ಚೀನಾಗೆ ಮರ್ಮಾಘಾತ ! ಭಾರತೀಯರಿಗೆ ಲಾವಾ ಕಂಪನಿಯ ನಿರ್ಧಾರದ ಬೆನ್ನಲ್ಲೇ ಮತ್ತೊಂದು ಭರ್ಜರಿ ಸಿಹಿಸುದ್ದಿ ! ಏನು ಗೊತ್ತಾ?

ಚೀನಾಗೆ ಮರ್ಮಾಘಾತ ! ಭಾರತೀಯರಿಗೆ ಲಾವಾ ಕಂಪನಿಯ ನಿರ್ಧಾರದ ಬೆನ್ನಲ್ಲೇ ಮತ್ತೊಂದು ಭರ್ಜರಿ ಸಿಹಿಸುದ್ದಿ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಚೀನಾ ದೇಶಕ್ಕೆ ವಿದೇಶಿ ಕಂಪನಿಗಳು ದಿನಕ್ಕೊಂದು ಶಾಕ್ ನೀಡುತ್ತಿವೆ. ನಿಮಗೆಲ್ಲರಿಗೂ ತಿಳಿದಿರುವಂತೆ ವಿವಿಧ ಕಾರಣಗಳಿಂದ ಹಲವಾರು ವಿದೇಶಿ ಕಂಪನಿಗಳು ಚೀನಾ ದೇಶವನ್ನು ಬಿಟ್ಟು ಹೊರ ಬರುತ್ತಿವೆ.

ಕಳೆದ ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ (ನಿನ್ನೇ) ಭಾರತೀಯ ಮೂಲದ ಮೊಬೈಲ್ ಸಂಸ್ಥೆಯಾಗಿರುವ ಲಾವಾ ಕಂಪನಿಯು ಚೀನಾ ದೇಶದಲ್ಲಿರುವ ತನ್ನೆಲ್ಲ ಘಟಕಗಳನ್ನು ಚೀನಾ ದೇಶದಿಂದ ಸ್ಥಳಾಂತರ ಮಾಡಿ ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ 800 ಕೋಟಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಜರ್ಮನ್ ದೇಶದ ಕಂಪನಿ ಕೂಡ ಇದೇ ಹಾದಿ ಹಿಡಿದಿದೆ.

ಹೌದು ಸ್ನೇಹಿತರೇ, ಇದೀಗ ಜರ್ಮನ್ ದೇಶದ ವಾನ್ ವೆಲ್ಸ್ ಕಂಪನಿಯು ತನ್ನ ಸಂಪೂರ್ಣ ಉತ್ಪಾದನಾ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸಲು ಸಜ್ಜಾಗಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ ಈಗಾಗಲೇ ಸ್ಥಳ ಗುರುತಿಸಿ ಉತ್ಪಾದನಾ ಘಟಕವನ್ನು ಆರಂಭಿಸಲು ತಯಾರಿ ನಡೆಸಲಾಗುತ್ತಿದೆ. ನೇರವಾಗಿ ಈ ಕಂಪನಿಯು ಇದೀಗ ಭಾರತದಲ್ಲಿ ಹತ್ತು ಸಾವಿರ ಉದ್ಯೋಗಗಳನ್ನು ಸೃಷ್ಟಿ ಮಾಡಲಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗೆ ಮತ್ತಷ್ಟು ಬಲ ಬಂದಂತಾಗಿದ್ದು, ಸ್ವಾವಲಂಬಿ ಭಾರತ ಎಂಬ ಕನಸಿಗೆ ಮತ್ತಷ್ಟು ರೆಕ್ಕೆ ಬಂದಿದೆ. ದಿನೇ ದಿನೇ ಹೀಗೆ ಮುಂದುವರೆದಲ್ಲಿ, ಭಾರತ ದೇಶ ಸ್ವಾವಲಂಬಿಯಾಗಿ ರಾರಾಜಿಸಲಿದೆ.