ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಬ್ಯಾಟ್ಸ್ ಮ್ಯಾನ್ ಆಯ್ಕೆ ಮಾಡಿದ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ! ಆಯ್ಕೆಯಾದ ಆಟಗಾರ ಯಾರು ಗೊತ್ತಾ??

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಬ್ಯಾಟ್ಸ್ ಮ್ಯಾನ್ ಆಯ್ಕೆ ಮಾಡಿದ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ! ಆಯ್ಕೆಯಾದ ಆಟಗಾರ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಐಪಿಎಲ್ ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಯಾರು, ಸಾರ್ವಕಾಲಿಕ ಶ್ರೇಷ್ಠ ಬೌಲರ್ ಯಾರು, ಸಾರ್ವಕಾಲಿಕ ತಂಡ ಯಾವುದು, ಸಾರ್ವಕಾಲಿಕ ಆಟಗಾರ ಯಾರು ಎಂಬ ಚರ್ಚೆಗಳು ಎಂದಿಗೂ ಮುಗಿಯುವುದಿಲ್ಲ.

ಪ್ರತಿ ಸಂಸ್ಥೆಯು, ಆಟಗಾರರು ತಮ್ಮ ಅಭಿಪ್ರಾಯಗಳನ್ನು ಸದಾ ಹೊರ ಹಾಕುತ್ತಿರುತ್ತಾರೆ. ಇದೀಗ ವಿಶ್ವದ ಖ್ಯಾತ ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಒಂದಾಗಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆಯ ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಬ್ಯಾಟ್ಸ್ಮನ್ ಅನ್ನು ಘೋಷಣೆ ಮಾಡಿದ್ದಾರೆ.

ಹೌದು ಇದೀಗ ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಸಂಸ್ಥೆಯ ಕ್ರಿಕೆಟ್ ವಿಶ್ಲೇಷಕರು ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಬ್ಯಾಟ್ಸ್ಮನ್ ಅನ್ನು ಘೋಷಣೆ ಮಾಡಿದ್ದು ನಮ್ಮೆಲ್ಲರ ನೆಚ್ಚಿನ ತಂಡವಾದ ಆರ್ಸಿಬಿ ತಂಡದ ಪ್ರಮುಖ ಬ್ಯಾಟ್ಸ್ ಮ್ಯಾನ್ ಹಾಗೂ 360 ಡಿಗ್ರಿ ಆಟಗಾರ ಎಂದೇ ಖ್ಯಾತಿ ಪಡೆದುಕೊಂಡಿರುವ ಎಬಿ ಡಿವಿಲಿಯರ್ಸ್ ರವರು ಈ ಗೌರವಕ್ಕೆ ಭಾಜನರಾಗಿದ್ದಾರೆ. ಇದನ್ನು ಸ್ವತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪ್ರಕಟಣೆ ಮಾಡಿದೆ.