ಜ್ಯೋತಿಷ್ಯ ಶಾಸ್ತ್ರ: ಜೂನ್ ನಲ್ಲಿ ಗ್ರಹಗಳ ಬದಲಾವಣೆಯಿಂದ ಉಂಟಾಗುವ ನಿಮ್ಮ ರಾಶಿಗಳ ಫಲಾಫಲಗಳ ಬಗ್ಗೆ ತಿಳಿದುಕೊಳ್ಳಿ

ಜ್ಯೋತಿಷ್ಯ ಶಾಸ್ತ್ರ: ಜೂನ್ ನಲ್ಲಿ ಗ್ರಹಗಳ ಬದಲಾವಣೆಯಿಂದ ಉಂಟಾಗುವ ನಿಮ್ಮ ರಾಶಿಗಳ ಫಲಾಫಲಗಳ ಬಗ್ಗೆ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ, ಜೂನ್ ತಿಂಗಳಿನಲ್ಲಿ ಅನೇಕ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿಚಕ್ರ ಬದಲಾವಣೆ ಒಂದು ಪ್ರಮುಖ ಘಟನೆಯಾಗಿದ್ದು, ಇದು ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.

ಈ ಜೂನ್ ತಿಂಗಳಿನಲ್ಲಿ ಚಂದ್ರ ಹಾಗೂ ಸೂರ್ಯ ಗ್ರಹಣ ಕೂಡ ಬರಲಿದೆ. ಜೂನ್ 15ರಂದು ಬೆಳಗ್ಗೆ 12:10 ಕ್ಕೆ (AM), ಸೂರ್ಯನು ಮಿಥುನ ರಾಶಿ ಯನ್ನು ಪ್ರವೇಶಿಸುತ್ತಾನೆ. ಜೂನ್ 18 ರಂದು ಮಂಗಳ ಗ್ರಹವು ಮೀನ ರಾಶಿಯನ್ನು ಪ್ರವೇಶಿಸಲಿದೆ. ಅದೇ ದಿನದಂದು ಬುಧ ಗ್ರಹವು ಮಿಥುನ ರಾಶಿಯಲ್ಲಿ ಸಂಚಾರ ಆರಂಭಿಸಲಿದೆ. ಇನ್ನು ಗುರುವಿನ ರಾಶಿಚಕ್ರ ಬದಲಾವಣೆ 30ನೇ ತಾರೀಕಿನಂದು ಬೆಳಗಿನ ಜಾವ 03:07 ಕ್ಕೆ ನಡೆಯಲಿದ್ದು ವೃಷಭ ರಾಶಿಯಲ್ಲಿ ಜೂನ್ 25ನೇ ತಾರೀಕಿನಂದು ಮಧ್ಯಾಹ್ನ 12:17 ಕ್ಕೆ ಶುಕ್ರ ಸಂಚಾರ ಮಾಡಲಿದೆ. ಎಲ್ಲಾ ಗ್ರಹಗಳ ಬದಲಾವಣೆಯು ಖಂಡಿತವಾಗಲೂ ಪ್ರತಿಯೊಂದು ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಹಾಗಿದ್ದರೆ ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪ್ರಭಾವಗಳು ಇರಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ: ಉದ್ಯೋಗದಾತರಿಗೆ ಈ ಸಮಯ ಬಹಳ ಉತ್ತಮವಾಗಿರುತ್ತದೆ. ಯಾವುದೇ ವ್ಯಾಪಾರಸ್ಥರು ಯಶಸ್ಸನ್ನು ಗಳಿಸಲು ಹೆಚ್ಚು ಶ್ರಮಿಸಲೇ ಬೇಕು. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶವನ್ನು ಈ ಸಮಯದಲ್ಲಿ ಪಡೆಯುತ್ತಾರೆ. ದಂಪತಿಗಳಿಗೆ ಗ್ರಹಗಳ ಸ್ಥಾನವು ಸಾಮಾನ್ಯ ವಾಗಿರುತ್ತದೆ, ಹೆಚ್ಚಾಗಿ ಯಾವುದೇ ಪ್ರಭಾವ ಬೀರುವುದಿಲ್ಲ ಹಾಗೂ ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷವು ಹೆಚ್ಚಾಗುತ್ತದೆ.

ವೃಷಭ ರಾಶಿ: ಗ್ರಹಗಳ ಸ್ಥಾನವನ್ನು ನೋಡಿದರೇ, ಮುಂಬರುವ ಸಮಯವು ನಿಮಗೆ ಕೊಂಚ ಸವಾಲಾಗಿ ಪರಿಣಮಿಸುವ ಲಕ್ಷಣಗಳು ಕಾಣುತ್ತಿವೆ. ಮುಖ್ಯವಾಗಿ ನಿಮ್ಮ ಮಾತನ್ನು ನೀವು ನಿಯಂತ್ರಣದಲ್ಲಿ ಇಟ್ಟಿಕೊಳ್ಳಬೇಕು. ಯಾವುದೇ ಸವಾಲುಗಳು ಎದುರಾಗಲಿ ನೀವು ಕಷ್ಟಪಟ್ಟು ಕೆಲಸ ಮಾಡಿದರೇ, ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ. ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ ಪಡೆಯುವ ಬಯಕೆ ಅಪೂರ್ಣ ವಾಗಬಹುದು. ಪ್ರತಿ ಕಷ್ಟದ ಸಮಯದಲ್ಲೂ ಪ್ರೀತಿಯ ಸಂಗಾತಿ ಬೆಂಬಲ ನೀಡುತ್ತಾರೆ. ನಿಮ್ಮ ಗೌರವ ಸಮಾಜದಲ್ಲಿ ಹೆಚ್ಚಾಗುತ್ತದೆ. ಆರ್ಥಿಕ ಭಾಗವು ಶುಕ್ರ ಬದಲಾದ ತಕ್ಷಣ ಬಲಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮಿಥುನ: ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ನಿಮ್ಮ ಕ್ಷೇತ್ರದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಕಾಣಬಹುದು. ನಿಮ್ಮ ಕುಟುಂಬ ಸದಸ್ಯರಲ್ಲಿ ಸಾಮರಸ್ಯದ ಪರಿಸ್ಥಿತಿಯನ್ನು ನೋಡಿ ನಿಮಗೆ ಬಹಳ ಸಂತೋಷವಾಗುತ್ತದೆ. ಸಾಧ್ಯವಾದಷ್ಟು ಪ್ರಯಾಣವನ್ನು ಕಡಿಮೆ ಮಾಡಿ. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಒಳ್ಳೆಯದಾಗಿದೆ. ಕೆಲಸ ಅಥವಾ ಅಧ್ಯಯನಗಳಿಗೆ ಸಂಬಂಧಿಸಿದಂತೆ ಈ ತಿಂಗಳು ನಿಮ್ಮ ಪ್ರೇಯಸಿ ನಿಮ್ಮಿಂದ ದೂರ ಹೋಗಬಹುದು.

ಕರ್ಕಾಟಕ: ನೀವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು, ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸರಿಯಾದ ಸಮನ್ವಯವನ್ನು ಕಾಪಾಡಿಕೊಳ್ಳುವ ಅವಶ್ಯಕತೆಯಿದೆ. ಕೌಟುಂಬಿಕ ನೆಮ್ಮದಿ ಈ ತಿಂಗಳಿನಲ್ಲಿ ಸಿಗುತ್ತದೆ, ಅಂದರೆ ಕುಟುಂಬದ ಜೊತೆ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ. ಸಣ್ಣ ಪ್ರವಾಸಗಳ ಅವಕಾಶಗಳನ್ನು ನಿಮಗೆ ಸಿಗಲಿದೆ. ಕೆಲಸಗಳಲ್ಲಿ ನಿಮ್ಮ ಕುಟುಂಬ ಸದಸ್ಯರಿಂದ ಬೆಂಬಲವನ್ನು ಪಡೆಯುತ್ತೀರಿ, ಈ ಕಾರಣದಿಂದಾಗಿ ನೀವು ದೊಡ್ಡ ಸಮಸ್ಯೆಗಳನ್ನು ಸಹ ಬಹಳ ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ಹಿಂದಿನ ಮಾನಸಿಕ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

ಸಿಂಹ: ಈ ತಿಂಗಳು ಕೆಲವು ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ. ದೀರ್ಘ ಕಾಲದಿಂದಲೂ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮ ಕೆಲಸಗಳಿಗೆ ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಕಾನೂನು/ವಾದದ ವಿಷಯಗಳಲ್ಲಿ ನಿರ್ಧಾರಗಳು ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಜಾಗರೂಕತೆಯಿಂದ ಇರಬೇಕು.

ಕನ್ಯಾರಾಶಿ: ನಿಮ್ಮ ಎಲ್ಲಾ ಕೆಲಸಗಳಲ್ಲೂ ನಿಮಗೆ ಯಶಸ್ಸು ಸಿಗುತ್ತದೆ. ಕುಟುಂಬಸ್ಥರಿಂದ ಕೊಂಚ ಒತ್ತಡದ ಪರಿಸ್ಥಿತಿ ಉಂಟಾಗುತ್ತದೆ. ಜೂನ್ ಕೊನೆಯಲ್ಲಿ ನಿಮ್ಮ ವಿರೋಧಿಗಳಿಂದ ಸ್ವಲ್ಪ ಜಾಗರೂಕರಾಗಿರಬೇಕು. ಅದೃಷ್ಟ ನಿಮ್ಮೊಂದಿಗಿದೆ, ಪ್ರಯಾಣಕ್ಕೆ ಅನುಕೂಲವಾಗಿದೆ. ವ್ಯವಹಾರದಲ್ಲಿ ನಿಮ್ಮ ಕೆಲಸದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸುತ್ತೀರಿ, ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ತುಲಾ ರಾಶಿಚಕ್ರ: ಗ್ರಹಗಳ ಸ್ಥಾನದಿಂದಾಗಿ, ನಿಮ್ಮ ಕೆಲವು ಹಳೆಯ ರಹಸ್ಯಗಳು ಹೊರಬರಬಹುದು, ಇದರಿಂದಾಗಿ ನೀವು ನಷ್ಟ ಅನುಭವಿಸುವ ಸಾಧ್ಯತೆ ಕೊಂಚ ಹೆಚ್ಚಾಗಿದೆ. ನೀವು ತಪ್ಪು ಮಾಡಿದ್ದರೇ, ಅದನ್ನು ಒಪ್ಪಿಕೊಳ್ಳುವುದು ಉತ್ತಮ. ದೀರ್ಘ ಕಾಲದ ಪ್ರಯಾಣವು ಪ್ರಯೋಜನಕಾರಿ ಹಾಗೂ ಲಾಭಕಾರಿಯಾಗಿರುತ್ತದೆ. ಕುಟುಂಬಿಕ ವಿಷಯದ್ದ ಬಗ್ಗೆ ಮಾತನಾಡುವುದಾದರೇ ಶನಿ ಗ್ರಹದ ಯೋಗವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.

ವೃಶ್ಚಿಕ ರಾಶಿಚಕ್ರ: ವೃಶ್ಚಿಕ ರಾಶಿಚಕ್ರ ದವರು ಈ ತಿಂಗಳು ತಾವು ಮಾಡುವ ಯಾವುದೇ ಕೆಲಸ ದಲ್ಲಾಗಲಿ ಆತ್ಮವಿಶ್ವಾಸದಿಂದ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮಲ್ಲಿ ಸೋಮಾರಿತನದ ಹೆಚ್ಚಳವಿರಬಹುದು, ಅದು ನಿಮ್ಮ ಪ್ರಮುಖ ಕಾರ್ಯಗಳನ್ನು ತಪ್ಪಿಸುತ್ತದೆ ಆದ ಕಾರಣ ಸೋಮಾರಿತನ ಬಿಟ್ಟು ಆತಮವಿಶ್ವಾಸದಿಂದ ಮುನ್ನುಗ್ಗಿ. ಪೋಷಕರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ. ಈ ತಿಂಗಳು ಸಾಮಾನ್ಯವಾಗಿ ದಂಪತಿಗಳಿಗೆ ಒಳ್ಳೆಯದು.

ಧನಸ್ಸು ರಾಶಿ: ಈ ರಾಶಿಯವರು ಅರ್ಧ ಶತಮಾನದ ಪ್ರಭಾವವನ್ನು ಹೊಂದಿದ್ದಾರೆ, ಇದು ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಹಣದ ವಿಷಯದಲ್ಲಿ ಈ ಸಮಯದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ರಾಶಿ ಈ ಬಾರಿ ಹಿಮ್ಮೆಟ್ಟುವ ಸ್ಥಿತಿಯಲ್ಲಿ ಇದೆ, ಈ ಕಾರಣದಿಂದಾಗಿ ನೀವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮಗೆ ಸಂಬಂಧ ವಿಲ್ಲದ ವಾದಗಳಿಗಾಗಲಿ ಅಥವಾ ವ್ಯಾಜ್ಯಗಳ ವಿಷಯದಲ್ಲಿ ಮೂಗು ತೂರಿಸಬೇಡಿ.

ಮಕರ: ಇವರು ಪ್ರಯಾಣಕ್ಕೆ ಹೋಗಲು ಅವಕಾಶ ಪಡೆಯುತ್ತಾರೆ. ನಿಮಗೆ ಸಮಾಜದಲ್ಲಿ ಸಿಗುತ್ತಿರುವ ಗೌರವ ಹೆಚ್ಚಾಗುತ್ತದೆ. ಕಾನೂನಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವವರು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ವಿಷಯಗಳು ನಿಮ್ಮ ಪರವಾಗಿರುತ್ತವೆ. ಆರ್ಥಿಕ ವಿಷಯಗಳಲ್ಲಿಯೂ ಉತ್ತಮ ಫಲಿತಾಂಶಗಳನ್ನು ಕಾಣಬಹುದು. ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೇ, ಶುಕ್ರನ ಉಪಸ್ಥಿತಿಯು ಈ ತಿಂಗಳ ಪ್ರೀತಿಯಲ್ಲಿ ನಿಮ್ಮನ್ನು ಹುಚ್ಚರನ್ನಾಗಿ ಮಾಡಬಹುದು.

ಕುಂಭ: ನೀವು ಅತಿಯಾಗಿ ಯೋಚನೆ ಮಾಡುವ ಅಭ್ಯಾಸವನ್ನು ತಪ್ಪಿಸಬೇಕು, ಏಕೆಂದರೆ ಇದು ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಸಮಯದಲ್ಲಿ ನಿಮ್ಮ ಮಗುವಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ಖರ್ಚನ್ನು ಕಡಿಮೆ ಮಾಡಬೇಕು. ವಾಹನ ಖರೀದಿ ಮಾಡುವವರಿಗೆ ಒಳ್ಳೆಯ ಸಮಯವಾಗಿದೆ.

ಮೀನ: ಈ ತಿಂಗಳು ನೀವು ಕೂಡ ಹೆಚ್ಚು ಯೋಚನೆ ಮಾಡುವ ಅಭ್ಯಾಸವನ್ನು ಕಡಿಮೆ ಮಾಡಬೇಕು, ಈ ಸಮಯದಲ್ಲಿ ನೀವು ಮಾನಸಿಕವಾಗಿ ಹೆಚ್ಚು ಶ್ರಮಿಸುತ್ತೀರಿ. ನಿಮ್ಮ ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಬರುತ್ತದೆ, ಮೂರನೇ ಮನೆಯಲ್ಲಿ ಸೂರ್ಯ ಇರುವ ಕಾರಣ ನಿಮಗೆ ಸರ್ಕಾರಿ ವಲಯದಲ್ಲಿ ಉತ್ತಮ ಫಲಿತಾಂಶಗಳು ಸಿಗುತ್ತದೆ. ನಿಮ್ಮ ತಾಯಿಯ ಆರೋಗ್ಯದ ಕುರಿತು ದಯವಿಟ್ಟು ಗಮನಹರಿಸಿ ಯಾಕೆಂದರೆ ಸೂರ್ಯನು ನಿಮ್ಮ ರಾಶಿಚಕ್ರದಲ್ಲಿ ಚಲಿಸುತ್ತಿರುವ ಕಾರಣ ಕೊಂಚ ಪರಿಣಾಮ ಬೀರುವ ಸಾಧ್ಯತೆಗಳಿವೆ.