ಚೀನಾಕ್ಕೆ ಮರ್ಮಘಾತ ! ಹೊಸ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ಆಸ್ಟ್ರೇಲಿಯಾ ! ಏನು ಗೊತ್ತಾ?

ಚೀನಾಕ್ಕೆ ಮರ್ಮಘಾತ ! ಹೊಸ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ಆಸ್ಟ್ರೇಲಿಯಾ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಚೀನಾ ದೇಶವು ಒಂದೆಡೆ ದಕ್ಷಿಣ ಚೀನಾ ಸಮುದ್ರ ದಲ್ಲಿ ತನ್ನ ಪಾರುಪತ್ಯ ಸ್ಥಾಪಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದು, ಜಪಾನ್ ಹಾಗೂ ಅಮೆರಿಕದಂತಹ ಬಲಾಢ್ಯ ರಾಷ್ಟ್ರಗಳು ಚೀನಾ ದೇಶದ ಈ ನಿರ್ಧಾರದ ವಿರುದ್ಧ ನಿಂತಿವೆ.

ಇಷ್ಟು ಸಾಲದು ಎಂಬಂತೆ ಮತ್ತೊಂದೆಡೆ ಹಿಂದೂ ಮಹಾಸಾಗರದಲ್ಲಿ ತನ್ನ ಪಾರುಪತ್ಯ ಸ್ಥಾಪಿಸಲು ಸುಖಾಸುಮ್ಮನೆ ಕ್ಯಾತೆ ತೆಗೆದು ಅಂತರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿ ಭಾರತೀಯ ನೌಕಾಪಡೆಯ ನಿದ್ದೆಗೆಡಿಸಿದೆ. ಚೀನಾ ದೇಶದ ಈ ಸಮುದ್ರ ಪಾರುಪತ್ಯದ ಆಸೆ ಕೇವಲ ಭಾರತ-ಅಮೆರಿಕ ದೇಶಗಳಿಗೆ ಅಷ್ಟೇ ಅಲ್ಲದೆ ವಿಶ್ವದ ಇನ್ನಿತರ ರಾಷ್ಟ್ರಗಳಿಗೂ ಸವಾಲಾಗಿ ಪರಿಣಮಿಸಿದೆ. ಇದನ್ನು ಗಮನಿಸಿದ ಆಸ್ಟ್ರೇಲಿಯಾ ದೇಶವು ಭಾರತದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿ ಪ್ರಸ್ತಾವ ಇರಿಸಿತ್ತು. ಇದೀಗ ಭಾರತ ದೇಶವು ಕೂಡ ಈ ಒಪ್ಪಂದಕ್ಕೆ ಒಪ್ಪಿಕೊಂಡಿದ್ದು ಇದೀಗ ನಡೆದಿರುವ ಮಹತ್ವದ ವರ್ಚುಯಲ್ ಕಾನ್ಫರೆನ್ಸ್ ನಲ್ಲಿ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ರವರು ಸಹಿ ಹಾಕಿದ್ದಾರೆ.

ಹೌದು ಅದುವೇ, ಮ್ಯೂಚುಯಲ್ ಲಾಜಿಸ್ಟಿಕ್ಸ್ ಒಪ್ಪಂದ ಈ ಒಪ್ಪಂದದ ಪ್ರಕಾರ ಭಾರತದ ಬಂದರುಗಳನ್ನು ಆಸ್ಟ್ರೇಲಿಯಾ ದೇಶವು ಮುಕ್ತವಾಗಿ ಆಹಾರ, ನೀರು ಮತ್ತು ಪೆಟ್ರೋಲಿಯಂ ನಂತಹ ವಸ್ತುಗಳಿಗಾಗಿ ಯಾವುದೇ ಪರಿಸ್ಥಿತಿಯಲ್ಲಿ ಬಳಸಿಕೊಳ್ಳಬಹುದು. ಅದೇ ರೀತಿ ಆಸ್ಟ್ರೇಲಿಯಾ ದೇಶದ ಬಂದರುಗಳನ್ನು ಭಾರತ ದೇಶವು ಮುಕ್ತವಾಗಿ ಬಳಸಿಕೊಳ್ಳಬಹುದು. ಇದರಿಂದ ಭಾರತ ದೇಶವು ಒಂದೆಡೆ ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುವುದಷ್ಟೇ ಅಲ್ಲದೆ ಮತ್ತೊಂದೆಡೆ ಪೆಸಿಫಿಕ್ ಸಾಗರದಲ್ಲಿಯು ಕೂಡ ಬಹಳ ಮುಕ್ತವಾಗಿ ವ್ಯಾಪಾರ ವ್ಯವಹಾರಗಳಿಗಾಗಿ ಸಮುದ್ರ ಪಥಗಳಲ್ಲಿ ಸುರಕ್ಷಿತವಾಗಿ ಸಂಚಾರ ಮತ್ತು ಹಾರಾಟದ ಸ್ವಾತಂತ್ರವನ್ನು ಪಡೆದುಕೊಂಡಿದೆ.

ಇದರಿಂದ ಆಸ್ಟ್ರೇಲಿಯಾ ದೇಶವು ಅಂಡಮಾನ್ ದ್ವೀಪದಲ್ಲಿ ಇರುವ ಭಾರತೀಯ ಮಿಲಿಟರಿ ನೆಲೆಯನ್ನು ಮುಕ್ತವಾಗಿ ಪ್ರವೇಶಿಸಬಹುದು ಮತ್ತು ಪೆಸಿಫಿಕ್ ಸಾಗರ ಗಳನ್ನು ಸಂಪರ್ಕಿಸುವ ಮಲಕ್ಕಾ ಜಲಸಂಧಿ ಪ್ರವೇಶಿಸುವ ಮೂಲಕ ಚೀನಾದ ಚಟುವಟಿಕೆಗಳನ್ನು ಬಹಳ ಸುಲಭವಾಗಿ ಗಮನಿಸಬಹುದು. ಇದರಿಂದ ಭಾರತಕ್ಕೆ ಕೂಡ ಮತ್ತಷ್ಟು ಲಾಭಗಳಿದ್ದು ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಭಾವವನ್ನು ಮಲಕ್ಕಾ ದಕ್ಷಿಣ ಜಲಸಂಧಿ ಯವರಿಗೆ ವಿಸ್ತರಣೆ ಮಾಡಬಹುದು. ಪ್ರಸ್ತುತ ಭೌಗೋಳಿಕ ಆಧಾರದ ಪ್ರಕಾರ ಮಲಕ್ಕಾ ಜಲಸಂಧಿ ವಾಯುವ್ಯಕ್ಕೆ ಮಾತ್ರ ಭಾರತದ ಬೀರಬಹುದು. ಇದರಿಂದ ಭಾರತಕ್ಕೆ ಮಲಕ್ಕಾ ಜಲಸಂಧಿಯ ಆಗ್ನೇಯ ದಿಕ್ಕಿನಲ್ಲಿ ಚೀನಾ ಏನೇ ಮಾಡಿದರು ಗಮನಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಚೀನಾದ ಚಲನವಲನಗಳನ್ನು ಹಿಂದೂ ಮಹಾಸಾಗರದಲ್ಲಿ ಮತ್ತಷ್ಟು ತೀಕ್ಷ್ಣವಾಗಿ ಗಮನಿಸಬಹುದಾಗಿದೆ.