ಚೀನಾ ದೇಶಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೆಡ್ಡು ಹೊಡೆಯಲು ತಯಾರಾದ ಭಾರತ ! ಮತ್ತೆರಡು ದಿಟ್ಟ ನಿರ್ಧಾರ ಕೈಗೊಂಡು ಮಾಡಲು ಹೊರಟಿರುವುದು ಏನು ಗೊತ್ತಾ?

ಚೀನಾ ದೇಶಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೆಡ್ಡು ಹೊಡೆಯಲು ತಯಾರಾದ ಭಾರತ ! ಮತ್ತೆರಡು ದಿಟ್ಟ ನಿರ್ಧಾರ ಕೈಗೊಂಡು ಮಾಡಲು ಹೊರಟಿರುವುದು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ವಿಶ್ವದ ಎಲ್ಲೆಡೆ ಕೋರೋಣ ವೈರಸ್ ತಾಂಡವವಾಡುತ್ತಿದೆ.
ಇದರಿಂದ ವಿಶ್ವದ ಹಲವಾರು ದೇಶಗಳು ಕೋಟ್ಯಂತರ ರೂ ಬೆಲೆಬಾಳುವ ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುವಂತೆ ಚೀನಾ ಬಳಿ ಮನವಿ ಮಾಡಿವೆ.

ಚೀನಾ ದೇಶದ ಜೊತೆ ವ್ಯಾಪಾರ ವ್ಯವಹಾರ ಅಂತ್ಯಗೊಳಿಸುವ ಆಲೋಚನೆಯಲ್ಲಿ ತೊಡಗಿದ್ದರೂ ಹಾಗೂ ಚೀನಾ ದೇಶ ಕಳಪೆ ಗುಣಮಟ್ಟದ ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುತ್ತಿದ್ದರೂ ಕೂಡ ವಿಶ್ವದ ಹಲವಾರು ರಾಷ್ಟ್ರಗಳು ಚೀನಾ ದೇಶದಿಂದ ಬೇರೆ ವಿಧಿ ಇಲ್ಲದೆ ಆಮದು ಮಾಡಿಕೊಳ್ಳುತ್ತಿವೆ. ಭಾರತ ದೇಶ ಕೂಡ ಇದಕ್ಕೆ ಹೊರತಲ್ಲ, ಒಂದೆಡೆ ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಶುರುವಾಗಿದ್ದರೂ ಕೂಡ ವೈದ್ಯಕೀಯ ಉಪಕರಣಗಳಿಗಾಗಿ ಚೀನಾ ದೇಶವನ್ನು ಅವಲಂಬಿಸದೆ ಬೇರೆ ವಿಧಿಯಿಲ್ಲ.

ಇದೀಗ ಇದನ್ನೆಲ್ಲ ಗಮನಿಸಿರುವ ಕೇಂದ್ರ ಸರ್ಕಾರವು ಇಂತಹ ಪರಿಸ್ಥಿತಿಯಲ್ಲಿ ಆಮದು ಮಾಡಿಕೊಳ್ಳದೆ ಬೇರೆ ವಿಧಿ ಇಲ್ಲ ಎಂಬುದನ್ನು ಅರಿತುಕೊಂಡು ಆಮದು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಮುಂದೆ ಈ ರೀತಿಯ ಪರಿಸ್ಥಿತಿ ಎದುರಾಗಬಾರದು ಎಂದು ವೈದ್ಯಕೀಯ ಉಪಕರಣಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಬೃಹತ್ ಮಟ್ಟದಲ್ಲಿ ತಯಾರಿ ಮಾಡಲು ವೇದಿಕೆ ಸಿದ್ಧಪಡಿಸುತ್ತಿದೆ.

ವೈದ್ಯಕೀಯ ಉಪಕರಣಗಳನ್ನು ತಯಾರು ಮಾಡುವ ಕಂಪನಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಿ, ಹೊಸ ಕಂಪನಿಗಳಿಗೆ ಉತ್ತೇಜನ ನೀಡಲು ಯೋಜನೆ ರೂಪಿಸುತ್ತಿರುವ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ವಿವಿಧ ರೀತಿಯ ವೈದ್ಯಕೀಯ ಉಪಕರಣಗಳನ್ನು ಭಾರತದಲ್ಲಿ ತಯಾರಿ ಮಾಡಲು ಉತ್ತೇಜನ ನೀಡುವುದಾಗಿ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೇ, ಅಲ್ಲಿಯವರೆಗೂ ಚೀನಾ ದೇಶದ ಮೇಲೆ ಅವಲಂಬಿತವಾಗದೇ ಇರಲು ಆಲೋಚನೆ ನಡೆಸುತ್ತಿರುವ ಕೇಂದ್ರ ಸರ್ಕಾರವು ವಿಶ್ವದ ಇತರ ದೇಶಗಳಿಂದ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಅಂದಾಜು ಮೊತ್ತದ ವಿವರಣೆ (ಕೊಟೇಶನ್) ಪಡೆದುಕೊಂಡಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.