇಷ್ಠ ಯಾರು ಎಂಬ ಪ್ರಶ್ನೆಗೆ ಕೂಡ ಉತ್ತರ ನೀಡಿದ್ದಾರೆ.

ಹೌದು ಸ್ನೇಹಿತರೇ, ಇದೀಗ ಮಶ್ರಫ್ ಮೊರ್ತಾಜಾ ಅವರು ಮೂವರು ನಾಯಕರನ್ನು ಆಯ್ಕೆ ಮಾಡಿ ಎಂದಾಗ, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಂಎಸ್ ಧೋನಿ, ಸೌರವ್ ಗಂಗೂಲಿ ಹಾಗೂ ರಿಕಿ ಪಾಂಟಿಂಗ್ ಅವರನ್ನು ಕಾರಣಗಳ ಸಮೇತ ವಿವರಣೆ ನೀಡುವ ಮೂಲಕ ಆಯ್ಕೆ ಮಾಡಿದರು.

ಧೋನಿ ರವರನ್ನು ಆಯ್ಕೆ ಮಾಡಲು ಕಾರಣವೇನೆಂದರೆ, ಮಹೇಂದ್ರ ಸಿಂಗ್ ಧೋನಿ ರವರ ನೇತೃತ್ವದಲ್ಲಿ ಭಾರತವು ಐಸಿಸಿ ವಿಶ್ವಕಪ್ 2011, ಐಸಿಸಿ ಟಿ 20 ವಿಶ್ವಕಪ್ 2007, ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ 2013 ಸೇರಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಇನ್ನು ರಿಕಿ ಪಾಂಟಿಂಗ್ ಅವರು ಕೂಡ ತಮ್ಮ ತಂಡಕ್ಕೆ ಎರಡು ವಿಶ್ವಕಪ್ ಗಳನ್ನು ಗೆಲ್ಲಿಸಿದ್ದಾರೆ. ಆದರೆ ಇವರಿಬ್ಬರಿಗಿಂತ ಲೂ ಶ್ರೇಷ್ಠ ನಾಯಕನಾಗಿ ಸೌರವ್ ಗಂಗೂಲಿ ರವರು ವಿಭಿನ್ನ ರಾಗಿದ್ದಾರೆ, ಖಂಡಿತವಾಗಲೂ ಎಂಎಸ್ ಧೋನಿ ಹಾಗೂ ರಿಕಿ ಪಾಂಟಿಂಗ್ ಅವರಿಗಿಂತ ನಾನು ಸೌರವ್ ಗಂಗೂಲಿಯವರನ್ನು ಅಗ್ರಸ್ಥಾನದಲ್ಲಿ ನಿಲ್ಲಿಸುತ್ತೇನೆ. ಹಲವಾರು ವರ್ಷಗಳ ಅವಧಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿ, ತಂಡಕ್ಕೆ ಮರುಜೀವ ನೀಡುವ ಮೂಲಕ ವಿದೇಶಗಳಲ್ಲಿ ಪಂದ್ಯ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟು 2003ರಲ್ಲಿ ವಿಶ್ವಕಪ್ ಫೈನಲ್ ಗೆ ತಂಡವನ್ನು ಕೊಂಡೊಯ್ದಿದ್ದರು, ಇಂತಹ ನಾಯಕ ವಿಶ್ವದಲ್ಲಿಯೇ ಶ್ರೇಷ್ಠ ನಾಯಕರಾಗಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.