ಲಾಕ್ಡೌನ್ ನಲ್ಲಿ ಮಾನವೀಯತೆ ಮೆರೆದ ನಟಿ ಪ್ರಣೀತಾ ! ಮಾಡುತ್ತಿರುವ ಕೆಲಸದ ಬಗ್ಗೆ ನಿಮಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ, ನಮ್ಮ ಕನ್ನಡತಿ ಪ್ರಣೀತಾ ಅವರು ಹಲವಾರು ಸಮಾಜ ಸೇವೆಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಬಾರಿ ಮಾನವೀಯತೆ ಮೆರೆದಿದ್ದಾರೆ.

ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳುವುದಷ್ಟೇ ಅಲ್ಲದೇ ಸ್ವತಹ ತಾವೇ ತೆರಳಿ ಕನ್ನಡ ಮಾಧ್ಯಮದವರಿಗೆ ಇಂಗ್ಲಿಷ್ ಪಾಠಗಳನ್ನು ಮಾಡಿ ಎಲ್ಲರ ಮನಗೆದ್ದಿದ್ದ ನಟಿ ಪ್ರಣೀತಾ ರವರು ಲಾಕ್ಡೌನ್ ನಿಂದ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ನಿರ್ಧಾರ ಮಾಡಿ ಕಳೆದ 21 ದಿನಗಳಿಂದ ಬಡವರಿಗೆ ಉಚಿತ ಆಹಾರವನ್ನು ನೀಡುತ್ತಾರೆ.

ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸುತ್ತಿರುವ ಪ್ರಣೀತಾ.

ಲೈವ್ ಇಂಡಿಯಾ ನ್ಯೂಸ್ ಸಂಸ್ಥೆ ವರದಿ ಮಾಡಿದಂತೆ ನಟಿ ಪ್ರಣೀತಾ ರವರು ಕಳೆದ 21 ದಿನಗಳಲ್ಲಿ ಬರೋಬ್ಬರಿ 75 ಸಾವಿರ ಜನರಿಗೆ ಆಹಾರವನ್ನು ಸ್ವಚ್ಛಂದವಾಗಿ ಪ್ಯಾಕಿಂಗ್ ಮಾಡಿ ತಲುಪಿಸುವ ಮೂಲಕ ಕಷ್ಟದ ಸಮಯದಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ನಟಿ ಪ್ರಣೀತಾ ರವರ ಈ ಮಹಾನ್ ಕಾರ್ಯಕ್ಕೆ ನಮ್ಮ ತಂಡದ ಪರವಾಗಿ ವಿಶೇಷ ವಂದನೆಗಳು. ನಿಮ್ಮ ಚಿತ್ರಗಳು ಮತ್ತಷ್ಟು ಯಶಸ್ಸು ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

Post Author: Ravi Yadav