ಹೋಟೆಲ್ ನ ಬಳಿ ಊಟ ಕೇಳುತ್ತಿದ್ದ ಬಾಲಕ 50 ವರ್ಷಗಳಲ್ಲಿ 48000 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ ಸ್ಪೂರ್ತಿದಾಯಕ ಜೀವನ ಕಥೆ

ನಮಸ್ಕಾರ ಸ್ನೇಹಿತರೇ, 48 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ್ದಾರೆ ಎಂದ ತಕ್ಷಣ ಇವರೂ ಯಾವುದೋ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ ಎಂದು ಅರ್ಥ ಅಲ್ಲ, ಬದಲಾಗಿ ಕೇವಲ ತಮ್ಮ ಧ್ವನಿಯ ಮೂಲಕ ಮಕ್ಕಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಕೆಲವೊಮ್ಮೆ ಮಕ್ಕಳನ್ನು ರಕ್ಷಿಸುವ ಸಲುವಾಗಿ ದಿನಪೂರ್ತಿ ಉಪವಾಸವಿದ್ದು ಕಾರ್ಯ ನಿರ್ವಹಣೆ ಮಾಡಿದ್ದಾರೆ. ಇವರ ಸ್ಪೂರ್ತಿದಾಯಕ ಜೀವನದ ಸಂಪೂರ್ಣ ಕಥೆ ಹಾಗೂ ಹೇಗೆ ರಕ್ಷಿಸಿದ್ದಾರೆ ಎಂಬುದರ ವಿವರಗಳ ಬಗ್ಗೆ ನಾವು ತಿಳಿಸಿಕೊಡುತ್ತೇವೆ.

1964 ರಲ್ಲಿ ಒಬ್ಬ ಬಡ ಬಾಲಕ ತನ್ನ ಒಂದು ಹೊತ್ತಿನ ಆಹಾರಕ್ಕಾಗಿ ಹೋಟೆಲ್ ನ ಬಳಿ ಊಟ ನೀಡಿ ಎಂದು ಕೇಳಿ ಕೊಳ್ಳುತ್ತಿದ್ದನು, ಅದೇ ಸಮಯದಲ್ಲಿ ಈತನ ಧ್ವನಿ ಒಬ್ಬ ಪೊಲೀಸ್ ಅಧಿಕಾರಿಯ ಗಮನ ಸೆಳೆಯಿತು. ಪೊಲೀಸ್ ಅಧಿಕಾರಿಗೆ ಹತ್ತು ವರ್ಷದ ಬಾಲಕನ ಧ್ವನಿ ಇಷ್ಟವಾಗಿತ್ತು, ಈತನ ಧ್ವನಿ ಬಹಳ ಗಡುಸಾಗಿದ್ದ ಕಾರಣ ಅಧಿಕಾರಿ ಸ್ವರ್ಣ ಗಣಪತಿ ಎಂಬುವವರು ಪ್ರಕಟಣೆ ಇದೆ ಬರುತ್ತೀಯಾ, ನೀನು ಮಾಡುತ್ತೀಯ ಎಂದು ಕೇಳಿದರು.

ಹಣ ನೀಡುತ್ತಾರೆ ಎಂದು ತಿಳಿದ ತಕ್ಷಣ ಒಪ್ಪಿಕೊಂಡ ಪುಟ್ಟ ಬಾಲಕನಿಗೆ ಈ ಪ್ರಕಟಣೆ ತನ್ನ ಜೀವನವನ್ನು ಬದಲಾಯಿಸುತ್ತದೆ ಎಂಬ ಅರಿವೂ ಇರಲಿಲ್ಲ, ಮೊದಲನೇ ಪ್ರಕಟಣೆ ಮಾಡುವಾಗ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಅಂದಿನ ಐಜಿ ಕೂಡ ಹಾಜರಾಗಿದ್ದರು. ಇವರ ಧ್ವನಿ ಕೇಳಿ ಫಿದಾ ಆದ ಐಜಿ ಅಂದಿನ ಕಾಲದಲ್ಲಿ ಬಹುದೊಡ್ಡ ಮೊತ್ತವಾದ rs.100 ನೀಡಿದರು. ಇದನ್ನು ಗಮನಿಸಿದ ಪುಟ್ಟ ಬಾಲಕ ದೇವಸ್ಥಾನದಲ್ಲಿ ಪ್ರಕಟಣೆ ಮಾಡುವ ಕೆಲಸ ಗಿಟ್ಟಿಸಿಕೊಂಡ, ಇದು ಕೇವಲ ಅವರ ಉದ್ಯೋಗ ವಾಗಿರಲಿಲ್ಲ ಬದಲಾಗಿ ಸಮಾಜಕ್ಕೆ ಅರ್ಥಪೂರ್ಣ ಸೇವೆ ಸಲ್ಲಿಸುವ ಕೆಲಸವಾಗಿತ್ತು.

ಲಕ್ಷಾಂತರ ಜನ ಸೇರುವ ಉತ್ಸವಗಳಲ್ಲಿ ಮಕ್ಕಳು ಕಳೆದುಹೋದರೇ ಇವರು ಪ್ರಕಟಣೆ ಮಾಡುವ ಮೂಲಕ ಹುಡುಕಿ ಕೊಡುತ್ತಾರೆ. ಪೋಷಕರು ಹಾಗೂ ಮಕ್ಕಳನ್ನು ಸೇರಿಸುವ ಇವರನ್ನು ಮಕ್ಕಳಾಗಲಿ ಅಥವಾ ಪೋಷಕರಾಗಲಿ ಹಲವಾರು ವರ್ಷಗಳ ಬಳಿಕವೂ ಗುರುತಿಸಿ ನಮನ ಸಲ್ಲಿಸುತ್ತಾರೆ. ಕೆಲವೊಮ್ಮೆ ಪ್ರಕಟಣೆ ಮಾಡುವಾಗ ಮಕ್ಕಳು ಕಳೆದು ಹೋದ ಸಂದರ್ಭದಲ್ಲಿ ತಮ್ಮ ಊಟ ಕೂಡ ತ್ಯಜಿಸಿ ಪ್ರಕಟಣೆಯಲ್ಲಿ ತೊಡಗಿ ಕೊಳ್ಳುತ್ತಾರೆ, ಇಲ್ಲಿಯವರೆಗೂ ಸರಿ ಸುಮಾರು 48 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಪೋಷಕರ ಮಡಿಲಿಗೆ ಸೇರಿಸಿದ್ದಾರೆ. ಎಂಟು ಭಾಷೆಗಳಲ್ಲಿ ಪರಿಣಿತಿ ಪಡೆದುಕೊಂಡಿರುವ ಇವರು ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಯಾವುದೇ ಉತ್ಸವಗಳು ನಡೆದರೂ ಪ್ರಕಟಣೆ ಮಾಡುತ್ತಾರೆ.

ಇದು ಅವರ ಜೀವನೋಪಾಯಕ್ಕಾಗಿ ಮಾಡುತ್ತಿರುವ ಕೆಲಸ ಆಗಿರಬಹುದು, ಆದರೆ ಅದರಲ್ಲಿಯೂ ನಿಷ್ಠೆಯನ್ನು ತೋರಿಸಿ ಊಟ ತ್ಯಜಿಸಿ ದಿನಪೂರ್ತಿ ಮಕ್ಕಳನ್ನು ಹುಡುಕಿಕೊಡಲು ನೇರವಾಗಿ ಜನರ ಮಧ್ಯ ತೆರಳಿ ಮೈಕ್ ಹಿಡಿದು ಪ್ರಕಟಣೆ ಮಾಡುವ ಮೂರ್ತಿರವರ ಕಾರ್ಯಕ್ಕೆ ಸೆಲ್ಯೂಟ್ ಹೊಡೆಯಲೇಬೇಕು. ಇಂತಹ ಕಾರ್ಯ ಮಾಡುತ್ತಿರುವ ಮೈಕ್ ಮೂರ್ತಿ ರವರಿಗೆ ನಮ್ಮ ತಂಡದ ಪರವಾಗಿ ಅನಂತ ಅನಂತ ವಂದನೆಗಳು.

Post Author: Ravi Yadav