ವಿ.ಆ ಸಂಸ್ಥೆಗೆ ಪುಂಡಾಟ ನಿಲ್ಲಿಸಲು ಮುಂದಾದ ಮೋದಿಗೆ ಆಸ್ಟ್ರೇಲಿಯಾ ಬೆಂಬಲ ! ಅಷ್ಟಕ್ಕೂ ಭಾರತ ಮಾಡಲು ಹೊರಟಿರುವುದು ಏನು ಗೊತ್ತಾ?

ವಿ.ಆ ಸಂಸ್ಥೆಗೆ ಪುಂಡಾಟ ನಿಲ್ಲಿಸಲು ಮುಂದಾದ ಮೋದಿಗೆ ಆಸ್ಟ್ರೇಲಿಯಾ ಬೆಂಬಲ ! ಅಷ್ಟಕ್ಕೂ ಭಾರತ ಮಾಡಲು ಹೊರಟಿರುವುದು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅಮೆರಿಕ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ರವರು ಕೊರೊನ ವೈರಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾಡಿದ ತಪ್ಪಿನಿಂದ ಇಡೀ ವಿಶ್ವವೇ ಇದೀಗ ತಲ್ಲಣಗೊಂಡಿದೆ ಎಂದು ಬಹಿರಂಗವಾಗಿ ವಾದ ಮಂಡಿಸುತ್ತಿದ್ದಾರೆ.

ಸರಿಯಾದ ಸಮಯದಲ್ಲಿ ಇತರ ದೇಶಗಳಿಗೆ ಅರಿವು ಮೂಡಿಸಿ ಮನುಷ್ಯರಿಂದ ಮನುಷ್ಯರಿಗೆ ಬಹಳ ಸುಲಭವಾಗಿ ಹರಡುತ್ತದೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಪ್ರಭಾವಕ್ಕೆ ಒಳಗಾಗಿದೆ ಎಂದು ವಾದ ಮಂಡಿಸುತ್ತಿದ್ದಾರೆ. ಇದರಿಂದ ನನ್ನ ಜನರನ್ನು ಕಾಪಾಡಿ ಕೊಳ್ಳಲು ಕಷ್ಟವಾಗುತ್ತಿದೆ ಎಂದು ಅಸಹಾಯಕತೆ ಪ್ರದರ್ಶಿಸುತ್ತಿರುವ ಸಂದರ್ಭದಲ್ಲಿ ನರೇಂದ್ರ ಮೋದಿರವರು ಭಾರತದಲ್ಲಿ ದಿಟ್ಟ ಕ್ರಮಗಳ ಮೂಲಕ ಕೊರೊನ ನಿಭಾಯಿಸುವುದಷ್ಟೇ ಅಲ್ಲದೆ ವಿ-ಶ್ವ ಆರೋ-ಗ್ಯ ಸಂಸ್ಥೆ-ಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ.

ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವೇ ಕೆಲವು ದಿನಗಳ ಹಿಂದೆ ಜಿ-20 ರಾಷ್ಟ್ರಗಳ ನಾಯಕರು ಜೊತೆ ನಡೆದ ಸಭೆಯಲ್ಲಿ ಹೊಸ ಪ್ರಸ್ತಾವ ಮುಂದಿಟ್ಟಿದ್ದ ನರೇಂದ್ರ ಮೋದಿರವರು, ವಿಶ್ವದ ಎಲ್ಲೆಡೆ
ಕೊರೊನ ವೈರಸ್ ಕಡಿಮೆಯಾದ ತಕ್ಷಣವೇ ನಾವು ವಿಶ್ವ ಆರೋಗ್ಯ ಸಂಸ್ಥೆ ಯನ್ನು ಮರು ರಚನೆ ಮಾಡಬೇಕು ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿದ್ದರು.

ಅಷ್ಟೇ ಅಲ್ಲದೆ ಕೊರೊನ ಪರಿಸ್ಥಿತಿಯನ್ನು ಆರೋಗ್ಯ ಸಂಸ್ಥೆ ನಿಭಾಯಿಸಿದ ರೀತಿಯಲ್ಲಿ ಅನುಮಾನವಿದ್ದು ಸ್ವತಂತ್ರ ತನಿಖೆ ನಡೆಸಲು ತಂಡ ರಚಿಸಬೇಕು ಎಂದು ಹೇಳಿದ್ದರು. ಇದೀಗ ಆಸ್ಟ್ರೇಲಿಯ ದೇಶದ ರಾಯಭಾರಿ ಬ್ಯಾರಿ ಓ ಫೇರಲ್ ಮಾತನಾಡಿ ಭಾರತದ ಈ ನಿರ್ಣಯಕ್ಕೆ ಆಸ್ಟ್ರೇಲಿಯ ದೇಶದ ಸಂಪೂರ್ಣ ಬೆಂಬಲವಿದ್ದು, ಸ್ವತಂತ್ರ ತನಿಖೆ ನಡೆಸಲು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಯನ್ನು ಮರು ರಚನೆ ಮಾಡಲು ಭಾರತ ಯಾವುದೇ ನಿರ್ಣಯ ಕೈಗೊಂಡರೂ ಆಸ್ಟ್ರೇಲಿಯಾ ಬಹಿರಂಗ ಬೆಂಬಲ ನೀಡುವುದಾಗಿ ಘೋಷಿಸಿದೆ. ಈ ಮೂಲಕ ಮೋದಿ ರವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯದಲ್ಲಿ ಬೆಂಬಲ ಮತ್ತಷ್ಟು ಹೆಚ್ಚಾಗಿದ್ದು ಚೀನಾ ಆಟಕ್ಕೆ ಬ್ರೇಕ್ ಹಾಕಲು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ.