ಟೊಮೋಟೊ ಬೆಳೆದು ಸಂಕಷ್ಟದಲ್ಲಿದ್ದ ರೈತರ ಕೈಹಿಡಿದ ಬೆಟರ್ ಇಂಡಿಯ ಸಂಸ್ಥೆ ! ಲಾಭವಿಲ್ಲದೆ ರೈತ ಮನೆ ಬಾಗಿಲಿಗೆ ಭಾಗ್ಯ ಲಕ್ಷಿ ಕರೆತಂದಿದ್ದು ಹೇಗೆ ಗೊತ್ತಾ?

ಟೊಮೋಟೊ ಬೆಳೆದು ಸಂಕಷ್ಟದಲ್ಲಿದ್ದ ರೈತರ ಕೈಹಿಡಿದ ಬೆಟರ್ ಇಂಡಿಯ ಸಂಸ್ಥೆ ! ಲಾಭವಿಲ್ಲದೆ ರೈತ ಮನೆ ಬಾಗಿಲಿಗೆ ಭಾಗ್ಯ ಲಕ್ಷಿ ಕರೆತಂದಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೂ ವಿದೇಶಗಳಿಗೆ ನಮ್ಮ ಕರ್ನಾಟಕದ ಕೋಲಾರ ಜಿಲ್ಲೆಯಿಂದ ಟೊಮೋಟೋ ಸರಬರಾಜು ಮಾಡಲಾಗುತ್ತದೆ. ಟೊಮೋಟೊ ಉತ್ಪಾದಕರ ಸಾಲಿನಲ್ಲಿ ಕೋಲಾರ ಹಲವಾರು ವರ್ಷಗಳಿಂದಲೂ ಮೊದಲನೇ ಸ್ಥಾನದಲ್ಲಿದೆ.

ಆದರೆ ಈ ಬಾರಿ ಲಾಕ್ಡೌನ್ ಇರುವ ಕಾರಣ ರೈತರು ತಾವು ಬೆಳೆದ ಟೊಮೊಟೊ ಬೆಳೆಗಳನ್ನು ಇತರ ರಾಜ್ಯಗಳಿಗಾಗಲಿ ಅಥವಾ ವಿದೇಶಗಳಿಗಾಗಲಿ ರಫ್ತು ಮಾಡಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೇ 1 ಕ್ವಿಂಟಲ್ ಗೆ 1133 ರೂಪಾಯಿ ಇದ್ದ ಟೊಮೋಟೋ ಬೆಲೆ ಮರುದಿನ ನೋಡುವಷ್ಟರಲ್ಲಿ ಕೇವಲ 133 ರೂಪಾಯಿಗಳಾಗಿತ್ತು. ಇದರಿಂದ ಸಾವಿರಾರು ರೈತರು ತಾವು ಬೆಳೆದ ಬೆಳೆಯ ಕಥೆ ಮುಗಿಯಿತು ಎಂದು ಕೈಕಟ್ಟಿ ಕುಳಿತಿದ್ದರು. ಆದರೆ ಇದೇ ಸಮಯದಲ್ಲಿ ಸಾವಯುವ ಪದಾರ್ಥಗಳನ್ನು ದೇಶದ ಎಲ್ಲೆಡೆ ಬಳಸಲು ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿ ಬೆಟ್ಟರ್ ಇಂಡಿಯಾ ಸಂಸ್ಥೆಯು ಕೋಲಾರದ ರೈತರ ಕೈಹಿಡಿದಿದೆ.

ಇದರಿಂದ ಕೋಲಾರದ ರೈತರು ಈ ಬಾರಿ ತಾವು ಬೆಳೆದ ಬೆಳೆಗಳು ಮಾರಾಟವಾಗದೇ ಇದ್ದರೂ ಕೂಡ ಲಾಭ ಗಳಿಸುವುದು ಹೇಗೆ ಎಂದು ತಿಳಿದುಕೊಂಡಿದ್ದಾರೆ. ರೈತರ ಪರಿಸ್ಥಿತಿಯನ್ನು ನೋಡಿದ ಈ ಸಂಸ್ಥೆಯು
ಗ್ರಾಮ ವಿಕಾಸ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಎಂ.ವಿ.ಎನ್ ರಾವ್ ಅವರೊಂದಿಗೆ ಕೈ ಜೋಡಿಸಿ ರೈತರ ಬಳಿ ತೆರಳಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬೆಳೆದ ಟೊಮೊಟೊ ಇಂದ ಯಾವ ರೀತಿ ಉಪ್ಪಿನಕಾಯಿ ಹಾಗೂ ಇತರ ಉತ್ಪನ್ನಗಳನ್ನು ತಯಾರಿ ಮಾಡಬಹುದು ಎಂದು ಹೇಳಿಕೊಟ್ಟಿದೆ. ಉಚಿತವಾಗಿ ಅಲ್ಲೇ ಇದ್ದು ರೈತ ಮಹಿಳೆಯರನ್ನು ಒಟ್ಟುಗೂಡಿಸಿ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳುವ ಕುರಿತು ಗಮನ ಹರಿಸಿ ಸರಿಸುಮಾರು ಒಂದು ವರ್ಷ ಸೇವಿಸಬಹುದಾದ ಉಪ್ಪಿನಕಾಯಿ ತಯಾರಿಸಿ ಸಂಗ್ರಹಿಸಲು ಹೇಳಿಕೊಟ್ಟಿದೆ. ಈ ಉಪ್ಪಿನಕಾಯಿ ಟಮೋಟೊ ಮಾರುಕಟ್ಟೆಯ ಬೆಲೆಗೆ ಹೋಲಿಸಿಕೊಂಡರೆ ಹೆಚ್ಚು ಬೆಲೆ ಬಾಳಲಿದ್ದು ರೈತರು ಮತ್ತಷ್ಟು ಲಾಭ ಗಳಿಸಲಿದ್ದಾರೆ. ಏನೇ ಆಗಲಿ ಯಾವುದೇ ಲಾಭವಿಲ್ಲದೇ ರೈತರ ಸಂಕಷ್ಟಕ್ಕೆ ಮಿಡಿದ ದ ಬೆಟರ್ ಇಂಡಿಯಾ ಸಂಸ್ಥೆಗೆ ನಮ್ಮ ಪರವಾಗಿ ಅನಂತ ಅನಂತ ವಂದನೆಗಳು.