ತನ್ನ ಜೀವನದ ಅತ್ಯುತ್ತಮ ಕ್ಷಣ ಯಾವುದು ಎಂದು ಬಹಿರಂಗಪಡಿಸಿದ ದಾದಾ ! ಒಮ್ಮೆಲೆ ಭಾವುಕರಾದ ಕ್ರಿಕೆಟ್ ಅಭಿಮಾನಿಗಳು. ಯಾವುದು ಗೊತ್ತಾ?

ತನ್ನ ಜೀವನದ ಅತ್ಯುತ್ತಮ ಕ್ಷಣ ಯಾವುದು ಎಂದು ಬಹಿರಂಗಪಡಿಸಿದ ದಾದಾ ! ಒಮ್ಮೆಲೆ ಭಾವುಕರಾದ ಕ್ರಿಕೆಟ್ ಅಭಿಮಾನಿಗಳು. ಯಾವುದು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತ ಕ್ರಿಕೆಟ್ ತಂಡ ಇಂದು ಎಷ್ಟೇ ಯಶಸ್ಸು ಕಂಡು ಅಭಿಮಾನಿಗಳನ್ನು ರಂಜಿಸುತ್ತಿರಬಹುದು, ಆದರೆ ನಿಮಗೆ ಇಷ್ಟವಾದ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಕ್ರಿಕೆಟ್ ತಂಡ ಯಾವುದು ಎಂದರೆ ಪ್ರತಿಯೊಬ್ಬರು ಬೆರಳು ಮಾಡುವುದು ಗಂಗೂಲಿ ನಾಯಕತ್ವದ ಟೀಮ್ ಇಂಡಿಯಾ ಕಡೆಗೆ.

ಅಂದಿನ ದಾದಾಗಿರಿಯ ದಿನಗಳನ್ನು ಯಾವೊಬ್ಬ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ. ಒಂದೆಡೆ ಕ್ರಿಕೆಟ್ನ ದಂತಕಥೆ ಸಚಿನ್ ತೆಂಡೂಲ್ಕರ್, ಮತ್ತೊಂದೆಡೆ ಬೌಲರ್ಗಳಿಗೆ ಬೆವರಿಳಿಸುವ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್, ಮತ್ತೊಂದೆಡೆ ದಾದಾಗಿರಿ, ಡ್ಯಾಶಿಂಗ್ ಓಪನರ್ ಸೆಹ್ವಾಗ್, ಕೊನೆಯಲ್ಲಿ ಬೌಲರ್ಗಳ ಕೈಯಲ್ಲಿ ಬ್ಯಾಟಿಂಗ್ ಮಾಡಿಸಿ ಪಂದ್ಯವನ್ನು ಕಾಪಾಡುವ ವಿವಿಎಸ್ ಲಕ್ಷ್ಮಣ್. ಹೀಗೆ ಹಲವಾರು ದಿಗ್ಗಜರನ್ನು ಒಳಗೊಂಡಿದ್ದ ಶ್ರೇಷ್ಠ ಭಾರತೀಯ ಕ್ರಿಕೆಟ್ ತಂಡವು ಇಂದಿಗೂ ಜನರ ಅಚ್ಚುಮೆಚ್ಚಿನ ತಂಡವಾಗಿದೆ.

ಇದೀಗ ವಿಸ್ಡನ್ ಇಂಡಿಯಾ ಸಂಸ್ಥೆಯು ತನ್ನ ಟ್ವಿಟ್ಟರ್ ನಲ್ಲಿ ಈ ನಾಲ್ಕು ದಿಗ್ಗಜರು ಒಟ್ಟಾಗಿರುವ ಫೋಟೋ ಪ್ರಕಟನೆ ಮಾಡಿ, ಇದಕ್ಕಿಂತಲೂ ಉತ್ತಮ ಫೋಟೋ ತೋರಿಸಿ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೌರವ್ ಗಂಗೂಲಿ ರವರು ಇದು ನನ್ನ ಜೀವನದ ಅತ್ಯುತ್ತಮ ಕಾಲಘಟ್ಟ, ಈ ತಂಡದ ಜೊತೆಗಿನ ಪ್ರತಿಯೊಂದು ದಿನಗಳನ್ನು ನಾನು ಆನಂದಿಸಿದ್ದೇನೆ. ನನ್ನ ಜೀವನದ ಶ್ರೇಷ್ಠ ಕ್ಷಣಗಳು ಈ ಫೋಟೋದಲ್ಲಿ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಫೋಟೋ ಬಗ್ಗೆ ಹಾಗೂ ಅಂದಿನ ಟೀಮ್ ಇಂಡಿಯಾದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.