ಚೀನಾ ಆಮದಿಗೆ ಮತ್ತೊಮ್ಮೆ ಬ್ರೇಕ್ ! ಕೆಲವೇ ದಿನಗಳಲ್ಲಿ ನೂರಾರು ಕೋಟಿ ಉಳಿಸುತ್ತಿದೆ ಭಾರತ ! ಹೇಗೆ ಗೊತ್ತಾ?

ಚೀನಾ ಆಮದಿಗೆ ಮತ್ತೊಮ್ಮೆ ಬ್ರೇಕ್ ! ಕೆಲವೇ ದಿನಗಳಲ್ಲಿ ನೂರಾರು ಕೋಟಿ ಉಳಿಸುತ್ತಿದೆ ಭಾರತ ! ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ದೇಶವು ಸ್ವಾವಲಂಬಿ ಭಾರತ ವಾಗಲು ಇನ್ನಿಲ್ಲದ ತಯಾರಿ ನಡೆಸುತ್ತಿದೆ. ಇತರ ದೇಶಗಳ ಮೇಲಿನ ಅವಲಂಬನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಅದರಲ್ಲಿಯೂ ಚೀನಾ ದೇಶದಿಂದ ಆಮದಾಗುವ ಸರಕುಗಳನ್ನು ತಗ್ಗಿಸುವ ಹಾದಿಯತ್ತ ಗಮನ ಹರಿಸುತ್ತಿದೆ.

ಹೀಗಿರುವಾಗ ಕೆಲವರು ಇದನ್ನು ತಮಾಷೆ ಮಾಡುತ್ತಿದ್ದಾರೆ, ಕೆಲವರು ಹಾಗಿದ್ದರೆ ಇನ್ನು ಮುಂದೆ ಯಾವುದೇ ಸಾಮಗ್ರಿಗಳು ವಿದೇಶದಿಂದ ಬರುವುದಿಲ್ಲವೇ? ವಿದೇಶಿ ವಸ್ತುಗಳ ಬಳಕೆ ಮಾಡುವುದೇ ಇಲ್ಲವೇ? ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಿದ್ದಾರೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೇ ಖಂಡಿತ ನಾವು ವಿದೇಶದಿಂದ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಆದರೆ ಹಂತ ಹಂತವಾಗಿ ನಮ್ಮಲ್ಲಿಯೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ, ಜನರಿಗೆ ಉದ್ಯೋಗ ನೀಡಿ, ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ಹಾದಿಯಲ್ಲಿ ಭಾರತ ದಿಟ್ಟ ಹೆಜ್ಜೆ ಹಾಕುವ ನಿರ್ಧಾರ ಮಾಡಿದೆ.

ಹೀಗೆಂದ ತಕ್ಷಣ ನಾವು ಅತ್ಯಗತ್ಯವಾದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದೇ ಇಲ್ಲ ಎಂದರ್ಥವಲ್ಲ ಹಾಗೂ ಅತ್ಯಗತ್ಯವಲ್ಲವೆ ಇದ್ದರೂ ಕೂಡ ನಮ್ಮ ದೇಶದಲ್ಲಿಯೇ ತಯಾರಾಗುವ ವರೆಗೂ ನಾವು ಆಮದು ಮಾಡಿಕೊಳ್ಳದೇ ಬೇರೆ ವಿಧಿ ಇಲ್ಲ, ಆಗೆಂದು ಕೈಕಟ್ಟಿ ಕುಳಿತು ಕೊಂಡು ಅಗತ್ಯವಾದ ವಸ್ತುಗಳನ್ನು ಕೊಂಡು ಕೊಳ್ಳಲು ತಯಾರು ಮಾಡುವ ವರೆಗೂ ಕಾಯಲು ಸಹ ಸಿದ್ಧವಿರುವುದಿಲ್ಲ. ಹಂತ ಹಂತವಾಗಿ ಆಮದು ಕಡಿಮೆ ಮಾಡಿ ಸ್ವಾವಲಂಬಿ ಭಾರತ ವಾಗುವುದು ಎಲ್ಲರ ಗುರಿಯಾಗಿದೆ.

ಇದೇ ನಿಟ್ಟಿನಲ್ಲಿ ಭಾರತದಲ್ಲಿ ಕೋರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಾವು ಸೋಂಕಿತರ ಅಥವಾ ಅನುಮಾನ ವಿರುವ ವ್ಯಕ್ತಿಗಳ ಗಂಟಲು ಹಾಗೂ ಮೂಗಿನ ದ್ರವಗಳನ್ನು ಸಂಗ್ರಹಿಸಿಕೊಳ್ಳಲು ಬಳಸುತ್ತಿದ್ದ ಸ್ವಾಬ್ ಗಳನ್ನು ಚೀನಾ ದೇಶದಿಂದ ಬೇರೆ ವಿಧಿ ಇಲ್ಲದೆ ಆಮದು ಮಾಡಿ ಕೊಳ್ಳುತ್ತಿದ್ದವು‌. ಈ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿ ಕೊಂಡಿದ್ದ ಚೀನಾ ದೇಶವು ಒಂದು ಸ್ವಾಬ್ ಗೆ ಬರೋಬ್ಬರಿ 17 ರೂ ಮೌಲ್ಯ ನಿಗದಿ ಮಾಡಿತ್ತು. ದಿನಕ್ಕೆ ಸಾವಿರಾರು ಜನರ ಟೆಸ್ಟ್ ಮಾಡುತ್ತಿರುವ ಕಾರಣ ಪ್ರತಿಯೊಬ್ಬರಿಗೂ ದಿನಕ್ಕೆ ಮೂರರಿಂದ ನಾಲ್ಕು ಸ್ವಾಬ್ ಗಳು ಬೇಕಾಗುತ್ತಿದ್ದವು. ಅಂದಾಜು ಮಾಡಿಕೊಳ್ಳಿ ಬರೋಬ್ಬರಿ 80 ಸಾವಿರ ಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಅನುಮಾನವಿರುವ ವ್ಯಕ್ತಿಗಳ ಗಂಟಲು ದ್ರವ ಸಂಗ್ರಹಿಸಲು ಎಷ್ಟು ಸ್ವಾಬ್ ಗಳು ಬೇಕಾಗಿದ್ದವು ಎಂದು.

ಇದರಿಂದ ದಿನಕ್ಕೆ ಲಕ್ಷಾಂತರ ರೂ ಚೀನಾ ದೇಶಕ್ಕೆ ಹರಿದು ಹೋಗುತ್ತಿತ್ತು, ಇದನ್ನು ಗಮನಿಸಿದ ಭಾರತೀಯ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಟೆಕ್ಸ್ಟೈಲ್ ಸಚಿವಾಲಯ ಕೂಡಲೇ ಈಗಾಗಲೇ ಸಾಮಾನ್ಯ ಜನರು ಮನೆಯಲ್ಲಿ ಕಿವಿ ಸ್ವಚ್ಛಗೊಳಿಸಲು ಬಳಸಿ ಕೊಳ್ಳುವ ಸ್ವ್ಯಾಬ್ ಗಳನ್ನು ತಯಾರಿ ಮಾಡುತ್ತಿರುವ ಕಾರಣ ಜಾನ್ಸನ್ ಅಂಡ್ ಜಾನ್ಸನ್ ಇಂಡಿಯಾ ಕಂಪನಿಯ ಮೊರೆ ಹೋಗಿತ್ತು.

ಇದನ್ನು ನೀವು ತಯಾರಿ ಮಾಡ ಬಹುದಲ್ಲವೇ ಎಂದು ಪ್ರಶ್ನೆ ಕೇಳಿ, ಹೌದು ತಯಾರಿ ಮಾಡುತ್ತೇವೆ. ಆದರೆ ಕಚ್ಚಾ ವಸ್ತು ಬೇಕಾಗುತ್ತದೆ ಎಂದ ತಕ್ಷಣ ದೇಶದ ಮತ್ತೊಂದು ಪ್ರತಿಷ್ಠಿತ ಸಂಸ್ಥೆಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಜಾನ್ಸನ್ ಅಂಡ್ ಜಾನ್ಸನ್ ಇಂಡಿಯಾ ಕಂಪನಿಗೆ ಕಚ್ಚಾ ವಸ್ತುಗಳನ್ನು ನೀಡಲು ಸಹಯೋಗ ಹೊಂದಿರುವ ಕಾರಣ ಎರಡು ಕಂಪನಿಗಳು ಸಂಶೋಧನೆ ನಡೆಸಿ, ಸ್ಯಾಂಪಲ್ ಗಳನ್ನು ತಯಾರಿಸಿ ವೈಜ್ಞಾನಿಕ ಪರಿಣಿತಿಯನ್ನು ಒದಗಿಸಿದವು. ಕೂಡಲೇ ಮುಂಬೈನಲ್ಲಿರುವ ಭಾರತೀಯ ಎಂಎಸ್ಎಂಇ ತಯಾರಕ ಆದಿ ಎಂಟರ್ಪ್ರೈಸಸ್ ರವರು ಕಳೆದ 6 ನೇ ತಾರೀಖಿನಿಂದ ಉತ್ಪಾದನೆ ಆರಂಭ ಮಾಡಿ ಕೆಲವೇ ಕೆಲವು ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸ್ವ್ಯಾಬ್ ಗಳನ್ನು ಉತ್ಪಾದಿಸಿದ್ದಾರೆ, ಇದರ ಬೆಲೆ ಕೇವಲ 2 ರೂ ಆಗಿದೆ. ಈ ಮೂಲಕ ಚೀನಾ ದೇಶದಿಂದ ಹದಿನೈದು ರೂಪಾಯಿ ಹೆಚ್ಚುವರಿ ಹಣ ನೀಡಿ ಆಮದು ಮಾಡಿ ಕೊಳ್ಳುತ್ತಿದ್ದ ಸ್ವ್ಯಾಬ್ ಗಳನ್ನು ಇದೀಗ ಭಾರತ ನಿಲ್ಲಿಸಿದ್ದು ಸ್ವಾವಲಂಬಿ ಭಾರತ ಎಂಬ ಕನಸಿನಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳ ಮೂಲಕ ಆರಂಭವಾಗುತ್ತದೆ ಎಂಬ ಆಶಾಭಾವನೆ ಮೂಡಿದೆ.