ಮಾದರಿಯಾದ ಕನ್ನಡದ ಯುವಕರು: ಇವರು ತಯಾರಿಸಿದ ಒಂದು ವೆಂಟಿಲೇಟರ್ ಬೆಲೆ ಎಷ್ಟು ಗೊತ್ತಾ???

ನಮಸ್ಕಾರ ಸ್ನೇಹಿತರೇ, ಭಾರತದ ಜನಸಂಖ್ಯೆಗೆ ಹೋಲಿಸಿಕೊಂಡರೇ ವೆಂಟಿಲೇಟರ್ ಗಳ ಅಭಾವ ನಮಗೆ ಅರಿವಾಗುತ್ತದೆ. ಅದೃಷ್ಟವಶಾತ್ ಕೋರೋನ ನಿಯಂತ್ರಣದಲ್ಲಿ ಇರುವ ಕಾರಣ ಇಲ್ಲಿಯವರೆಗೂ ಎಲ್ಲಿಯೂ ವೆಂಟಿಲೇಟರ್ ಗಳ ಅಭಾವ ಕಾಣಿಸಿಕೊಂಡಿಲ್ಲ.

ಒಂದು ವೇಳೆ ಕೋರೋನ ಹೆಚ್ಚಾಗಿ ಹರಡಿದ್ದಲ್ಲಿ ಖಂಡಿತ ಕೋಟ್ಯಂತರ ವೆಂಟಿಲೇಟರ್ ಗಳ ಅಭಾವ ಕಾಡಲಿದೆ. ಇದನ್ನು ಈಗಾಗಲೇ ಅರಿತು ಕೊಂಡಿರುವ ದೇಶದ ಹಲವಾರು ಕಂಪನಿಗಳು ಹಾಗೂ ಭಾರತೀಯ ರೈಲ್ವೆ ಇಲಾಖೆಯು ಕಡಿಮೆ ವೆಚ್ಚದಲ್ಲಿ ವೆಂಟಿಲೇಟರ್ ಗಳನ್ನು ತಯಾರಿ ಮಾಡುವ ಮೂಲಕ ಮುಂಬರುವ ಪರಿಸ್ಥಿತಿಗಳಿಗೆ ತಯಾರಿ ಮಾಡಿಕೊಳ್ಳುತ್ತಿವೆ. ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಮಹಿಂದ್ರ ಕಂಪನಿಯು ತನ್ನ ಕಂಪನಿಗಳ ಕಾರುಗಳ ಉತ್ಪಾದನಾ ಘಟಕಗಳನ್ನು ವೆಂಟಿಲೇಟರ್ ಗಳನ್ನು ತಯಾರಿ ಮಾಡಲು ಬಳಸಿಕೊಳ್ಳುತ್ತಿದೆ, ಇನ್ನೂ ರೈಲ್ವೆ ಇಲಾಖೆಯು ಕೂಡ ಹತ್ತರಿಂದ ಹದಿನೈದು ಸಾವಿರದ ವೆಚ್ಚದ ಒಳಗಡೆ ವೆಂಟಿಲೇಟರ್ ತಯಾರಿಸುವ ಕೆಲಸದಲ್ಲಿ ನಿರತವಾಗಿದೆ. ಇನ್ನು ಸಾಕಷ್ಟು ಸಂಸ್ಥೆಗಳು ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

ಆದರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಇಂಟರ್ನೆಟ್ ಆಫ್ ಥಿಂಗ್ಸ್(IOT) ಪ್ರಯೋಗಾಲಯದಲ್ಲಿ ಉಸಿರಾಟ ನಿಯಂತ್ರಣ ಮಾಡುವ ಸಾಧನವನ್ನು ತಯಾರು ಮಾಡಿದ್ದಾರೆ. ವಿಶೇಷವೇನೆಂದರೆ ಈ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸಲು ಆರ್ಡಿನೋ ತಂತ್ರಜ್ಞಾನವನ್ನು ಬಳಸಲಾಗಿದ್ದು ಕೇವಲ ಹತ್ತು ಸಾವಿರ ರೂಪಾಯಿಗಳಲ್ಲಿ ವೆಂಟಿಲೇಟರ್ ತಯಾರಿ ಮಾಡಬಹುದಾಗಿದೆ. ಇದನ್ನು ಪರೀಕ್ಷಿಸಿದ ಪುತ್ತೂರು ಆಸ್ಪತ್ರೆಯ ಆಡಳಿತ ನಿರ್ದೇಶಕ ಬಾಸ್ಕರ್ ರವರು ಹಾಗೂ ಡಾಕ್ಟರ್ ಅನಿಲ್ ಅವರು ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೆಲವೊಂದು ವೈದ್ಯಕೀಯ ಸಲಹೆಗಳನ್ನು ನೀಡಿದ್ದಾರೆ.

Post Author: Ravi Yadav