ಹೊರಬಿತ್ತು ಮೊದಲ ಅಧಿಕೃತ ಆದೇಶ, ಚೀನಾಗೆ ಕೈ, ಭಾರತಕ್ಕೆ ಜೈ ಎಂದ ಲಾವಾ ! ಏನು ಗೊತ್ತಾ?

ಹೊರಬಿತ್ತು ಮೊದಲ ಅಧಿಕೃತ ಆದೇಶ, ಚೀನಾಗೆ ಕೈ, ಭಾರತಕ್ಕೆ ಜೈ ಎಂದ ಲಾವಾ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕೊರೋನ ವೈರಸ್ ಪ್ರಭಾವ ವಿಶ್ವದ ಎಲ್ಲೆಡೆ ಕಡಿಮೆಯಾದ ಮೇಲೆ ಮಹತ್ವದ ಬದಲಾವಣೆಗಳು ನಡೆಯುತ್ತವೆ. ಆರ್ಥಿಕತೆ, ಉದ್ಯೋಗ ಹಾಗೂ ಇನ್ನಿತರ ಪ್ರಮುಖ ವಿಷಯಗಳಲ್ಲಿ ಹಲವಾರು ದೇಶಗಳಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತವೆ ಎಂಬ ಮಾತುಗಳು ಕೇಳಿಬಂದಿದ್ದವು.

ಅದರಲ್ಲಿಯೂ ಚೀನಾ ದೇಶದಿಂದ ಹಲವಾರು ಉತ್ಪಾದನಾ ಘಟಕಗಳು ಹೊರ ಬಂದು ಇತರ ದೇಶಗಳಲ್ಲಿ ಉತ್ಪಾದನಾ ಘಟಕಗಳನ್ನು ಆರಂಭಿಸಲಿವೆ ಎಂದು ತಿಳಿದು ಬಂದಿತ್ತು. ಭಾರತಕ್ಕೆ ಸ್ಥಳಾಂತರ ಮಾಡಲು ಸಾವಿರಕ್ಕೂ ಹೆಚ್ಚು ಕಂಪನಿಗಳು ಆಸಕ್ತಿ ತೋರಿವೆ, ಈಗಾಗಲೇ 300 ಕ್ಕೂ ಹೆಚ್ಚು ಕಂಪನಿಗಳು ಮಾತುಕತೆ ಆರಂಭಿಸಿವೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಇಲ್ಲಿ ರೇಸ್ ನಲ್ಲಿ ಕೇವಲ ಭಾರತ ದೇಶ ಮಾತ್ರವಲ್ಲ, ಬದಲಾಗಿ ವಿಯೆಟ್ನಾಮ್ ಹಾಗೂ ಆಗ್ನೇಯ ಏಷ್ಯಾದ ಕೆಲವು ರಾಷ್ಟ್ರಗಳು ಕಂಪನಿಗಳನ್ನು ತಮ್ಮತ್ತ ಸೆಳೆಯಲು ಬಾರಿ ಯೋಜನೆಗಳು ರೂಪಿಸಿ ಕೊಂಡಿದ್ದವು.

ಇದರ ನಡುವೆಯೇ ಇದೀಗ ಮೊದಲ ಅಧಿಕೃತ ಆದೇಶ ಹೊರ ಬಿದ್ದಿದ್ದು, ಭಾರತದ ಮೊಬೈಲ್ ತಯಾರಕ ಸಂಸ್ಥೆಯಾದ ಲಾವಾ ಕಂಪನಿಯು ಚೀನಾದಲ್ಲಿ ಈಗಾಗಲೇ ಇರುವ ತನ್ನ ವಿನ್ಯಾಸ, ತಯಾರಿಕೆ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳನ್ನು ಭಾರತಕ್ಕೆ ಸ್ಥಳಾಂತರ ಮಾಡುತ್ತಿದ್ದೇವೆ ಮುಂದಿನ ಐದು ವರ್ಷಗಳಲ್ಲಿ 800 ಕೋಟಿ ಬಂಡವಾಳವನ್ನು ಕೇವಲ ನಾವು ಭಾರತದಲ್ಲಿ ಹೂಡಿಕೆ ಮಾಡಲಿದ್ದೇವೆ. ಹಂತಹಂತವಾಗಿ ನಾವು ಚೀನಾ ದೇಶದಿಂದ ಸಂಪೂರ್ಣ ಹೊರ ಬಂದು ಭಾರತದಲ್ಲಿ ಉತ್ಪಾದನಾ ಘಟಕ ಆರಂಭಿಸುತ್ತೇವೆ ಎಂದು ಲಾವಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹರಿ ಓಂ ರಾಯ್ ರವರು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಇದೀಗ ಕಂಪನಿಗಳ ಸ್ಥಳಾಂತರ ಪರ್ವ ಆರಂಭವಾಗಿದ್ದು ಭಾರತದಲ್ಲಿ ಮತ್ತಷ್ಟು ಕಂಪನಿಗಳು ಉತ್ಪಾದನಾ ಘಟಕಗಳನ್ನು ಆರಂಭಿಸಲಿ ಎಂಬುದೇ ನಮ್ಮ ಆಶಯ.