ಕಂಪನಿಗಳು ಆಯಿತು, ಇದೀಗ ಮತ್ತೊಮ್ಮೆ ಭಾರತದ ಕೈಹಿಡಿದ ಟ್ರಂಪ್ ! ಅಧಿಕೃತವಾಗಿ ಘೋಷಣೆ ಮಾಡಿ ಹೇಳಿದ್ದೇನು ಗೊತ್ತಾ?

ಕಂಪನಿಗಳು ಆಯಿತು, ಇದೀಗ ಮತ್ತೊಮ್ಮೆ ಭಾರತದ ಕೈಹಿಡಿದ ಟ್ರಂಪ್ ! ಅಧಿಕೃತವಾಗಿ ಘೋಷಣೆ ಮಾಡಿ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಅಮೇರಿಕಾ ದೇಶವು ಕರೋನ ವೈರಸ್ನಿಂದ ತಲ್ಲಣಗೊಂಡಿದೆ, ಲಕ್ಷಾಂತರ ಜನರು ಈಗಾಗಲೇ ಕರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ಭಾರತ ದೇಶವು ತನ್ನ ಕಾನೂನುಗಳನ್ನು ಸಡಿಲಿಕೆ ಮಾಡಿ ಅಮೆರಿಕ ಸೇರಿದಂತೆ ವಿಶ್ವದ ಇನ್ನು ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಮಾನವೀಯತೆಯ ಆಧಾರದ ಮೇಲೆ ಅಗತ್ಯವಾದ ವೈದ್ಯಕೀಯ ಔಷಧಗಳು ಹಾಗೂ ಮಾತ್ರೆಗಳನ್ನು ರಫ್ತು ಮಾಡಿತ್ತು.

ಅಂದಿನಿಂದಲೂ ಇಂತಹ ಸಂದರ್ಭದಲ್ಲಿ ತನಗೆ ಸಹಾಯ ಮಾಡಿದ ಭಾರತದ ಜೊತೆ ಇರುತ್ತೇವೆ ಎಂದು ಉಚ್ಚರಿಸುತ್ತಿರುವ ಟ್ರಂಪ್ ರವರು ಈಗಾಗಲೇ ಹಲವಾರು ಕಂಪನಿಗಳನ್ನು ಭಾರತದ ಕಡೆ ಮುಖ ಮಾಡುವ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಇದೀಗ ಭಾರತದಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಕೋರೋಣ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ವೆಂಟಿಲೇಟರ್ ಗಳ ಅಭಾವ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಇದೀಗ ಇದರ ಕುರಿತು ಮಾತನಾಡಿರುವ ಡೊನಾಲ್ಡ್ ಟ್ರಂಪ್ ರವರು, ನಮ್ಮ ಸ್ನೇಹಿತರಾದ ಭಾರತ ದೇಶಕ್ಕೆ ನಾವು ವೆಂಟಿಲೇಟರ್ ಗಳನ್ನು ನೀಡುತ್ತಿದ್ದೇವೆ ಎಂದು ಘೋಷಿಸುತ್ತಿದ್ದೇನೆ, ಇದರ ಕುರಿತು ನನಗೆ ಹೆಮ್ಮೆಯಿದೆ. ನಾವು ಭಾರತ ಹಾಗೂ ನರೇಂದ್ರ ಮೋದಿ ರವರ ಜೊತೆ ಈ ರೀತಿಯ ಸಂದರ್ಭದಲ್ಲಿ ನಿಂತುಕೊಳ್ಳುತ್ತೇವೆ, ಪರಸ್ಪರ ಹೊಂದಾಣಿಕೆಯಿಂದ ಕರೋನ ಗೆ ಔಷಧಿ ಕಂಡು ಹಿಡಿಯಲು ಪ್ರಯತ್ನ ಪಡುತ್ತೇವೆ. ಖಂಡಿತ ನಾವು ಒಂದಾಗಿ ಕಣ್ಣಿಗೆ ಕಾಣದಿರುವ ಕರೋನ ಅನ್ನು ಸೋಲಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.