ಸಾರ್ವಕಾಲಿಕ ಐಪಿಎಲ್ ತಂಡವನ್ನು ಘೋಷಣೆ ಮಾಡಿದ ಜೆಪಿ ಡುಮಿನಿ ! ಸ್ಥಾನ ಪಡೆದ ಇಬ್ಬರು ಭಾರತೀಯರು ಯಾರ್ ಯಾರು ಗೊತ್ತಾ?

ಸಾರ್ವಕಾಲಿಕ ಐಪಿಎಲ್ ತಂಡವನ್ನು ಘೋಷಣೆ ಮಾಡಿದ ಜೆಪಿ ಡುಮಿನಿ ! ಸ್ಥಾನ ಪಡೆದ ಇಬ್ಬರು ಭಾರತೀಯರು ಯಾರ್ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ದಕ್ಷಿಣ ಆಫ್ರಿಕಾ ತಂಡದ ಖ್ಯಾತ ಆಟಗಾರರಲ್ಲಿ ಒಬ್ಬರಾಗಿದ್ದ ಮಾಜಿ ಕ್ರಿಕೆಟಿಗ ಜೆಪಿ ಡುಮಿನಿ ರವರು ಇದೀಗ ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಘೋಷಣೆ ಮಾಡಿದ್ದಾರೆ.

ಕೇವಲ ನಾಲ್ಕು ವಿದೇಶಿ ಆಟಗಾರರಿಗೆ ಮಾತ್ರ ಐಪಿಎಲ್ ತಂಡದಲ್ಲಿ ಅವಕಾಶ ನೀಡಲಾಗುತ್ತದೆ ಎಂಬ ಕಾನೂನನ್ನು ಪಕ್ಕಕ್ಕೆ ಇಟ್ಟು ಈ ತಂಡ ಆಯ್ಕೆ ಮಾಡಿರುವುದಾಗಿ ಹೇಳಿಕೊಂಡಿರುವ ಜೆಪಿ ಡುಮಿನಿ ರವರು ಕೇವಲ ಇಬ್ಬರು ಭಾರತೀಯರನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ಆರಂಭಿಕರಾಗಿ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ ಹಾಗೂ ಆಸ್ಟ್ರೇಲಿಯಾ ತಂಡದ ಆಡಮ್ ಗಿಲ್ ಕ್ರಿಸ್ಟ್ ರವರನ್ನು ಜೆಪಿ ಡುಮಿನಿ ರವರು ಆಯ್ಕೆ ಮಾಡಿದ್ದಾರೆ.

ಮೂರನೇ ಕ್ರಮಾಂಕಕ್ಕೆ ವಿರಾಟ್ ಕೊಹ್ಲಿ ತಂಡದಲ್ಲಿ ಇದ್ದರೂ ಕೂಡ ರೋಹಿತ್ ಶರ್ಮ ರವರನ್ನು ಆಯ್ಕೆಮಾಡಿ ನಾಲ್ಕನೇ ಕ್ರಮಾಂಕಕ್ಕೆ ವಿರಾಟ್ ಕೊಹ್ಲಿ ರವರನ್ನು ವರ್ಗಾಯಿಸಿದ್ದಾರೆ. ಉಳಿದಂತೆ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ರವರು ಐದನೇ ಕ್ರಮಾಂಕದಲ್ಲಿ ಇರುವಂತೆ ತಂಡ ರಚನೆ ಮಾಡಿದ್ದಾರೆ.

ಆಲ್-ರೌಂಡರ್ ಗಳ ಕೋಟಾದಲ್ಲಿ ವೆಸ್ಟ್ ಇಂಡೀಸ್ ತಂಡದ ಇಬ್ಬರು ಆಲ್-ರೌಂಡರ್ ಗಳಾದ ಕಿರನ್ ಪೊಲಾರ್ಡ್ ಹಾಗೂ ಆಂಡ್ರ್ಯೂ ರಸ್ಸೇಲ್ ರವರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಇಬ್ಬರು ಫಾಸ್ಟ್ ಬೌಲರ್ ಗಳನ್ನು ಆಯ್ಕೆ ಮಾಡಿರುವ ಜೆಪಿ ಡುಮಿನಿ ರವರು ಬ್ರೆಟ್ ಲೀ ಹಾಗೂ ಲಸಿತ್ ಮಲಿಂಗ ಅವರನ್ನು ಆಯ್ಕೆ ಮಾಡಿದ್ದಾರೆ. ಸ್ಪಿನ್ನರ್ ಗಳ ಸ್ಥಾನವನ್ನು ಶ್ರೀಲಂಕಾ ಕ್ರಿಕೆಟಿನ ದಂತಕಥೆ ಮುತ್ತಯ್ಯ ಮುರಳೀಧರನ್ ಹಾಗೂ ಸೌತ್ ಆಫ್ರಿಕಾ ತಂಡದ ಬೌಲರ್ ಇಮ್ರಾನ್ ತಾಹಿರ್ ರವರು ಪಡೆದು ಕೊಂಡಿದ್ದಾರೆ. ಒಟ್ಟಾರೆಯಾಗಿ ತಂಡ ಈ ಕೆಳಗಿನಂತಿದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

ಜೆಪಿ ಡುಮಿನಿಯವರ ಸಾರ್ವಕಾಲಿಕ ಐಪಿಎಲ್ ಇಲೆವೆನ್: ಕ್ರಿಸ್ ಗೇಲ್, ಆಡಮ್ ಗಿಲ್‌ಕ್ರಿಸ್ಟ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಕೀರನ್ ಪೊಲಾರ್ಡ್, ಆಂಡ್ರೆ ರಸ್ಸೆಲ್, ಬ್ರೆಟ್ ಲೀ, ಮುತ್ತಯ್ಯ ಮುರಳೀಧರನ್, ಲಸಿತ್ ಮಾಲಿಂಗ, ಇಮ್ರಾನ್ ತಾಹಿರ್‌