ಚೀನಾ ಮಹಾ ಹೆಜ್ಜೆಗೆ ಅಡ್ಡಗಾಲು ಹಾಕಿದ ನರೇಂದ್ರ ಮೋದಿ ! ಚೀನಾ ಗೆ ಮೋದಿ ಮಾಸ್ಟರ್ಸ್ ಸ್ಟ್ರೋಕ್ ನೀಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕೊರೊನ ವೈರಸ್ ಪರಿಣಾಮದಿಂದ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕತೆ ನೆಲಕಚ್ಚಿರುವ ಕಾರಣ ಇದನ್ನೇ ಬಂಡವಾಳವನ್ನಾಗಿಸಿ ಕೊಳ್ಳಲು ಚೀನಾ ದೇಶ ಯೋಜನೆ ರೂಪಿಸಿದೆ.

ವಿಶ್ವದ ಬಲಾಡ್ಯ ದೇಶಗಳಲ್ಲಿ ವಿದೇಶಿ ಬಂಡವಾಳದ ಮೂಲಕ ಪ್ರಮುಖ ಕಂಪನಿಗಳಲ್ಲಿ ಶೇರು ಖರೀದಿ ಮಾಡುವ ಮೂಲಕ ವಿಶ್ವದ ಆರ್ಥಿಕತೆಯಲ್ಲಿ ಹಿಡಿತ ಸಾಧಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದನ್ನು ಅರಿತುಕೊಂಡ ಇಟಲಿ, ಸ್ಪೇನ್ ಹಾಗೂ ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ದೇಶಗಳಲ್ಲಿ ವಿದೇಶಿಗರು ಹೂಡಿಕೆ ಮಾಡಬಹುದಾದ ನಿಯಮಗಳನ್ನು ಮತ್ತಷ್ಟು ಕಠಿಣ ಮಾಡಿ ಚೀನಾ ದೇಶವು ತಮ್ಮ ದೇಶದಲ್ಲಿ ಹೂಡಿಕೆ ಮಾಡುವುದನ್ನು ತಡೆಯಲು ನೀತಿ ರೂಪಿಸಿದ್ದಾರೆ. ಇದೀಗ ನರೇಂದ್ರ ಮೋದಿ ರವರು ಕೂಡ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತಕ್ಕೆ ವಿದೇಶಿ ಬಂಡವಾಳ ಬಹಳ ಅಗತ್ಯವಾಗಿದೆ. ಭಾರತದ ಪ್ರಮುಖ ಗುರಿ ಚೀನಾ ದೇಶವನ್ನು ತಡೆಯುವುದು, ಇತರ ದೇಶಗಳು ಕೊಂಚ ಹೂಡಿಕೆ ಮಾಡಿದರೂ ಭಾರತಕ್ಕೆ ಯಾವುದೇ ತೊಂದರೆ ಇಲ್ಲ. ಇದನ್ನು ಅರಿತಿರುವ ನರೇಂದ್ರ ಮೋದಿರವರು ಭಾರತ ದೇಶದ ಜೊತೆ ಗಡಿಯನ್ನು ಹಂಚಿಕೊಂಡಿರುವ ಯಾವುದೇ ದೇಶಗಳಾದರೂ ಭಾರತದಲ್ಲಿ ಹೂಡಿಕೆ ಮಾಡಬೇಕು ಎಂದರೆ ಸರ್ಕಾರದ ಅನುಮತಿ ಪಡೆದು ಕೊಂಡ ನಂತರ ಮಾತ್ರ ಹೂಡಿಕೆ ಮಾಡಬೇಕು ಎಂಬ ಕಾನೂನನ್ನು ರಚಿಸಿದ್ದಾರೆ. ಚೀನಾ ದೇಶವು HDFC ಶೇರುಗಳನ್ನು ಖರೀದಿ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ಈ ಆದೇಶ ಹೊರ ಬಿದ್ದಿದ್ದು, ಇನ್ನು ಮುಂದೆ ಚೀನಾ ದೇಶವು ಭಾರತದಲ್ಲಿ ಹೂಡಿಕೆ ಮಾಡಬೇಕು ಎಂದರೆ ಕೇಂದ್ರ ಸರ್ಕಾರದ ಬಳಿ ಸಂಪೂರ್ಣ ವರದಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಇಲ್ಲವಾದಲ್ಲಿ ಒಂದು ರೂಪಾಯಿ ಹೂಡಿಕೆ ಮಾಡಲು ಸಾಧ್ಯವಿಲ್ಲ.

Post Author: Ravi Yadav