ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಬೌಲರ್ ಅನ್ನು ಆಯ್ಕೆ ಮಾಡಿದ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಕ್ರಿಕೆಟ್ ವಿಶ್ಲೇಷಕರು ! ಆಯ್ಕೆಯಾದ ಬೌಲರ್ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಸಂಸ್ಥೆಯು ಕ್ರಿಕೆಟ್ ಕನೆಕ್ಟೆಡ್ ಎಂಬ ಕಾರ್ಯಕ್ರಮ ನಡೆಸುತ್ತಿದ್ದು ಇದರಲ್ಲಿ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಯಾರು, ಬ್ಯಾಟ್ಸ್ಮನ್ ಯಾರು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.


ಈಗಾಗಲೇ ನಿಮಗೆ ತಿಳಿಸಿದಂತೆ ಆರ್ಸಿಬಿ ತಂಡದ ಪ್ರಮುಖ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ಅವರು ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಬ್ಯಾಟ್ಸ್ಮನ್ ಆಗಿ ಹೊರ ಹೊಮ್ಮಿದ್ದಾರೆ. ಇದೀಗ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಚರ್ಚೆ ಮುಂದುವರಿಸಿರುವ ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಸಂಸ್ಥೆಯ ವಿಶ್ಲೇಷಕರು ಅತ್ಯುತ್ತಮ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಅವರನ್ನು ಆಯ್ಕೆ ಮಾಡಿದ್ದಾರೆ.

ಡೇಲ್ ಸ್ಟೇನ್, ಆಶಿಶ್ ನೆಹ್ರಾ, ಜಸ್ಪ್ರೀತ್ ಬುಮ್ರಾ, ಸುನಿಲ್ ನರೇನ್ ರವರನ್ನು ಸೇರಿದಂತೆ 10 ಬೌಲರ್ ಗಳು ಪೈಪೋಟಿಯಲ್ಲಿ ಇದ್ದರು. ಆದರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಮೊದಲಿಗೆ ಲಸಿತ್ ಮಲಿಂಗಾ ರವರನ್ನು ಶ್ರೇಷ್ಠ ಸಾರ್ವಕಾಲಿಕ ಬೌಲರ್ ಆಗಿ ಆಯ್ಕೆ ಮಾಡಲು ಪ್ರಸ್ತಾವ ಇರಿಸಿದರು, ಇದಕ್ಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕ್ರಿಕೆಟ್ ತಜ್ಞರಾದ ಡೀನ್ ಜೋನ್ಸ್, ಟಾಮ್ ಮೂಡಿ, ಆಕಾಶ್ ಚೋಪ್ರಾ, ಮ್ಯಾಥ್ಯೂ ಹೇಡನ್, ಗ್ರೇಮ್ ಸ್ಮಿತ್, ಸೈಮನ್ ಡೌಲ್ ಮತ್ತು ಇಯಾನ್ ಬಿಷಪ್ ರವರೆಲ್ಲರೂ ಸಮ್ಮತಿ ಸೂಚಿಸುವ ಮೂಲಕ ಮಲಿಂಗಾ ರವರು ಸಾರ್ವಕಾಲಿಕ ಶ್ರೇಷ್ಠ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯ ಕುರಿತು ನಿಮ್ಮ ಅಭಿಪ್ರಾಯ?

Post Author: Ravi Yadav