ಮಿಲಿಟರಿ ರಫ್ತು: ಭಾರತದ ಕದತಟ್ಟಿದ ಮತ್ತೊಂದು ದೇಶ ! ಕನಸಿನ ಯೋಜನೆಗೆ ಮತ್ತೊಂದು ರೆಕ್ಕೆ ! ಏನು ಗೊತ್ತಾ?

ಮಿಲಿಟರಿ ರಫ್ತು: ಭಾರತದ ಕದತಟ್ಟಿದ ಮತ್ತೊಂದು ದೇಶ ! ಕನಸಿನ ಯೋಜನೆಗೆ ಮತ್ತೊಂದು ರೆಕ್ಕೆ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತದ ಎಲ್ಲೆಡೆ ಸ್ವದೇಶಿ ನಿರ್ಮಿತ ವಸ್ತುಗಳನ್ನು ಬಳಸುವಂತೆ ಕೂಗು ಕೇಳಿಬರುತ್ತಿದೆ. ಇದರ ಜೊತೆಗೆ ಕೆಲವು ವರ್ಷಗಳ ಹಿಂದಿನಿಂದ ಭಾರತ ದೇಶವು ತನ್ನ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಲು ಮಿಲಿಟರಿ ಉತ್ಪನ್ನಗಳ ರಫ್ತಿಗೆ ಭಾರಿ ಒತ್ತು ನೀಡುತ್ತಿದೆ.

ಯಾವುದೇ ಒಂದು ದೇಶದ ಆರ್ಥಿಕತೆ ಬಲಿಷ್ಠವಾಗಬೇಕು ಎಂದರೇ ಖಂಡಿತ ಮಿಲಿಟರಿ ವಸ್ತುಗಳ ರಫ್ತ್ತುಬಹಳ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇತ್ತೀಚೆಗಷ್ಟೇ ಕೆಲವು ದಿನಗಳ ಹಿಂದೆ ಭಾರತೀಯ ತೇಜಸ್ ಯುದ್ಧ ವಿಮಾನಗಳನ್ನು ಕೊಂಡುಕೊಳ್ಳಲು ಹಲವಾರು ದೇಶಗಳು ಆಸಕ್ತಿ ತೋರಿದವು. ಇನ್ನು ರಷ್ಯಾ, ಪೋಲೆಂಡ್ ದೇಶಗಳು ಟೆಂಡರ್ ನಲ್ಲಿ ಭಾಗವಹಿಸಿದ್ದರೂ ಕೂಡ 3 ದೇಶಗಳ ವೆಪನ್ ಲೊಕೇಟಿಂಗ್ ರೇಡಾರ್ ಗಳ ಸಾಮರ್ಥ್ಯಗಳನ್ನು ಪರಿಶೀಲಿಸಿದ ಅರ್ಮೇನಿಯ ದೇಶವು ಭಾರತದ ಸ್ವಾತಿ ಲೊಕೇಶನ್ ರೇಡಾರ್ ವ್ಯವಸ್ಥೆಯನ್ನು ಕೊಂಡುಕೊಳ್ಳಲು ನಿರ್ಧಾರ ಮಾಡಿತ್ತು. ಇದೀಗ ಇದೇ ರೀತಿಯ ಮತ್ತೊಂದು ಒಪ್ಪಂದ ನಡೆಯುವ ಸಾಧ್ಯತೆಗಳಿದ್ದು ಈ ಬಾರಿ ಬ್ರಹ್ಮೋಸ್ ಕ್ಷಿಪಣಿಗೆ ಬಾರಿ ಬೇಡಿಕೆ ಕೇಳಿ ಬಂದಿದೆ.

ಹೌದು ಸ್ನೇಹಿತರೇ, ಫಿಲಿಪ್ಪೈನ್ಸ್ ದೇಶವು ಭಾರತ ಹಾಗೂ ರಷ್ಯಾ ದೇಶಗಳು ಸಂಯೋಜಿತವಾಗಿ ತಯಾರು ಮಾಡಿರುವ ಕ್ಷಿಪಣಿ ಗಳಾದ, ವಿಶ್ವದಲ್ಲಿಯೇ ಬಲಾಢ್ಯ ಕ್ಷಿಪಣಿ ಗಳಲ್ಲಿ ಒಂದಾಗಿರುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿ ಮಾಡಲು ಮುಂದೆ ಬಂದಿದೆ. ಭೂಮಿಯ ಮೇಲ್ಮೈನಿಂದ ಹಾರಿಸಬಹುದಾದ ಕ್ಷಿಪಣಿಗಳು ನಮಗೆ ಬೇಕಾಗಿವೆ. ಅದಕ್ಕಾಗಿ ಬ್ರಹ್ಮೋಸ್ ಕ್ಷಿಪಣಿಗಳನ್ನು ರಫ್ತ್ತು ಮಾಡುವಂತೆ ಒಪ್ಪಂದ ಮಾಡಿಕೊಳ್ಳಲು ಆಹ್ವಾನಿಸಿವೆ. ಈ ಮೂಲಕ ಮಿಲಿಟರಿ ಉತ್ಪನ್ನಗಳನ್ನು ರಫ್ತು ಮಾಡಲು ಒತ್ತು ನೀಡುತ್ತಿರುವ ಭಾರತ ದೇಶಕ್ಕೆ ಮತ್ತೊಂದು ಕಾಂಟ್ರಾಕ್ಟ್ ಸಿಗುವ ಸಾಧ್ಯತೆಗಳಿದ್ದು, ದಿನೇದಿನೇ ಭಾರತ ದೇಶವು ಮಿಲಿಟರಿ ಉತ್ಪನ್ನಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಚಿಕ್ಕ ಹೆಜ್ಜೆಗಳಾದರೂ ಹಾದಿಯಲ್ಲಿ ನಿಧಾನವಾಗಿ ಮುನ್ನಡೆಯುತ್ತಿದೆ.