ಮತ್ತೊಂದು ಪ್ರಕಟಣೆ ಹೊರಡಿಸಿ ಜನರ ಬಳಿ ವೀರೇಂದ್ರ ಹೆಗ್ಗಡೆ ಅವರು ಮನವಿ ಮಾಡಿದ್ದೇನು ಗೊತ್ತಾ?

ಮತ್ತೊಂದು ಪ್ರಕಟಣೆ ಹೊರಡಿಸಿ ಜನರ ಬಳಿ ವೀರೇಂದ್ರ ಹೆಗ್ಗಡೆ ಅವರು ಮನವಿ ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಸದಾ ಜನಪರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವ ಪುಣ್ಯ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಇದೀಗ ಮತ್ತೊಂದು ಪ್ರಕಟಣೆಯ ಮೂಲಕ ಜನರ ಬಳಿ ಮನವಿ ಮಾಡಿದ್ದಾರೆ.

ಹೌದು, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ನಲವತ್ತು ದಿನಗಳಿಂದ ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಹೇರಲಾಗಿದೆ, ಅಗತ್ಯ ವಸ್ತುಗಳ ಸೇವೆಗೆ ಮಾತ್ರ ಸರ್ಕಾರ ಅನುಮತಿ ನೀಡಿದ್ದು, ಇಡೀ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡಿತ್ತು. ಆದರೆ ಇದೀಗ ಏಕಾಏಕಿ ಗ್ರೀನ್ ಜೋನ್, ಆರೆಂಜ್ ಜೋನ್ ಸೇರಿದಂತೆ ಕೋರೋನ ಹೆಚ್ಚಾಗಿರುವ ಅಂದರೆ ರೆಡ್ ಜೋನ್ ಗಳಲ್ಲಿಯೂ ಕೂಡ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಇದೀಗ ಇದರ ಕುರಿತು ಹೊಸ ಪ್ರಕಟಣೆಯ ಮೂಲಕ ಜನರ ಬಳಿ ಮನವಿ ಮಾಡಿರುವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ನೀವು ಮದ್ಯ ಸೇವನೆ ಮಾಡದೆ ನಿಮ್ಮ ಮನೆಯಲ್ಲಿ ಸಂತೋಷ, ನೆಮ್ಮದಿ ಹೆಚ್ಚಾಗಿರುತ್ತದೆ. ಎಲ್ಲರ ಆರೋಗ್ಯ ಸುಧಾರಿಸುತ್ತಿರುತ್ತದೆ, ಮನೆಯ ಖರ್ಚು ಕೂಡ ಕಡಿಮೆಯಾಗಿರುತ್ತದೆ, ಹೇಗಿದ್ದರೂ ಕಳೆದ 40 ದಿನಗಳಿಂದ ನೀವು ಮಧ್ಯ ಲಭ್ಯವಿಲ್ಲದ ಕಾರಣ ಕಾಲ ಕಳೆದಿದ್ದೀರಿ, ಹಾಗಿದ್ದಾಗ ಮತ್ತೊಮ್ಮೆ ಯಾಕೆ ಮದ್ಯ ಸೇವನೆ ಆರಂಭ ಮಾಡುತ್ತಿರಿ ದಯವಿಟ್ಟು ಯಾರು ಮಧ್ಯ ಸೇವೆಯನ್ನು ಪುನಹ ಆರಂಭ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಮನವಿಯ ಕುರಿತು ನಿಮ್ಮ ಅಭಿಪ್ರಾಯ ಗಳನ್ನೂ ಕಾಮೆಂಟ್ ಬಾಕ್ಸ್ ತಿಳಿಸಿ.