ಚಿತ್ರದಲ್ಲಿ ವಿಲನ್, ರಿಯಲ್ ಲೈಫ್ ನಲ್ಲಿ ಹೀರೋ: ಕನ್ನಡದವರ ಬೆಂಬಲಕ್ಕೂ ನಿಂತ ಸೋನು ಸೂದ್

ಚಿತ್ರದಲ್ಲಿ ವಿಲನ್, ರಿಯಲ್ ಲೈಫ್ ನಲ್ಲಿ ಹೀರೋ: ಕನ್ನಡದವರ ಬೆಂಬಲಕ್ಕೂ ನಿಂತ ಸೋನು ಸೂದ್

ನಮಸ್ಕಾರ ಸ್ನೇಹಿತರೇ, ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಖ್ಯಾತ ವಿಲನ್ಗಳ ಸಾಲಿನಲ್ಲಿ ನಿಮಗೆ ಸೋನು ಸೂದ್ ಅವದ ಹೆಸರು ಕಾಣಿಸುತ್ತದೆ. ಸದಾ ಫಿಟ್ ನೆಸ್ ಕಾಪಾಡಿಕೊಂಡು ಚಿತ್ರದಲ್ಲಿ ವಿಲನ್ ಪಾತ್ರ ಮಾಡುವ ಸೋನು ಸೂದ್ ರವರು ಇದೀಗ ರಿಯಲ್ ಲೈಫ್ ನಲ್ಲಿ ಸಾವಿರಾರು ಜನರಿಗೆ ಹೀರೋ ಆಗಿದ್ದಾರೆ.

ಹೌದು ಸ್ನೇಹಿತರೇ, ಮೊದಲಿಗೆ ದೇಶದಲ್ಲಿ ಕರೋನ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆ ತಮ್ಮ ಹಾಗೂ ತಮ್ಮ ಆಪ್ತರ ಹೋಟೆಲ್ಗಳನ್ನು ಕ್ವಾರಂಟೈನ್ ಮಾಡಲು ಹಾಗೂ ವೈದ್ಯರಿಗೆ ಬಳಸಿಕೊಳ್ಳಲು ಬಿಟ್ಟುಕೊಟ್ಟ ನಂತರ ಸೋನು ಸೂದ್ ರವರು ಇದೇ ರೀತಿಯ ಇನ್ನು ಹಲವಾರು ಸಮಾಜ ಸೇವೆಗಳನ್ನು ಮಾಡಿದ್ದಾರೆ. ಪಂಜಾಬ್ ರಾಜ್ಯದ ಸ್ನೇಹಿತನೊಬ್ಬ ಕರೆ ಮಾಡಿ ನಮ್ಮ ಸುತ್ತಮುತ್ತಲಿನ ಊರಿನಲ್ಲಿ ಸುಮಾರು 400-500 ಊಟಕ್ಕಾಗಿ ಪರದಾಡುತ್ತಿದ್ದಾರೆ, ಹೇಗಾದರೂ ಮಾಡಿ ಸಹಾಯ ಮಾಡಬೇಕು ಎನ್ನುತ್ತಿದ್ದಂತೆ ಮರು ಆಲೋಚನೆ ಮಾಡದೆ ಅವರ ಬೆಂಬಲಕ್ಕೆ ಸೋನು ಸೂದ್ ರವರು ನಿಂತರು.

ತದನಂತರ ಪಂಜಾಬ್ ರಾಜ್ಯದ ಆಸ್ಪತ್ರೆಗಳಿಗೆ 1500 ಪಿಪಿಇ ಕಿಟ್ ವಿತರಿಸಿದರು. ಈ ಕಾರ್ಯಗಳು ಆರಂಭವಾಗುತ್ತಿದ್ದಂತೆ, ಹಲವಾರು ಕಡೆಯಿಂದ ವಿನಂತಿಗಳು ಬರಲು ಆರಂಭಿಸಿದವು. ವಿನಂತಿಗಳ ಜೊತೆಗೆ ಹಲವಾರು ಯುವಕರು ಸ್ವಯಂ ಪ್ರೇರಿತರಾಗಿ ಹಾಗೂ ಉದ್ಯಮಿಗಳು ದೇಣಿಗೆ ನೀಡಲು ಆರಂಭಿಸಿದರು. ನೋಡ ನೋಡುತ್ತಿದ್ದತಂತೆ 400-500 ಇದ್ದ ಸಂಖ್ಯೆ 45000 ಕ್ಕೆ ಏರಿತು.

ಇದಾದ ಬಳಿಕ ಮಾಧ್ಯಮಗಳಲ್ಲಿ ವಲಸೆ ಕಾರ್ಮಿಕರು ತಮ್ಮ ಮಕ್ಕಳನ್ನು ಹಾಗೂ ವಯಸ್ಸಾದ ಪೋಷಕರನ್ನು ರಸ್ತೆಯಲ್ಲಿ ಕರೆದುಕೊಂಡು ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ನೋಡಿದ ಮೇಲೆ ವಲಸೆ ಕಾರ್ಮಿಕರಿಗೆ ಹೇಗಾದರೂ ಮಾಡಿ ಸಹಾಯ ಮಾಡಬೇಕು ಎಂದು ನಿರ್ಧಾರ ಮಾಡಿದರು.

ಹೇಗಿದ್ದರೂ ಹಲವಾರು ಖಾಸಗಿ ಬಸ್ ಗಳು ಖಾಲಿ ಉಳಿದಿವೆ, ಇದನ್ನು ಯಾಕೆ ಬಳಸಿ ಕೊಳ್ಳಬಾರದು ಎಂದು ನಿರ್ಧಾರ ಮಾಡಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ ವಲಸೆ ಕಾರ್ಮಿ ಕರನ್ನು ತಮ್ಮ ತಮ್ಮ ಊರಿಗೆ ಕಳುಹಿಸಲು ಅನುಮತಿ ನೀಡುವಂತೆ ಮನವಿ ಮಾಡಿದರು. ಎರಡು ಸರ್ಕಾರಗಳು ಅನುಮತಿ ನೀಡಿದ ಬಳಿಕ ವಲಸೆ ಕಾರ್ಮಿಕರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅವರ ಸ್ವಗ್ರಾಮಗಳಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಸಿಲುಕಿದ್ದ, 350 ಕನ್ನಡಿಗರನ್ನು ಕೂಡ ಬಸ್ ವ್ಯವಸ್ಥೆ ಮಾಡಿ ಕರ್ನಾಟಕಕ್ಕೆ ತಲುಪಿಸಿದ್ದಾರೆ. ಈ ಕಾರ್ಯ ಮಾಡಿದ ಸೋನು ಸೂದ್ ರವರಿಗೆ ಅನಂತ ಅನಂತ ವಂದನೆಗಳು.