ವಿದೇಶಿ ತಬ್ಲಿಘಿ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಯೋಗಿ ಆದಿತ್ಯನಾಥ್ ಸರ್ಕಾರ ! ಮಾಡಿದ್ದೇನು ಗೊತ್ತಾ??

ವಿದೇಶಿ ತಬ್ಲಿಘಿ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಯೋಗಿ ಆದಿತ್ಯನಾಥ್ ಸರ್ಕಾರ ! ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿಯೂ ಕೂಡ ಯಾವುದೇ ಅಂಜಿಕೆಯಿಲ್ಲದೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದಾರೆ.

ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ತಬ್ಲಿಘಿ ಜಮಾತ್ ನಲ್ಲಿ ಹಲವಾರು ವಿದೇಶಿಯರು ಕೂಡ ಭಾಗವಹಿಸಿದ್ದರು. ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರವರು ಜಮಾತ್ ಸಭೆಯನ್ನು ನಿಲ್ಲಿಸಿದ ಕೂಡಲೇ ಎಲ್ಲರೂ ಕಣ್ಮರೆಯಾಗಿ ವಿವಿಧ ರಾಜ್ಯಗಳಲ್ಲಿ ಸೇರಿಕೊಂಡರು. ಉತ್ತರ ಪ್ರದೇಶದಲ್ಲಿಯೂ ಕೂಡ 17 ವಿದೇಶಿಗರು ಅಡಗಿ ಮಸೀದಿಯಲ್ಲಿ ಕುಳಿತಿದ್ದರು. ಪೊಲೀಸರು ಎಷ್ಟೇ ಮನವಿ ಮಾಡಿದರೂ ಕೂಡ ಸರ್ಕಾರದ ಮುಂದೆ ಹಾಜರಾಗಲಿಲ್ಲ. ಕೊನೆಗೆ ತನಿಖೆ ನಡೆಸಿ ತಾಜ್ ಹಾಗೂ ಖುರೈಶ್ ಮಸೀದಿಯಲ್ಲಿ 4 ಜನ ಸ್ವದೇಶೀಯರು ಸೇರಿದಂತೆ 21 ಮಂದಿಯನ್ನು ಬಂಧಿಸಲಾಗಿತ್ತು.

ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್ ದೇಶಗಳಿಂದ ಬಂದಿರುವ ವಿದೇಶಿಗರು ಭಾರತದ ವೀಸಾ ಹಾಗೂ ಪಾಸ್ಪೋರ್ಟ್ ನಿಯಮಗಳ ಪ್ರಕಾರ ಯಾವುದೇ ಧರ್ಮ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ಈ ವಿದೇಶಿಗರು ಈ ಕಾನೂನನ್ನು ಉಲ್ಲಂಘಿಸಿದ ಕಾರಣ 17 ತಬ್ಲಿಘಿ ಗಳನ್ನು ಕ್ವಾರಂಟೈನ್ ಅವಧಿ ಮುಗಿದ ಕೂಡಲೇ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪ್ರತಿಯೊಬ್ಬರ ತಪ್ಪುಗಳನ್ನು ಸಾಬೀತು ಮಾಡಲಾಗಿದೆ. ಇದೀಗ ಎಲ್ಲರನ್ನೂ ಮುಂದಿನ ನ್ಯಾಯಾಂಗ ತನಿಖೆಗಾಗಿ ಜೈಲಿಗೆ ಕಳುಹಿಸಲಾಗಿದ್ದು, ವೀಸಾ ಹಾಗೂ ಪಾಸ್ಪೋರ್ಟ್ ನಿಯಮಗಳ ಉಲ್ಲಂಘನೆಯನ್ನು ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂಬುದು ತಿಳಿದು ಬಂದಿದೆ.