ನಿವೃತ್ತಿ ಸರಿ, ಐಪಿಎಲ್ ನಲ್ಲಿಯಾದರು ಆಟವಾಡಿ ಎಂದಿದ್ದಕ್ಕೆ ಸೆಹ್ವಾಗ್ ಉತ್ತರವೇನು ಗೊತ್ತಾ?

ನಿವೃತ್ತಿ ಸರಿ, ಐಪಿಎಲ್ ನಲ್ಲಿಯಾದರು ಆಟವಾಡಿ ಎಂದಿದ್ದಕ್ಕೆ ಸೆಹ್ವಾಗ್ ಉತ್ತರವೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಾವೆಲ್ಲರೂ ವೀರೇಂದ್ರ ಸೆಹ್ವಾಗ್ ಅವರ ಅಂಜಿಕೆಯಿಲ್ಲದ ಬ್ಯಾಟಿಂಗ್ ನೋಡಿ ಸಾಕಷ್ಟು ಎಂಜಾಯ್ ಮಾಡಿದ್ದೇವೆ. ಮೊದಲನೇ ಬಾಲ್ ನಿಂದಲೇ ಬೌಂಡರಿಗಳ ಸುರಿಮಳೆ ಸುರಿಸುತ್ತಿದ್ದ ವೀರೇಂದ್ರ ಸೆಹ್ವಾಗ್ ರವರು ಕೆಲವು ವರ್ಷಗಳ ಹಿಂದೆ ನಿವೃತ್ತಿ ಘೋಷಣೆ ಮಾಡಿದ್ದರು.

ಈಗ್ಯಾಕೆ ಇವರ ನಿವೃತ್ತಿ ವಿಷಯ ಎಂದುಕೊಳ್ಳುತ್ತೀರಾ? ಅಂದು ಅವರು ನಿವೃತ್ತಿ ಘೋಷಣೆ ಮಾಡಿದಾಗ ನಡೆದ ಘಟನೆಯನ್ನು ನಾವು ನಿಮಗೆ ತಿಳಿಸುತ್ತೇವೆ. ನೀವೇ ಓದಿ.

ವೀರೇಂದ್ರ ಸೆಹ್ವಾಗ್ ರವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದಾಗ ಐಪಿಎಲ್ ಟೂರ್ನಿಯಲ್ಲಿಯು ಕೂಡ ಆಡುವುದಿಲ್ಲ ಎಂದು ಘೋಷಣೆ ಮಾಡಿದರು. ಇದಾದ ಕೆಲವೇ ಕೆಲವು ದಿನಗಳ ಬಳಿಕ ಮಾಧ್ಯಮಗಳ ಮುಂದೆ ಇವರು ಕಾಣಿಸಿಕೊಂಡಾಗ ನಿಮಗೆ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ ಈಗಲೂ ನಿಮ್ಮ ಆಟವನ್ನು ನೋಡಲು ಇಷ್ಟಪಡುತ್ತಾರೆ, ಆದ್ದರಿಂದ ನೀವ್ಯಾಕೆ ಐಪಿಎಲ್ನಲ್ಲಿ ಆದರೂ ವರ್ಷಕ್ಕೆ ಒಮ್ಮೆ ಆಟವಾಡಬಾರದು ಎಂದು ಪ್ರಶ್ನೆ ಮಾಡುತ್ತಾರೆ.

ಇದಕ್ಕೆ ಉತ್ತರಿಸಿದ ವೀರೇಂದ್ರ ಸೆಹ್ವಾಗ್ ರವರು, ಐಪಿಎಲ್ ಟೂರ್ನಿಯ ಹಿಂದಿನ ಮಹತ್ವದ ಉದ್ದೇಶ ಯುವ ಆಟಗಾರರನ್ನು ಪ್ರೋತ್ಸಾಹಿಸುವುದು. ಹಲವಾರು ಯುವಕರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತೀಯ ಕ್ರಿಕೆಟ್ ಸೇರಿಕೊಳ್ಳಲು ಹವಣಿಸುತ್ತಾರೆ. ನಾನು ನಿವೃತ್ತಿ ಪಡೆದುಕೊಂಡ ಮೇಲೆ ಐಪಿಎಲ್ ನಲ್ಲಿ ಆಡುವುದು ಅರ್ಥಹೀನ, ನಾನು ಹಾಗೆ ಮಾಡಿದಲ್ಲಿ ಒಬ್ಬ ಯುವಕನ ಸ್ಥಾನವನ್ನು ನಾನು ಕಿತ್ತುಕೊಂಡಂತೆ ಆಗುತ್ತದೆ ಎಂದು ಉತ್ತರ ನೀಡುತ್ತಾರೆ.