ತನ್ನನ್ನು ಆಯ್ಕೆ ಮಾಡಿಕೊಳ್ಳದೇ ಸಾರ್ವಕಾಲಿಕ ಶ್ರೇಷ್ಠ ಏಕದಿನ ಕ್ರಿಕೆಟ್ ತಂಡವನ್ನು ಘೋಷಣೆ ಮಾಡಿದ ಶೇನ್ ವಾರ್ನ್ ! ಇಬ್ಬರು ಭಾರತೀಯರು ಸೇರಿದಂತೆ ಆಯ್ಕೆಗೊಂಡ ಆಟಗಾರರು ಯಾರು ಯಾರು ಗೊತ್ತಾ??

ತನ್ನನ್ನು ಆಯ್ಕೆ ಮಾಡಿಕೊಳ್ಳದೇ ಸಾರ್ವಕಾಲಿಕ ಶ್ರೇಷ್ಠ ಏಕದಿನ ಕ್ರಿಕೆಟ್ ತಂಡವನ್ನು ಘೋಷಣೆ ಮಾಡಿದ ಶೇನ್ ವಾರ್ನ್ ! ಇಬ್ಬರು ಭಾರತೀಯರು ಸೇರಿದಂತೆ ಆಯ್ಕೆಗೊಂಡ ಆಟಗಾರರು ಯಾರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಸಾರ್ವಕಾಲಿಕ ಏಕದಿನ ಕ್ರಿಕೆಟ್ ತಂಡವನ್ನು ಘೋಷಣೆ ಮಾಡಿದ್ದಾರೆ.

ತನ್ನ ಕ್ರಿಕೆಟ್ ಜೀವನದಲ್ಲಿ ಹಲವಾರು ಪಂದ್ಯಗಳನ್ನು ಆಡಿರುವ ಶೇನ್ ವಾರ್ನ್ ಅವರು ಆಸ್ಟ್ರೇಲಿಯ ತಂಡದ ಪರವಾಗಿ 700 ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇದೀಗ ತಮ್ಮ ಕ್ರಿಕೆಟ್ ಜೀವನದ ಸವಾಲುಗಳನ್ನು ನೆನಪಿಸಿಕೊಳ್ಳುತ್ತಾ ಈ ತಂಡವನ್ನು ಆಯ್ಕೆ ಮಾಡಿರುವುದಾಗಿ ಹೇಳಿ ಕೊಂಡಿದ್ದಾರೆ.

ತನ್ನನ್ನು ತಾನು ಆಯ್ಕೆ ಮಾಡಿಕೊಳ್ಳದೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಈ ತಂಡದ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆರಂಭಿಕ ಆಟಗಾರರಾಗಿ ಭಾರತ ಕ್ರಿಕೆಟ್ ತಂಡದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡದ ದಿಗ್ಗಜ ಓಪನರ್ ಸನತ್ ಜಯಸೂರ್ಯ ಅವರನ್ನು ಆಯ್ಕೆ ಮಾಡಿದ್ದಾರೆ.

ಈ ಇಬ್ಬರು ಆರಂಭಿಕ ಆಟಗಾರರು ಏಕದಿನ ಕ್ರಿಕೆಟ್ ನಲ್ಲಿ ಯಾವ ರೀತಿ ತಂಡಕ್ಕೆ ಆರಂಭ ಒದಗಿಸಬೇಕು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿ ಕೊಂಡಿದ್ದಾರೆ. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿ, ಪುರುಷರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮೊದಲ ದ್ವಿಶತಕ ಬಾರಿಸಿರುವ, ಸಾವಿರಾರು ರನ್ ಗಳ ಸರದಾರ ಎಂದು ಶ್ಲಾಘಿಸಿದ್ದಾರೆ.

ಇನ್ನುಳಿದಂತೆ ನಾಲ್ಕನೇ ಕ್ರಮಾಂಕಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದಿಗ್ಗಜ ಬ್ರಿಯಾನ್ ಲಾರಾ ಅವರನ್ನು ಆಯ್ಕೆ ಮಾಡಿ, ಮುಂದಿನ ಕ್ರಮವಾಗಿ ಎರಡು ಸ್ಥಾನಗಳಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಕೆವಿನ್ ಪೀಟರ್ಸನ್ ಹಾಗೂ ಶ್ರೀಲಂಕಾ ತಂಡದ ದಿಗ್ಗಜ ಕುಮಾರ ಸಂಗಕ್ಕಾರ ರವರನ್ನು ಆಯ್ಕೆ ಮಾಡಿದ್ದಾರೆ.

ಏಕದಿನ ಕ್ರಿಕೆಟ್ ಪಂದ್ಯದ ಲೆಕ್ಕಾಚಾರದ ಪ್ರಕಾರ ಒಬ್ಬ ಫಾಸ್ಟ್ ಬೌಲರ್ ಆಲ್ರೌಂಡರ್ ಅನ್ನು ಆಯ್ಕೆ ಮಾಡಿರುವ ಶೇನ್ ವಾರ್ನ್ ರವರು ಇಂಗ್ಲೆಂಡ್ ತಂಡದ ಬಲಗೈ ಆಲ್ರೌಂಡರ್ ಆಂಡ್ರೂ ಫ್ಲಿಂಟಾಫ್ ಅವರನ್ನು ಆಯ್ಕೆ ಮಾಡಿದ್ದಾರೆ. ಡೇನಿಯಲ್ ವೆಟ್ಟೋರಿ ಇವರ ತಂಡದಲ್ಲಿ ಸ್ಥಾನ ಪಡೆದ ಏಕೈಕ ಸ್ಪಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.

ಫಾಸ್ಟ್ ಬೌಲರ್ ಗಳ ಕೋಟಾದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಶ್ರೇಷ್ಠ ಬುಲರ ಕರ್ಟ್ಲಿ ಆಂಬ್ರೋಸ್ ಅವರೊಂದಿಗೆ ಪಾಕಿಸ್ತಾನ ತಂಡದ ವಾಸಿಂ ಅಕ್ರಂ ಹಾಗೂ ಶೋಯಬ್ ಆಕ್ಟರ್ ಅವರನ್ನು ಆಯ್ಕೆ ಮಾಡಿದ್ದಾರೆ. ಒಟ್ಟಾರೆಯಾಗಿ ತಂಡ ಈ ಕೆಳಗಿನಂತಿದ್ದು, ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಸಂಪೂರ್ಣ ತಂಡವನ್ನು ನೋಡಿ ನೀವು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ. ವೀರೇಂದ್ರ ಸೆಹ್ವಾಗ್, ಸನತ್ ಜಯಸೂರ್ಯ, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಕೆವಿನ್ ಪೀಟರ್ಸನ್, ಕುಮಾರ್ ಸಂಗಕ್ಕಾರ (ಡಬ್ಲ್ಯೂಕೆ), ಆಂಡ್ರ್ಯೂ ಫ್ಲಿಂಟಾಫ್, ವಾಸಿಮ್ ಅಕ್ರಮ್, ಡೇನಿಯಲ್ ವೆಟ್ಟೋರಿ, ಶೋಯೆಬ್ ಅಖ್ತರ್, ಕರ್ಟ್ಲಿ ಆಂಬ್ರೋಸ್