ಚೀನಾದ ಕುತಂತ್ರಿ ಐಡಿಯಾ ಗೆ ಬ್ರೇಕ್ ಹಾಕಲು ಮುಂದಾದ ಮತ್ತೊಂದು ದೇಶ! ಭಾರತಕ್ಕೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾದ ದಕ್ಷಿಣ ಕೊರಿಯಾ ಏನು ಗೊತ್ತಾ??

ಚೀನಾದ ಕುತಂತ್ರಿ ಐಡಿಯಾಗೆ ಮರ್ಮಾಘಾತ ! ಭಾರತಕ್ಕೆ ಭರ್ಜರಿ ಗುಡ್ ನ್ಯೂಸ್ ನೀಡಿದ ದಕ್ಷಿಣ ಕೊರಿಯಾ ! ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕರೋನವೈರಸ್ ಇಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಇಂತಹ ಕಠಿಣ ಸಂದರ್ಭದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕತೆ ನೆಲಕಚ್ಚಿದೆ‌. ವಿಶ್ವದ ಈ ಪರಿಸ್ಥಿತಿಯನ್ನು ಲಾಭವನ್ನಾಗಿ ಮಾರ್ಪಡಿಸಿ ಕೊಳ್ಳಲು ಚೀನಾ ದೇಶ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವುದು ನಿಮಗೆ ಎಲ್ಲರಿಗೂ ತಿಳಿದೇ ಇದೆ.

ಹೌದು ಇಂತಹ ಕಠಿಣ ಸಂದರ್ಭದಲ್ಲಿ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಿ ದೇಶದ ಕಾನೂನಿನ ಅನ್ವಯ ಎಷ್ಟು ಆಗುತ್ತೋ ಅಷ್ಟು ಷೇರುಗಳನ್ನು ಖರೀದಿಸಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿದೆ. ಇದರಿಂದ ಚೀನಾ ಆರ್ಥಿಕತೆ ಮತ್ತಷ್ಟು ಪುಟಿದೇಳಲಿದೆ ಎಂಬುದು ಚೀನಾ ಲೆಕ್ಕಾಚಾರ.

ಆದರೆ ವಿಶ್ವದ ಬಹುತೇಕ ರಾಷ್ಟ್ರಗಳು ವಿಶ್ವದಲ್ಲಿ ಇಂತಹ ಕಠಿಣ ಆರೋಗ್ಯ ಸಂದರ್ಭಕ್ಕೆ ಕಾರಣವಾಗಿರುವ ಚೀನಾ ದೇಶಕ್ಕೆ ಬುದ್ಧಿ ಕಲಿಸಲು ನಿರ್ಧಾರ ಕೈಗೊಂಡಿವೆ. ಅದರಲ್ಲಿಯೂ ಅಮೆರಿಕ, ಬ್ರಿಟನ್ ಹಾಗೂ ಜಪಾನ್ ದೇಶಗಳು ಈಗಾಗಲೇ ಕಠಿಣ ಕ್ರಮದ ಎಚ್ಚರಿಕೆ ನೀಡಿ ತಮ್ಮದೇ ಆದ ರೀತಿಯಲ್ಲಿ ಚೀನಾ ದೇಶಕ್ಕೆ ಬುದ್ಧಿ ಕಲಿಸಲು ಒಂದೊಂದಾಗಿ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಇದೀಗ ಇದೇ ಸಾಲಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ದಕ್ಷಿಣ ಕೊರಿಯಾ ದೇಶವು ಚೀನಾ ದೇಶಕ್ಕೆ ಬುದ್ಧಿ ಕಲಿಸಲು ಮುಂದಾಗಿ ಭಾರತ ದೇಶಕ್ಕೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದೆ.

ಹೌದು ಇದೀಗ ದಕ್ಷಿಣ ಕೊರಿಯಾದ ಹಲವಾರು ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕ ಹಾಗೂ ಚೀನಾ ನಡುವೆ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯಿಂದಾಗಿ ಹಾಗೂ ಕೊರೊನ ಪರಿಸ್ಥಿತಿಯಿಂದ ಹಲವಾರು ಕಂಪನಿಗಳು ತಮ್ಮ ಘಟಕಗಳನ್ನು ಚೀನಾ ದೇಶದಿಂದ ಭಾರತಕ್ಕೆ ಸ್ಥಳಾಂತರಿಸಲು ಮುಂದಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಅಷ್ಟಕ್ಕೂ ಯಾವ ಯಾವ ಕಂಪನಿಗಳು ಈಗಾಗಲೇ ಆಸಕ್ತಿ ತೋರಿವೆ ಗೊತ್ತಾ?

ವರದಿಯ ಪ್ರಕಾರ, ಚೆನ್ನೈನಲ್ಲಿರುವ ಕೊರಿಯಾದ ರಾಯಬಾರಿ ಚೀನಾದಲ್ಲಿರುವ ಉತ್ಪಾದನಾ ಘಟಕಗಳೊಂದಿಗೆ ಮಾತುಕತೆ ನಡೆಸುತ್ತಿದ್ದು ಸಾಧ್ಯವಾದಷ್ಟು ಕಂಪನಿಗಳನ್ನು ಭಾರತಕ್ಕ ಸ್ಥಳಾಂತರ ಮಾಡಿಸಲು ಪ್ರಯತ್ನ ಪಡುತ್ತಿದ್ದಾರೆ.

“ನಮ್ಮ ಎರಡು ಕಬ್ಬಿಣ ಮತ್ತು ಉಕ್ಕಿನ ಕಂಪನಿಗಳು ಈಗಾಗಲೇ ಭಾರತಕ್ಕೆ ಸ್ಥಳಾಂತರ ಮಾಡಲು ವಿನಂತಿ ಮಾಡಿವೆ, ಕೆಲವು ಸ್ಟಾರ್ಟ್ಅಪ್ಗಳು ಮತ್ತು ಆರೋಗ್ಯ ವಲಯದ ಒಂದು ಕಂಪನಿ ಚೀನಾದಿಂದ ಭಾರತಕ್ಕೆ ಬರಲು ಬಯಸುತ್ತಿವೆ” ಎಂದು ಕೊರಿಯಾ ಗಣರಾಜ್ಯದ ಉಪ ಜನರಲ್ ಯುಪ್ ಲೀ ಹೇಳಿಕೆ ನೀಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಪೋಸ್ಕೊ ಮತ್ತು ಹ್ಯುಂಡೈ ಸ್ಟೀಲ್ ಕಾರ್ಖಾನೆಗಳನ್ನು ಸ್ಥಾಪಿಸಲು ಭಾರತ ಸರ್ಕಾರ ಆಸಕ್ತಿ ತೋರಿಸಿದೆ ಎಂದು ಯುಪ್ ಲೀ ಹೇಳಿದರು, ಆದರೆ ಕಂಪೆನಿಗಳಲ್ಲಿ ಕೆಲವು ಹೂಡಿಕೆಗಳನ್ನು ಮಾಡಿದರೆ ರಾಜ್ಯದಲ್ಲಿ ಘಟಕಗಳನ್ನು ಸ್ಥಾಪಿಸಲು ಒಪ್ಪಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈಗಾಗಲೇ ಈ ರೀತಿಯ ಹಲವು ಚರ್ಚೆ ಗಳು ನಡೆಯುತ್ತಿದ್ದು ಕೊರೊನ ಪರಿಸ್ಥಿತಿ ಯಿಂದ ನಿಧಾನವಾಗಬಹುದು ಆದರೆ ಈ ಪರಿಸ್ಥಿತಿ ಅಂತ್ಯವಾದ ಬಳಿಕ ತ್ವರಿತಗತಿಯಲ್ಲಿ ಕೆಲಸಗಳು ನಡೆಯಲಿವೆ ಎಂದು ಕೊರಿಯಾ ರಾಯಭಾರಿ ತಿಳಿಸಿದ್ದಾರೆ.