ನನ್ನ ಜೀವನದಲ್ಲಿ ಎಂದಿಗೂ ಈ ರೀತಿಯ ಉತ್ತಮ ಆಟಗಾರನನ್ನು ನೋಡಿಲ್ಲ ಎಂದು ಗ್ರೇಮ್ ಸ್ವಾನ್ ಆಯ್ಕೆ ಮಾಡಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು ಗೊತ್ತಾ??

ನನ್ನ ಜೀವನದಲ್ಲಿ ಎಂದಿಗೂ ಈ ರೀತಿಯ ಉತ್ತಮ ಆಟಗಾರನನ್ನು ನೋಡಿಲ್ಲ ಎಂದು ಗ್ರೇಮ್ ಸ್ವಾನ್ ಆಯ್ಕೆ ಮಾಡಿದ ಕನ್ನಡಿಗ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಂಗ್ಲೆಂಡ್ ತಂಡದಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ತವರು ನೆಲ ವೇಗದ ಬೌಲರ್ ಗಳಿಗೆ ಸಹಾಯ ಮಾಡುವ ಕಾರಣ ಸ್ಪಿನ್ನರ್ ಗಳು ಅಷ್ಟಾಗಿ ಪ್ರಭಾವ ಬೀರುವುದಿಲ್ಲ.

ಇಂಗ್ಲೆಂಡ್, ಆಸ್ಟ್ರೇಲಿಯಾ ದಂತಹ ವೇಗದ ಪಿಚ್ ಗಳಲ್ಲಿಯೂ ಯಶಸ್ವಿಯಾಗಿ ಬೌಲಿಂಗ್ ಮಾಡಿ 13 ವರ್ಷಗಳ ಕಾಲ ಇಂಗ್ಲೆಂಡ್ ಕ್ರಿಕೆಟ್ ನಲ್ಲಿ ತಮ್ಮ ಸ್ಪಿನ್ ಜಾದೂ ಮಾಡಿದ ಗ್ರೇಮ್ ಸ್ವಾನ್ ರವರು ತಮ್ಮ ಜೀವನದಲ್ಲಿ ನೋಡಿದ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಅವರು ಮತ್ಯಾರು ಅಲ್ಲ ನಮ್ಮ ಭಾರತದ ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್. ಹೌದು, ಇದೀಗ ರಾಹುಲ್ ದ್ರಾವಿಡ್ ರವರ ಕುರಿತು ಗ್ರೇಮ್ ಸ್ವಾನ್ ರವರು ಏನು ಹೇಳಿದ್ದಾರೆ ಗೊತ್ತಾ ತಿಳಿಯಲು ಕೆಳಗಡೆ ಓದಿ.

ರಾಹುಲ್ ದ್ರಾವಿಡ್ ರವರು ನನ್ನ ಜೀವನದಲ್ಲಿ ಕಂಡ ಉತ್ತಮ ಆಟಗಾರ, ಅವರಂತಹ ಮತ್ತೊಬ್ಬ ಆಟಗಾರರನ್ನು ನಾನು ನೋಡಿಲ್ಲ, ನಾನು ರಾಹುಲ್ ದ್ರಾವಿಡ್ ರವರ ಜೊತೆ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಕೂಡ ಆಟವಾಡಿದ್ದೇನೆ. ಅವರ ಬ್ಯಾಟಿಂಗ್ ನೋಡಿದರೆ ನಂಬಲು ಅಸಾಧ್ಯವಾಗುತ್ತದೆ. ಕೌಂಟಿಯಲ್ಲಿ ಅವರು ಔಟ್ ಆಗುವುದೇ ಇಲ್ಲ, ಇನ್ನು ನಾನು ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಅವರಿಗೆ ಬೌಲಿಂಗ್ ಮಾಡಿದ್ದೆ, ಮೊದಲ ಎಸೆತದಲ್ಲಿ ಅವರು ಔಟಾಗಿದ್ದರು, ಆದರೆ ಸತ್ಯ ಹೇಳುತ್ತೇನೆ ನಾನು ಅವರನ್ನು ಔಟ್ ಮಾಡಿರಬಹುದು ಆ ಬಾಲ್ ಅನ್ನು ಬಹಳ ಉತ್ತಮ ಬಾಲ್ ಎಂದು ಅಂದು ಕೊಳ್ಳಬಹುದು, ಆದರೆ ಸಾಮಾನ್ಯವಾಗಿ ಆ ರೀತಿಯ ಬಾಲ್ ನಲ್ಲಿ ಅವರು ಔಟ್ ಆಗುವುದಿಲ್ಲ ಎಂದು ಹೇಳಿ ದ್ರಾವಿಡ್ ರವರ ಆಟವನ್ನು ಮೆಚ್ಚಿಕೊಂಡಿದ್ದಾರೆ.