ಲಾಕ್ಡೌನ್ ಉಲ್ಲಂಘಿಸುವವರಿಗೆ ಬುದ್ಧಿ ಕಲಿಸಲು ಮಂಡ್ಯ ಪೊಲೀಸರು ಮಾಡಿದ್ದೇನು ಗೊತ್ತಾ?? ದೇಶದೆಲ್ಲೆಡೆ ಭಾರೀ ಪ್ರಶಂಸೆಗೆ ಕಾರಣವಾದ ಮಂಡ್ಯ ಪೊಲೀಸರ ಐಡಿಯಾ

ಲಾಕ್ಡೌನ್ ಉಲ್ಲಂಘಿಸುವವರಿಗೆ ಬುದ್ಧಿ ಕಲಿಸಲು ಮಂಡ್ಯ ಪೊಲೀಸರು ಮಾಡಿದ್ದೇನು ಗೊತ್ತಾ?? ದೇಶದೆಲ್ಲೆಡೆ ಭಾರೀ ಪ್ರಶಂಸೆಗೆ ಕಾರಣವಾದ ಮಂಡ್ಯ ಪೊಲೀಸರ ಐಡಿಯಾ

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ದೇಶದ ಎಲ್ಲೆಡೆ ಚೀನಾ ವೈರಸ್ ವಿರುದ್ಧ ಹೋರಾಟ ಮಾಡಲು ಲಾಕ್ ಡೌನ್ ವಿಧಿಸಲಾಗಿದೆ. ಸರ್ಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಕೂಡ ಜನರು ಮಾತ್ರ ಹೊರಗಡೆ ಬರುವುದನ್ನು ಬಿಡುತ್ತಿಲ್ಲ.

ಅವಶ್ಯಕವಾಗಿ ಜನರು ಹೋರಾಟ ಮಾಡಿದರೆ ಜೀವನೋಪಾಯಕ್ಕಾಗಿ ಬರುತ್ತಿದ್ದಾರೆ ಎಂದು ಕೊಳ್ಳಬಹುದು ಆದರೆ ಹಲವಾರು ಜನ ಅನಗತ್ಯವಾಗಿ ಹೊರಗಡೆ ಬರುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ. ಇದನ್ನು ಕಂಡ ಪೊಲೀಸರು ಇಷ್ಟು ದಿವಸ ಲಾಠಿ ರುಚಿ ತೋರಿಸುತ್ತಿದ್ದರು ಅಥವಾ ಇನ್ನಿತರ ರೀತಿಯಲ್ಲಿ ಬುದ್ಧಿವಾದ ಹೇಳಲು ಪ್ರಯತ್ನ ಪಡುತ್ತಿದ್ದರು. ಆದರೂ ಜನ ಬುದ್ಧಿ ಕಲಿಯದ ಕಾರಣ ಮಂಡ್ಯ ಪೊಲೀಸರು ನಿಯಮ ಉಲ್ಲಂಘನೆ ಮಾಡುವವರಿಗೆ ಮಾದರಿ ಶಿಕ್ಷೆಯ ಮಾರ್ಗ ಕಂಡು ಹಿಡಿದಿದ್ದಾರೆ. ಇವರ ಈ ಐಡಿಯಾ ಗೆ ದೇಶದ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗಿವೆ.

ಹೌದು, ಮಂಡ್ಯ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿದವರಿಗೆ ನಗರದ ಹೊರ ವಲಯದಲ್ಲಿರುವ ಕೆರೆಗಳನ್ನು ಕ್ಲೀನ್ ಮಾಡುವ ಶಿಕ್ಷೆ ನೀಡಿದ್ದಾರೆ. ಇದೀಗ ಮಂಡ್ಯ ನಗರದ ಹೊರ ವಲಯದಲ್ಲಿರುವ ದೇವಿರಾಮಣ್ಣೀ ಕೆರೆಯನ್ನು ಸ್ವಚ್ಛ ಮಾಡುವ ಕಾರ್ಯ ನೀಡಲಾಗಿತ್ತು. ಈ ಫೋಟೋಗಳು ಹೊರಬಿದ್ದಿದ್ದು ಇದೀಗ ಮಂಡ್ಯ ಜಿಲ್ಲೆಯ ಪೊಲೀಸರಿಂದ ಕರ್ನಾಟಕ ಪೊಲೀಸರು ಈ ರೀತಿಯ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ದೇಶದ ಎಲ್ಲೆಡೆ ಬಾರಿ ಪ್ರಶಂಸೆಗಳು ವ್ಯಕ್ತವಾಗಿವೆ.