2000 ಇಸವಿಯ ನಂತರದ ವರ್ಷಗಳ ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡವನ್ನು ಘೋಷಿಸಿದ ಸರ್ಕಲ್ ಆಫ್ ಕ್ರಿಕೆಟ್ ಸಂಸ್ಥೆ! ಸ್ಥಾನ ಪಡೆದವರು ಯಾರ್ಯಾರು ಗೊತ್ತಾ?

2000 ಇಸವಿಯ ನಂತರದ ವರ್ಷಗಳ ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡವನ್ನು ಘೋಷಿಸಿದ ಸರ್ಕಲ್ ಆಫ್ ಕ್ರಿಕೆಟ್ ಸಂಸ್ಥೆ! ಸ್ಥಾನ ಪಡೆದವರು ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತ ಕ್ರಿಕೆಟ್ ತಂಡವು 2000 ಇಸವಿಯ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಇದಕ್ಕೂ ಮುನ್ನ ಉತ್ತಮ ಪ್ರದರ್ಶನ ನೀಡಿದರೂ ಕೂಡ 2000 ರ ಇಸವಿಯ ನಂತರ ಭಾರತ ಒಮ್ಮೆಲೆ ಗೇರ್ ಬದಲಾಯಿಸಿತು ಎಂದರೇ ತಪ್ಪಾಗಲಾರದು.

ಇದೀಗ ಸರ್ಕಲ್ ಆಫ್ ಕ್ರಿಕೆಟ್ ಸಂಸ್ಥೆಯು 2000 ಇಸವಿಯ ನಂತರ ಆಟಗಾರರ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡು ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡವನ್ನು ಘೋಷಣೆ ಮಾಡಿದೆ. ಆರಂಭಿಕರಾಗಿ ಎಲ್ಲರೂ ಊಹೆ ಮಾಡಿದಂತೆ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಹಾಗೂ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಆಯ್ಕೆಯಾಗಿದ್ದಾರೆ.

ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಕ್ರಮಾಂಕಕ್ಕೆ ಯುವ ರನ್ ಮೆಷಿನ್ ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರು ಆಯ್ಕೆಯಾಗಿದ್ದರೇ ಅಂದು ಕೊಂಡಂತೆ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿ ರವರು ಆಯ್ಕೆಯಾಗಿದ್ದಾರೆ.

ಸ್ಪಿನ್ನರ್ ಕೋಟಾದಲ್ಲಿ ಹರ್ಭಜನ್ ಸಿಂಗ್ ರವರು ಆಯ್ಕೆಯಾಗಿದ್ದು ಮಧ್ಯಮ ಓವರ್ಗಳಲ್ಲಿ ರನ್ ರೇಟಿಗೆ ಕಡಿವಾಣ ಹಾಕುವಲ್ಲಿ ಇವರು ಪ್ರಸಿದ್ಧರು. ಇನ್ನು ವೇಗದ ಬೌಲರ್ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ರವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕ್ರೀಡಾಂಗಣದಿಂದ ಬಾಲನ್ನು ಹೊರಗೆ ಕಳುಹಿಸುವ ಜವಾಬ್ದಾರಿ ಇವರ ಹೆಗಲಿಗೆ ವಹಿಸಲಾಗಿದೆ.

ಪಾಂಡ್ಯ ರವರು ಮಧ್ಯಮ ವೇಗದ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವ ಮೂಲಕ ತಂಡದಲ್ಲಿ ಸಮತೋಲನ ಉಳಿಸಿಕೊಳ್ಳಲು ಭಾರತಕ್ಕೆ ಸಹಾಯ ಮಾಡುತ್ತಾರೆ ಎಂದು ಸರ್ಕಲ್ ಆಫ್ ಕ್ರಿಕೆಟ್ ಸಂಸ್ಥೆ ಸಮರ್ಥನೆ ಮಾಡಿಕೊಂಡಿದೆ. ಇನ್ನುಳಿದಂತೆ ವೇಗದ ಬೌಲರ್ ಗಳ ಕೋಟಾದಲ್ಲಿ ಅಜಿತ್ ಅಗರ್ಕರ್ ಹಾಗೂ ಜಹೀರ್ ಖಾನ್ ರವರು ಸ್ಥಾನ ಪಡೆದುಕೊಂಡಿದ್ದು, ತಂಡದ ಕೊನೆಯ ಆಟಗಾರನಾಗಿ ಯುವ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಸ್ಥಾನ ಪಡೆದು ಕೊಂಡಿದ್ದಾರೆ. ಈ ತಂಡವನ್ನು ಕಂಡ ಕೆಲವು ಅಭಿಮಾನಿಗಳು ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ರವರಂತಹ ದಿಗ್ಗಜ ನಾಯಕರನ್ನು ಆಯ್ಕೆ ಮಾಡಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಒಂದು ತಂಡದಲ್ಲಿ ಕೇವಲ ಹನ್ನೊಂದು ಆಟಗಾರರು ಇರಬೇಕು, ಎಂದು ಸರ್ಕಲ್ ಆಫ್ ಕ್ರಿಕೆಟ್ ಸಂಸ್ಥೆ ತನ್ನ ಆಯ್ಕೆಯನ್ನು ಸಮರ್ಥನೆ ಮಾಡಿಕೊಂಡಿದೆ. ಒಟ್ಟಾರೆಯಾಗಿ ಈ ತಂಡ ಕೆಳಗಿನಂತಿದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯುವರಾಜ್ ಸಿಂಗ್, ಎಂ.ಎಸ್. ಧೋನಿ (ಸಿ & ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ಅಜಿತ್ ಅಗರ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಜಸ್ಪ್ರೀತ್ ಬುಮ್ರಾ